ಸಂಜೆವಾಣಿ ವಾರ್ತೆ,
ವಿಜಯಪುರ,ಆ.೨:ಬೆಳಗಾವಿಯಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ‘ಓಪನ್ ಜುಡೋ ಚಾಂಪಿಯನ್‌ಶಿಪ್’ನಲ್ಲಿ ನಗರದ ವಿ. ಭ. ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ಕುಮಾರ ಮನು ಆರ್. ಖಾಡೆ ಜೂನಿಯರ್, ಕೆಡೆಟ, ಸೀನಿಯರ್ ಮೂರೂ ವಿಭಾಗಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾನೆ.
ಈ ವಿದ್ಯಾರ್ಥಿಯನ್ನು ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಾಜೇಶ ದರಬಾರ, ಗೌರವ, ಕಾರ್ಯದರ್ಶಿ ಪ್ರಕಾಶ ಎಸ್. ಉಡುಪಿಕರ, ಜಂಟಿ ಕಾರ್ಯದರ್ಶಿ ಸೋಮನಗೌಡ ಪಾಟೀಲ (ಸಾಸನೂರ) ಹಾಗೂ ಸಮನ್ವಯಾಧಿಕಾರಿ ಡಾ. ವ್ಹಿ. ಬಿ. ಗ್ರಾಮಪುರೋಹಿತ, ಪ್ರಾಚಾರ್ಯ ಟಿ. ಆರ್. ಕುಲಕರ್ಣಿ, ದೈಹಿಕ ಶಿಕ್ಷಣ ಉಪನ್ಯಾಸಕ ಗಣೇಶ ವಾಯ್, ಉಪನ್ಯಾಸಕರು ಹಾಗೂ ಸಮಸ್ತ ಸಿಬ್ಬಂದಿ ಅಭಿನಂದಿಸಿದ್ದಾರೆ.






























