ನವದೆಹಲಿ, ಆ.೯- ಸ್ಕೈರೂಟ್ ಏರೋಸ್ಪೇಸ್ ತನ್ನ ಶಕ್ತಿಶಾಲಿ ಕಲಾಂ ೧೨೦೦ ಘನ ರಾಕೆಟ್ ಮೋಟಾರ್, ವಿಕ್ರಮ್-೧ ಉಡಾವಣಾ ವಾಹನದ ಮೊದಲ ಹಂತ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಬೆಳಿಗ್ಗೆ ೯:೦೫ ಕ್ಕೆ ಉಡಾವಣಾ ಕೇಂದ್ರದಿಂದ ಸ್ಟ್ಯಾಟಿಕ್ ಟೆಸ್ಟ್ ಕಾಂಪ್ಲೆಕ್ಸ್‌ನಲ್ಲಿ ನಡೆಸಲಾದ ಪರೀಕ್ಷೆ ಯಶಸ್ವಿಯಾಗಿದ್ದು ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ನಿರ್ಮಿಸುತ್ತಿರುವ ವಿಕ್ರಮ್ -೧ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
ಇಸ್ರೋ ಪ್ರಕಾರ, ಕಲಾಂ ೧೨೦೦ ಮೋಟಾರ್ ೧೧ ಮೀಟರ್ ಉದ್ದ, ೧.೭ ಮೀಟರ್ ವ್ಯಾಸದ ಏಕಶಿಲೆಯ ಸಂಯೋಜಿತ ಮೋಟಾರ್ ಆಗಿದ್ದು, ಶ್ರೀಹರಿಕೋಟಾದ ಘನ ಪ್ರೊಪೆಲ್ಲಂಟ್ ಸ್ಥಾವರದಲ್ಲಿ ತಯಾರಾದ ಅತಿ ಉದ್ದದ ಏಕಶಿಲೆಯ ಮೋಟಾರ್ ಆಗಿದೆ ಎಂದು ಹೇಳಲಾಗಿದೆ.
ಪ್ರಯೋಗಕ್ಕಾಗಿ ಬಳಸಲಾಗುವ ವಿಶೇಷ ಪರೀಕ್ಷಾ ನಿಲುವನ್ನು ಸಹ ಇಸ್ರೋ ವಿನ್ಯಾಸಗೊಳಿಸಿದ್ದು ಸಾಧನೆ ಭಾರತ ಸರ್ಕಾರದ ಬಾಹ್ಯಾಕಾಶ ನೀತಿ ೨೦೨೩ಕ್ಕೆ ಅನುಗುಣವಾಗಿದೆ ಎಂದು ತಿಳಿಸಿದೆ.
ಭಾರತದ ಬಾಹ್ಯಾಕಾಶ ಆರ್ಥಿಕತೆಯನ್ನು ಹೆಚ್ಚಿಸಲು ಇಸ್ರೋದ ತಾಂತ್ರಿಕ ಮೂಲಸೌಕರ್ಯ ಮತ್ತು ಪರಿಣತಿಯನ್ನು ಬಳಸಲು ಪ್ರೋತ್ಸಾಹಿಸುತ್ತದೆ ಎಂದು ಇಸ್ರೋ ತಿಳಿಸಿದೆ.
ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಪ್ರತಿಕ್ರಿಯಿಸಿ ನಾಸಾ-ಇಸ್ರೋ ಜಂಟಿಯಾಗಿ ನಿರ್ಮಿಸಿದ ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಗ್ರಹದ ಯಶಸ್ವಿ ಉಡಾವಣೆಯಯ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಜಿಎಸ್ ಎಲ್ ವಿ ರಾಕೆಟ್ ಬಳಸಿ “ಇದುವರೆಗಿನ ಅತ್ಯಂತ ನಿಖರವಾದ ಉಡಾವಣೆಗಳಲ್ಲಿ ಒಂದಾಗಿದೆ” ಎಂದು ಹೇಳಿದ್ದಾರೆ.
























