ಜೀವರಕ್ಷಣೆಗೆ ಪ್ರಥಮ ಚಿಕಿತ್ಸೆ ಪೂರಕ: ಅಕ್ಕೋಣೆ

ಕಲಬುರಗಿ,ನ.28: ಅಪಘಾತ ಸೇರಿದಂತೆ ಇನ್ನಿತರ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿ ಬಳಲುತ್ತಿರುವ ಗಾಯಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿದರೆ ಒಂದು ಜೀವ ರಕ್ಷಣೆ ಮಾಡಿದಂತೆ ಆಗುತ್ತದೆ ಎಂದು ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ಸದಸ್ಯ ಅಪ್ಪಾರಾವ ಅಕ್ಕೋಣೆ ಹೇಳಿದರು.
ನಗರದ ಎಸ್. ಜಿ .ಎನ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ರೆಡ್ ಕ್ರಾಸ್ ಸಂಸ್ಥೆಕಲಬುರಗಿ ಘಟಕದ ಆಯೋಜಿಸಿದ ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ಕಲಬುರ್ಗಿ ರೆಡ್ ಕ್ರಾಸ್ ಸಮಿತಿಯ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ ಅವರು, ಅಪಘಾತವಾದ ಸಂದರ್ಭದಲ್ಲಿ ಗಾಯಳು ಆದ ವ್ಯಕ್ತಿಯ ವಿಡಿಯೋ ಮಾಡದೆ, ಅವರಿಗೆ ಪ್ರಥಮ ಚಿಕಿತ್ಸೆ ಮಾಡುವದು ಇಂದಿನ ಯುವಕರು ಕಲಿಯಬೇಕು ಎಂದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾರತೀಯರ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಲೋಯಿಯಾ ಅವರು ಮಾತನಾಡಿ, ವಿದ್ಯಾರ್ಥಿಗಳು ಪ್ರಥಮ ಚಿಕಿತ್ಸೆ ಮಹತ್ವವನ್ನು ತಿಳಿದುಕೊಂಡು ಗಾಯಾಳುಗಳಿಗೆ ಆಪ್ತರಕ್ಷಣೆ ನೀಡಬೇಕೆಂದು ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್ ಜಿ ಎನ್ ಸಂಸ್ಥೆಯ ಅಧ್ಯಕ್ಷ ಶಿವರಾಜ ಶೀಲವಂತ ಅವರು, ನೊಂದವರ ನೋವಿಗೆ ಇಂದಿನ ಯುವಕರು ಮತ್ತು ವಿದ್ಯಾರ್ಥಿಗಳು ಸ್ಪಂದಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ವೇದಿಕೆ ಮೇಲೆ ಭಾರತೀಯರ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಪ್ರತಿಮೆ ಚಿಕಿತ್ಸೆ ಉಪ ಸಮಿತಿಯ ಸಂಚಾಲಕ ಸುರೇಶ ಬಡಿಗೇರ, ಕಿರಿಯ ರೆಡ್ ಕ್ರಾಸ್ ಸಂಸ್ಥೆ ಸಂಚಾಲಕ ಕಲ್ಯಾಣಕುಮಾರ ಶೀಲವಂತ ಇದ್ದರು. ಪ್ರಥಮ ಚಿಕಿತ್ಸೆ ತರಬೇತುದಾರ ಡಾ. ಸಂಗಮೇಶ ಕೇರಿ ಪ್ರಥಮ ಚಿಕಿತ್ಸಾ ಜಾಗೃತಿ ಮೂಡಿಸಿದರು