Home ಜಿಲ್ಲೆ ಸಂಭ್ರಮದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ

ಸಂಭ್ರಮದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ

ಬೀದರ್:ಮಾ.೧೦: ತಾಲ್ಲೂಕಿನ ಸೋಲಪುರ ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಭಾನುವಾರ ಸಂಭ್ರಮ, ಸಡಗರದಿಂದ ನಡೆಯಿತು.
ಜಾತ್ರೆ ನಿಮಿತ್ತ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಅಭಿಷೇಕ, ವಿಶೇಷ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆ, ಭಕ್ತಿಯಿಂದ ಜರುಗಿದವು.
ಗ್ರಾಮದ ಹನುಮಾನ ಮಂದಿರದಿAದ ಬೀರಲಿಂಗೇಶ್ವರ ಮಂದಿರದ ವರೆಗೆ ಅಲಂಕೃತ ವಾಹನದಲ್ಲಿ ಬೀರಲಿಂಗೇಶ್ವರ ಭಾವಚಿತ್ರ ಹಾಗೂ ಶಿವಯೋಗಿ ಮಚ್ಚೇಂದ್ರನಾಥ ಮಹಾರಾಜರ ಭವ್ಯ ಮೆರವಣಿಗೆ ನಡೆಯಿತು.
ಡೊಳ್ಳು ಕುಣಿತ, ಕೋಲಾಟ ಮೆರವಣಿಗೆಗೆ ಕಳೆ ತಂದುಕೊಟ್ಟವು. ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ ಭಕ್ತರ ಮನ ತಣಿಸಿದವು.
ಶಿವಯೋಗಿ ಮಚ್ಚೇಂದ್ರನಾಥ ಮಹಾರಾಜರು ಪ್ರವಚನ ನೀಡಿದರು. ಬಾಬುರಾವ್ ಗುರೂಜಿ, ವೀರಶೆಟ್ಟಿ ಪಾಟೀಲ, ಚಂದು ಚಟ್ನೋರೆ, ನರಸಪ್ಪ ಅಮೀತ್, ಓಂಕಾರ ವಿಶ್ವನಾಥ, ಸಿದ್ದು, ಸಂಜು, ಮಲ್ಲಿಕಾರ್ಜುನ, ಅಶೋಕ, ತುಕಾರಾಮ, ಶಿವಕುಮಾರ ಗಣಪತಿ ವಗ್ಗೆ ಮತ್ತಿತರರು ಇದ್ದರು.
ಶಿವು ಶಹಾಪುರೆ ನಿರೂಪಿಸಿದರು. ರಾಜಗೊಂಡ ವಂದಿಸಿದರು.