ಸಂಭ್ರಮದ ತೆಪ್ಪೋತ್ಸವ


ಮುನವಳ್ಳಿ,ಜ.೧೫: ಪಟ್ಟಣದ ಶಿಂದೋಗಿ-ಮುನವಳ್ಳಿಯ ಶ್ರೀ ಕುಮಾರೇಶ್ವರ ಆಲೂರಮಠದ ವತಿಯಿಂದ ಮಲಪ್ರಭಾ ನದಿಯಲ್ಲಿ ಮಕರ ಸಂಕ್ರಮಣದ ಅಂಗವಾಗಿ ಬುಧವಾರ ಸಂಜೆ ತೆಪ್ಪೋತ್ಸವ ವಿಜೃಂಭಣೆಯಿAದ ಜರುಗಿತು.


ತೆಪ್ಪೋತ್ಸವದ ತೇರಿನಲ್ಲಿ ಹುಬ್ಬಳ್ಳಿ ಮೂರುಸಾವಿರಮಠದ ಡಾ|| ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಆಸೀನರಾಗಿ ಭಕ್ತರಿಗೆ ದರ್ಶನಾಶೀರ್ವಾದ ನೀಡಿದರು.
ಸೋಮಶೇಖರಮಠದ ಶ್ರೀ ಮುರುಘೇಂದ್ರ ಸ್ವಾಮೀಜಿ, ಶಿಂದೋಗಿಯ ಮಡಿವಾಳಯ್ಯಸ್ವಾಮಿ ಹಿರೇಮಠ, ಹಾಗೂ ಶಿಂದೋಗಿ-ಮುನವಳ್ಳಿ ಸಮಸ್ತ ಸದ್ಭಕ್ತರು ಉಪಸ್ಥಿತರಿದ್ದರು. ಉತ್ತತ್ತಿ ಹಾಗೂ ಬಾಳೆಹಣ್ಣುಗಳನ್ನು ತೆಪ್ಪದತ್ತ ಭಕ್ತರು ಭಕ್ತಿಭಾವದಿಂದ ಹಾರಿಸುತ್ತಿದ್ದರು.


ತೆಪ್ಪೋತ್ಸವದ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ ಉತ್ಸವ ಜರುಗಿತು.