ಭ್ರೂಣ ಲಿಂಗಪತ್ತೆ ಕಾಯ್ದೆ ರೇಡಿಯಾಲಜಿ ವೈದ್ಯಕೀಯ ಸೇವೆಯ ಅವಿಭಾಜ್ಯ

ತುಮಕೂರು, ಆ. ೨೯- ಇತ್ತೀಚಿನ ದಿನಗಳಲ್ಲಿ ಪ್ರಸ್ತವ ಪೂರ್ವ ಭ್ರೂಣ ಲಿಂಗಪತ್ತೆ ಕಾಯ್ದೆ ರೇಡಿಯಾಲಜಿ ವೈದ್ಯಕೀಯ ಸೇವೆಯ ಅವಿಭಾಜ್ಯ ಅಂಗವಾಗಿದೆ. ಆಧುನಿಕ ವೈದ್ಯಕೀಯ ಜಗತ್ತಿನಲ್ಲಿ ಚಿಕಿತ್ಸೆಗಳ ನಿರ್ಧಾರ ಮಾಡುವಾಗ ಮತ್ತು ರೋಗ ಪತ್ತೆ ಹಚ್ಚುವಲ್ಲಿ ರೇಡಿಯಾಲಜಿ ಮಹತ್ತರವಾದ ಪಾತ್ರ ವಹಿಸುತ್ತಿವೆ. ಎಲ್ಲ ರೇಡಿಯಾಲಜಿಸ್ಟ್ ಮತ್ತು ವೈದ್ಯರುಗಳು ಕಾಯ್ದೆಯಲ್ಲಿ ಅಂಶಗಳನ್ನು ತಮ್ಮ ಕರ್ತವ್ಯದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಸ್ಕ್ಯಾನಿಂಗ್ ಸೆಂಟರ್‌ಗಳು ನಿಯಮಗಳನ್ನು ಕಟ್ಟನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ.ವಿಯ ಅಶೋಕ್ ಹೇಳಿದರು.


ನಗರದ ಅಗಲಕೋಟೆಯ ಶ್ರೀಸಿದ್ದಾರ್ಥ ಉನ್ನತ ಶಿಕ್ಷಣ ಅಕಾಡೆಮಿ, ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ನೆಲಮಂಗಲದ ಟಿ. ಬೇಗೂರು ಶ್ರೀಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆ, ಇಂಡಿಯನ್ ರೇಡಿಯೋಲಜಿಕಲ್ ಅಂಡ್ ಇಮೇಜಿಂಗ್ ಅಸೋಸಿಯೇಷನ್ ಕರ್ನಾಟಕ ರಾಜ್ಯ ಘಟಕದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರೇಡಿಯೋ ಡಯಾಗ್ನೇಸಿಸ್ ವಿಭಾಗದಿಂದ ಶಿಶು ವೈದ್ಯಶಾಸ್ತ್ರ ಎಂಬ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು
ಸಮಾಜದಲ್ಲಿನ ಲಿಂಗ ತಾರತಮ್ಯವನ್ನು ಕಡೆಗಣಿಸಬೇಕು. ಉದಾಹರಣೆಗೆ ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ಲಿಂಗ ತಾರತಮ್ಯದಿಂದ ಬಹುಪತ್ನಿತ್ವ ಹೊಂದಿದೆ, ಅದನ್ನು ಹೋಗಲಾಡಿಸಬೇಕು ಎಂದರು.


ಇತ್ತೀಚಿನ ದಿನಗಳಲ್ಲಿ ಸ್ಪರ್ಧಾತ್ಮಕ ಯುಗದಲ್ಲಿ ಐ.ಎ.ಎಸ್, ಐ.ಪಿ.ಎಸ್, ಕೆ.ಎ.ಎಸ್ ಅತಿ ಹೆಚ್ಚು ಸಂಖ್ಯೆಯಲ್ಲಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಅವರು ಹೇಳಿದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ.ಕೆ.ವಸಂತ್‌ಕುಮಾರ್ ಮಾತನಾಡಿ, ವೈದ್ಯಕೀಯ ಕಾಲೇಜುಗಳಲ್ಲಿ ಇಂತಹ ಕಾರ್ಯಾಗಾರಗಳು ಮತ್ತು ಚಿಂತನೆಗಳು ರೇಡಿಯಾಲಜಿಶಾಸ್ತ್ರದ ಬೆಳವಣಿಗಳು ಬಹು ಮುಖ್ಯವಾಗಿರುತ್ತದೆ. ಹೆಚ್ಚು ರೀತಿಯ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸೆಮಿನಾರ್, ಕಾರ್ಯಾಗಾರಗಳು, ಇತಂಹ ಹೆಚ್ಚು ಅರಿವು ಮೂಡಿಸಬೇಕು. (ಪಿಸಿಪಿಎನ್‌ಡಿಟಿ) ಗರ್ಭಧಾರಣೆಯ ಪೂರ್ವ ಮತ್ತು ಪ್ರಸವ ಪೂರ್ವ ರೋಗನಿರ್ಣಯ ತಂತ್ರಗಳ ಕಾಯಿದೆಯಾಗಿದೆ. ಈ ಕಾಯಿದೆಯನ್ನು ಭಾರತದಲ್ಲಿ ಹೆಣ್ಣು ಭ್ರೂಣ ಹತ್ಯೆಗಳನ್ನು ನಿಲ್ಲಿಸಲು ಮತ್ತು ಕ್ಷೀಣಿಸುತ್ತಿರುವ ಲಿಂಗ ಅನುಪಾತವನ್ನು ತಡೆಯಲು ಜಾರಿಗೆ ತರಲಾಗಿದೆ. ಪ್ರಸವ ಪೂರ್ವ ಲಿಂಗ ನಿರ್ಣಯವನ್ನು ನಿಷೇಧಿಸಲಾಗಿದೆ. ಪಿಸಿಪಿಎನ್‌ಡಿಟಿ ಮತ್ತು ಪೋಕ್ಸೋ ಕಾಯಿದೆಗಳ ಬಗ್ಗೆ ಸ್ವವಿಸ್ತಾರವಾಗಿ ವಿವರಿಸಿದರು.


