
ಬೀದರ್: ನಗರದ ನೇಹರು ಸ್ಟೇಡಿಯಂ ಸಮೀಪದಲ್ಲಿರುವ ಗುರು ನಾನಕ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ, ಅಕ್ಟೋಬರ್ ೬ರಂದು ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಗಾಗಿ ಅಗ್ನಿ ಸುರಕ್ಷತೆ ಮತ್ತು ತುರ್ತು ಸೇವೆಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯವರು ಬೆಂಕಿ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನÉಚ್ಚರಿಕೆ ಕ್ರಮಗಳು, ಅಗ್ನಿ ಅವಘಡಗಳನ್ನು ತಡೆಗಟ್ಟುವ ವಿಧಾನಗಳು ಹಾಗೂ ತುರ್ತು ಸಂದರ್ಭದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗÉ ಹಾಗೂ ಸಿಬ್ಬಂದಿಗÉ ಮಾಹಿತಿ ನೀಡಿದರು.
ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ತುರ್ತು ಸೇವೆಗಳನ್ನು ಸಂಪರ್ಕಿಸುವ ವಿಧಾನ, ಸುರಕ್ಷಿತವಾಗಿ ಸ್ಥಳಾಂತರಗೊಳ್ಳುವ ಕ್ರಮಗಳು ಮತ್ತು ಅಗ್ನಿಶಾಮಕ ಉಪಕರಣಗಳ ಬಳಕೆ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಅರಿವು ಮೂಡಿಸಲಾಯಿತು.
ವಿವಿಧ ರೀತಿಯ ಬÉಂಕಿ ಅವಘಡಗಳಿಗÉ ಅನುಗುಣವಾಗಿ ಅಗ್ನಿಶಾಮಕ ಉಪಕರಣಗಳನ್ನು ಹೇಗÉ ಬಳಸಬೇಕು, ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಗ್ಯಾಸ್ ಸಿಲಿಂಡರ್ ಹಾಗೂ ಇತರ ಕಾರಣಗಳಿಂದ ಬÉಂಕಿ ಕಾಣಿಸಿಕೊಂಡಾಗ ಯಾವ ರೀತಿಯ ಮುನ್ನÉಚ್ಚರಿಕೆ ವಹಿಸಬೇಕು ಎಂಬುದನ್ನು ಸಿಬ್ಬಂದಿಯವರು ವಿವರಿಸಿದರು.
ಅಗ್ನಿ ಶಾಮಕ ಅಧಿಕಾರಿ ಪ್ರವೀಣ ಅವರು ಮಾತನಾಡುತ್ತ ಬÉಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಗಾಬರಿಯಾಗಬಾರದು, ಶಾಂತವಾಗಿ ವರ್ತಿಸುವುದು, ಲಿಫ್ಟ್ ಬಳಸದೆ ಸುರಕ್ಷಿತ ಮಾರ್ಗದ ಮೂಲಕ ಹೊರಬರುವುದು, ಶಾಲೆಯ ತುರ್ತು ನಿರ್ಗಮನ ದ್ವಾರಗಳನ್ನು ಬಳಸುವುದು ಹಾಗೂ ಇತರರನ್ನು ಸುರಕ್ಷಿತ ಸ್ಥÀಳಕ್ಕÉ ಸ್ಥಳಾಂತರಿಸಬೇಕು ಸೇರಿದಂತೆ ಹಲವು ಪ್ರಮುಖ ಸುರಕ್ಷತಾ ಕ್ರಮಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು. ಅಗ್ನಿ ಅವಘಡದ ಸಂದರ್ಭದಲ್ಲಿ ತಮ್ಮ ಸುರಕ್ಷತೆಯ ಜೊತೆಗÉ ಸಹಪಾಠಿಗಳು ಮತ್ತು ಇತರರ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸುವಂತೆ ಸಲಹೆ ನೀಡಿದರು. ಶಾಲೆಯಲ್ಲಿ ತುರ್ತು ಪರಿಸ್ಥಿತಿ ಎದುರಾದಾಗ ಶಿಕ್ಷಕರು ಮತ್ತು ಸಿಬ್ಬಂದಿಯವರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕರೆ ಕೊಟ್ಟರು.
ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉತ್ಸಾಹದಿಂದ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ, ತಮ್ಮ ಪ್ರಶ್ನೆಗಳಿಗÉ ಅಗ್ನಿಶಾಮಕ ಸಿಬ್ಬಂದಿಯಿAದ ಉತ್ತರಗಳನ್ನು ಪಡೆದರು.
ಶಾಲೆಯ ಪ್ರಾಂಶುಪಾಲೆ ನಲಿನಿ ಡಿ.ಜಿ. ಮಾತನಾಡುತ್ತ ಆವರಣದಲ್ಲಿ ಅಗ್ನಿ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದು ವಿದ್ಯಾರ್ಥಿಗಳಲ್ಲಿ ಸುರಕ್ಷತಾ ಅರಿವು ಬÉಳÉಸುವುದರ ಜೊತೆಗÉ, ತುರ್ತು ಸಂದರ್ಭಗಳಲ್ಲಿ ಸೂಕ್ತವಾಗಿ ಮತ್ತು ಸಮಯೋಚಿತವಾಗಿ ಪ್ರತಿಕ್ರಿಯಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಗ್ನಿ ಶಾಮಕದಳದ ಅಧಿಕಾರಿ ಪ್ರವೀಣ, ಚಾಂದಮಿಯ್ಯಾ, ಇಬ್ರಾಹಿಂ, ಮುಕಿಮ್, ವಿಜಯಕುಮಾರ, ಶಾಲೆಯ ಪ್ರಾಂಶುಪಾಲರು ನಲಿನಿ ಡಿ.ಜಿ. ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.




















