ಅಗ್ನಿ ಅವಘಡ : ಸರ್ಕಾರದ ನಿವೇಶನದಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಳ್ಳಲು ಅವಕಾಶ ಕಲ್ಪಿಸುವಂತೆ ಒತ್ತಾಯ

ಔರಾದ್ : ಜ.14:ಅಗ್ನಿ ಅವಘಡದಲ್ಲಿ 11 ಅಂಗಡಿಗಳಿಗೆ ಬೆಂಕಿ ತಗಲಿ ಅಪಾರ ಪ್ರಮಾಣದಲ್ಲಿ ವ್ಯಾಪರಸ್ಥರ ಸಾಮಗ್ರಿಗಳು ಸುಟ್ಟು ಭಸ್ಮವಾಗಿದೆ. ಕೂಡಲೇ ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ಅಂಗಡಿಗಳ ಮಾಲೀಕರಿಗೆ ತಾತ್ಕಾಲಿಕವಾಗಿ ಸರ್ಕಾರದ ನಿವೇಶನದಲ್ಲಿ ಅಂಗಡಿಗಳು ಹಾಕಿಕೊಳ್ಳಲು ತಾಲೂಕು ಆಡಳಿತ ಸಹಕರಿಸಬೇಕೆಂದು ಲಿಂಗಾಯತ ಸಮಾಜ ಯುವ ಸಂಘದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಈ ಕುರಿತು ಮಂಗಳವಾರ ತಹಸೀಲ್ದಾರ ಮಹೇಶ ಪಾಟೀಲ ಅವರಿಗೆ ಮನವಿಪತ್ರ ಸಲ್ಲಿಸಿದರು. ಬೆಂಕಿಗೆ ಭಸ್ಮವಾಗಿರುವ ಅಂಗಡಿಗಳ ಮಾಲೀಕರಿಗೆ ರಿಂಗ್ ರಸ್ತೆಯಲ್ಲಿರುವ ಸರ್ಕಾರಿ ನಿವೇಶನದಲ್ಲಿ ತಾತ್ಕಾಲಿಕವಾಗಿ ಒಂದು ವರ್ಷ ಶೆಡ್ ನಲ್ಲಿ ಅಂಗಡಿಗಳು ನಡೆಸಿಕೊಳ್ಳಲು ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯತಿ ಸಹಕರಿಸಬೇಕು ಎಂದು ಮನವಿ ಮಾಡಿದರು. ಉದಗೀರ್ ರಿಂಗ್ ರಸ್ತೆಯಲ್ಲಿರುವ ಬಾಂಡೆ, ಚಪ್ಪಲಿ, ಕಿರಾಣಾ ಅಂಗಡಿಗಳು ಸಂಪೂರ್ಣವಾಗಿ ಸುಟ್ಟಿ ಹೋಗಿವೆ. ಇದರಿಂದ ವ್ಯಾಪಾರಸ್ಥರ ಕುಟುಂಬಗಳು ಬೀದಿಗೆ ಬಂದಿವೆ. ನಿತ್ಯಯೊಬ್ಬರಂತೆ ರಾಜಕೀಯ ಮುಖಂಡರು, ಪ್ರತಿನಿಧಿಗಳು ಸಾಂತ್ವನ ಹೇಳಲು ಅಂಗಡಿಗಳಿಗೆ ಭೇಟಿ ನೀಡುತ್ತಿದ್ದಾರೆ. ಎಲ್ಲರೂ ಪಕ್ಷ ಭೇದ ಮರೆತು ಸಂಕಷ್ಟ ದಲ್ಲಿರುವ ವ್ಯಾಪಾರಸ್ಥರಿಗೆ ಒಂದು ವರ್ಷಗಳ ಕಾಲ ಅವರಿಗೆ ಶೆಡ್ ಹಾಕಿಕೊಂಡು ವ್ಯಾಪಾರ ಮಾಡಲು ಸಹಕರಿಸಬೇಕು. ಇದಕ್ಕೆ ತಾಲೂಕು ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂಧರ್ಭದಲ್ಲಿ ಲಿಂಗಾಯತ ಸಮಾಜ ಯುವ ಸಂಘದ ತಾಲೂಕು ಅಧ್ಯಕ್ಷ ವಿರೇಶ ಅಲಮಾಜೆ, ಪ್ರಮುಖರಾದ ಶಿವು ಗಿರಣೆ, ಸಂದೀಪ ಮೀಸೆ, ಶಿವಕುಮಾರ ಗಿರಣೆ, ಅನಿಲ ಕರಂಜೆ, ಸಂಜುಕುಮಾರ ನೌಬಾದೆ, ಅಶೋಕ ಶೆಂಬೆಳ್ಳಿ, ಈಶ್ವರ ಚಿಟಮೇ, ಬಾಲಾಜಿ ದಾಮಾ, ವಿರೇಶ ಮೀಸೆ, ಆನಂದ ದ್ಯಾಡೆ, ಆಕಾಶ ಎಡವೆ, ಅಶೋಕ ಶೆಂಬೆಳ್ಳಿ, ಮಹಾದೇವ ಸೇರಿದಂತೆ ಅನೇಕರಿದ್ದರು