ಶ್ರೀ ಸಿದ್ದಾರ್ಥ ಉನ್ನತ ಶಿಕ್ಷಣ ಅಕಾಡೆಮಿಯ ಪರೀಕ್ಷೆಯ ನಿಯಂತ್ರಕ ಡಾ.ಜಿ.ಗುರುಶಂಕರ್ ಮಾತನಾಡಿ, ವೈದ್ಯಕೀಯ ಸಂಸ್ಥೆಯು ಇಂತಹ ಕಾರ್ಯಾಗಾರವನ್ನು ಕೈಗೊಂಡಿರುವುದು ಉತ್ತಮ ಉದ್ದೇಶವಾಗಿದೆ. ತಾಯಿ ಮತ್ತು ಮಗುವಿನ ಉತ್ತಮ ಬೆಳವಣಿಗೆಯೂ ಉತ್ತಮ ಸಹಕಾರಿಯಾಗಿರುತ್ತದೆ. ಏಕೆಂದರೆ ಭ್ರೂಣ (ಶಿಶುವಿನ) ತಾಯಿಯ ಗರ್ಭದಲ್ಲಿ ಬೆಳೆಯುತ್ತರುವ ಅನೇಕ ವೈಕಲ್ಯಗಳು ಮತ್ತು ಕಾಯಿಲೆಗಳು ಮಗುವು ಹುಟ್ಟಿದ ನಂತರ ತಿಳಿಯುತ್ತದೆ. ಆದ್ದರಿಂದ ಕುಟುಂಬಕ್ಕೆ ಆಗಾಧಕಾರಿ ಅಂಶವಾಗಿರುತ್ತದೆ.

ಶಿಶುವಿನ ಅಂಗವೈಕಲ್ಯ ಮತ್ತು ಕಾಯಿಲೆಗಳನ್ನು ಗುರುತಿಸಿ ಅಲ್ಟ್ರಾಸೌಂಡ್ ರೇಡಿಯಾಲಜಿಗಳಿಂದ ಇತರೆ ಪತ್ತೆ ಹೆಚ್ಚುವ ವಿಧಾನದ ಮೂಲಕ ಅದನ್ನು ಗುರುತಿಸಿ ಗರ್ಭದಲ್ಲಿಯೇ ಈ ವೈಕಲ್ಯಗಳನ್ನು ಸರಿಪಡಿಸಿ ಉತ್ತಮಪಡಿಸಿದ್ದಲ್ಲಿ ಸಮಾಜಕ್ಕೆ ವೈದ್ಯರು ಕೊಡುವ ಉತ್ತಮ ಕೊಡುಗೆಯಾಗಿದೆ ಎಂದರು.


ಡಾ.ರವಿಲಿಂಗಪ್ಪ ಮಾತನಾಡಿ, ಸಮಾಜ ಆರೋಗ್ಯವಂತ ಮಕ್ಕಳು ಜನಿಸಿದರೆ ಮುಂದಿನ ಪೀಳಿಗೆಯನ್ನು ಉತ್ತಮಪಡಿಸಲು ಸಹಕಾರಿಯಾಗುತ್ತದೆ ಎಂದರು.


ಇದೇ ಸಂದರ್ಭದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಶೋಕ್‌ಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಡಾ.ಕೆ.ವಸಂತ್‌ಕುಮಾರ್, ಶ್ರೀಸಿದ್ದಾರ್ಥ ಉನ್ನತ ಶಿಕ್ಷಣ ಅಕಾಡೆಮಿಯ ಪರೀಕ್ಷೆಯ ನಿಯಂತ್ರಕರಾದ ಡಾ.ಜಿ.ಗುರುಶಂಕರ್ ರವರನ್ನು ಸನ್ಮಾನಿಸಲಾಯಿತು.


ಕಾರ್ಯಾಗಾರದಲ್ಲಿ ಶ್ರೀ ಸಿದ್ದಾರ್ಥ ವೈದ್ಯಕೀಯ ಉಪಪ್ರಾಂಶುಪಾಲರಾದ ಜಿ.ಎನ್.ಪ್ರಭಾಕರ್, ಶ್ರೀ ಸಿದ್ದಾರ್ಥ ವೈದ್ಯಕೀಯ ಅಧೀಕ್ಷಕರಾದ ಡಾ.ಹೆಚ್.ಆರ್.ರಾಜೇಶ್ವರಿ ದೇವಿ, ವಿಜಯಸಾರಥಿ, ಡಾ.ಪ್ರಕಾಶ್, ಹಿರಿಯ ರೇಡಿಯಾಲಜಿಸ್ಟ್‌ರಾದ ಡಾ.ಕೊಟ್ಟೂರು, ಡಾ. ಆನಂದ್‌ಎಸ್.ಹೆಚ್. ಸೇರಿದಂತೆ ಜಿಲ್ಲೆಯ ರೇಡಿಯಾಲಜಿಸ್ಟ್ ಹಾಗೂ ಶ್ರೀಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.