Home ಜಿಲ್ಲೆ ಜಾತ್ರೆ ಉತ್ಸವ ಆಚರಣೆಯಿಂದ ಸಂಕಷ್ಟಗಳು ದೂರ:ರಾಜುಗೌಡ

ಜಾತ್ರೆ ಉತ್ಸವ ಆಚರಣೆಯಿಂದ ಸಂಕಷ್ಟಗಳು ದೂರ:ರಾಜುಗೌಡ

ತಾಳಿಕೋಟೆ:ಫೆ.6: ಪುರಾತನ ಕಾಲದಿಂದಲೂ ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಜಾತ್ರೆ ಉತ್ಸವಗಳ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಯಿಂದ ಎಲ್ಲರಲ್ಲಿಯೂ ಸಹೋದರತೆ ಭಾವನೆ ಮೂಡಿಸುವದರೊಂದಿಗೆ ಬರುವ ಸಂಕಷ್ಟಗಳು ದೂರಾಗಲಿವೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಅವರು ಹೇಳಿದರು.
ಗುರುವಾರರಂದು ತಾಲೂಕಿನ ಭಂಟನೂರ ಗ್ರಾಮದಲ್ಲಿ ಶ್ರೀ ಗ್ರಾಮದೇವತೆ ಜಾತ್ರಾ ಮಹೋತ್ಸವ ಅಂಗವಾಗಿ ಸಾಗಿಬಂದ ಪ್ರವಚನ ಮಂಗಲ ಹಾಗೂ ಧರ್ಮಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ಧಾರ್ಮಿಕ ಕಾರ್ಯಕ್ರಮ ಜಾತಿ ಬೇದಗಳೆನ್ನದೇ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಆಚರಿಸಿಕೊಂಡು ಬರುವದರಿಂದ ಮನುಷ್ಯನಲ್ಲಿ ಅಸುಹ್ಯ ದ್ವೇಷ ಭಾವನೆಗಳು ದೂರಾಗಲಿವೆ ಸಹೋದರತೆ ಪ್ರೀತಿ ಬಾಂದವ್ಯಗಳು ಕಾಣಲಿದ್ದೇವೆ ಭಂಟನೂರ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಆಚರಿಸಲಾಗುವ ಶ್ರೀ ಗ್ರಾಮದೇವತೆ ಜಾತ್ರಾ ಮಹೋತ್ಸವವು ಎಲ್ಲರೂ ಒಗ್ಗಡಿ ಒಂದೇ ಎಂಬ ಭಾವನೆಯೊಂದಿಗೆ ಅತ್ಯಂತ ಸಂಭ್ರಮದಿಂದ ಆಚರಿಸುತ್ತಿರುವದು ಸಂತಸದ ಸಂಗತಿಯಾಗಿದೆ ಈ ಗ್ರಾಮದ ಅಭಿವೃದ್ದಿಗೆ ಈಗಾಗಲೇ ಕೆಲವು ರಸ್ತೆ, ದೇವಸ್ಥಾನ ಒಳಗೊಂಡು ಇನ್ನಿತರ ಕಾರ್ಯಗಳನ್ನು ಕೈಗೊಂಡಿದ್ದು ಗ್ರಾಮಸ್ಥರ ಅಪೇಕ್ಷೆಯಂತೆ ಗ್ರಾಮದೇವಿ ದೇವಸ್ಥಾನದ ಮುಂದಿನ ಸಭಾ ಭವನದ ಮೇಲ್ಗಡೆ ಕಟ್ಟಡಕ್ಕೆ ಅನುದಾನ ಒದಗಿಸುವದರೊಂದಿಗೆ ಕೆಲಸ ಮಾಡಿಕೊಡುವದಾಗಿ ಬರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ) ಅವರು ಮಾತನಾಡಿ ಇಂದಿನ ತಾಯಂದಿರರು ಜಾತ್ರೆ ಉತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮ ಪುರಾಣ ಪ್ರವಚನಗಳ ಕಡೆಗೆ ಲಕ್ಷ ಕೊಡದೇ ದಾರವಾಹಿಗಳ ಕಡೆಗೆ ವಾಲುತ್ತಿರುವದು ಆತಂಕಕಾರಿ ಸಂಗತಿಯಾಗಿದೆ ನಮ್ಮ ದೇಶದ ಸಂಸ್ಕøತಿ ಆಚಾರ ವಿಚಾರಗಳು ಸಿಗುವದು ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದಾಗಿದೆ ಶ್ರೀ ಗ್ರಾಮದೇವತೆ ಜಾತ್ರಾ ಉತ್ಸವವನ್ನು ಯಾವುದೇ ಜಾತಿ ಧರ್ಮಕ್ಕೆ ಅಂಟಿಕೊಳ್ಳಲಾರದೇ ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ತಮ್ಮ ಸೇವೆಯನ್ನು ಶ್ರೀದೇವಿಗೆ ಸಲ್ಲಿಸಿ ಆಚರಿಸಿಕೊಂಡು ಬರುತ್ತಿರುವದು ಶ್ಲಾಘನೀಯವಾಗಿದೆ ಗ್ರಾಮಸ್ಥರಲ್ಲಿ ಒಗ್ಗಟ್ಟು ಎಂಬುದು ಇದ್ದರೆ ಗ್ರಾಮದ ಅಭಿವೃದ್ದಿಯಾಗಲು ಸಾದ್ಯವಾಗಲಿ ಎಲ್ಲರೂ ಒಂದೇ ಕುಟುಂಭದವರಂತೆ ಆಚರಿಸಿರುವ ಈ ಜಾತ್ರೆಗೆ ಮೇರಗನ್ನು ಹೆಚ್ಚಿಸಲು ಕಾರಣವಾಗಿದೆ ಎಂದರು.
ಇನ್ನೋರ್ವ ದೇವರ ಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಮುಖಂಡ ಜಿಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ(ಯಡಿಯಾಪೂರ) ಅವರು ಮಾತನಾಡಿ ಶ್ರೀ ಗ್ರಾಮದೇವತೆ ಜಾತ್ರಾ ಉತ್ಸವವು ಆಚರಿಸುವದು ಗ್ರಾಮದಲ್ಲಿ ಯಾವುದೇ ಕಾಯಿಲೆಗಳು ಮತ್ತು ಕೆಟ್ಟ ಪರಿಣಾಮಗಳು ಬೀರದಿರಲಿ ಎಂಬ ಉದ್ದೇಶದಿಂದ ಹಿಂದಿನಿಂದಲೂ ಹಿರಿಯರು ಆಚರಿಸಿಕೊಂಡು ಬಂದಿದ್ದಾರೆ ಜಾತ್ರೆ ಉತ್ಸವಗಳಲ್ಲಿ ಎಲ್ಲರೂ ಒಗ್ಗಡಿ ಆಚರಿಸುವದರೊಂದಿಗೆ ಪರಸ್ಪರ ದ್ವೇಷ ಭಾವನೆಗಳು ಕಡಿಯಾಗುವದರ ಜೊತೆಗೆ ಎಲ್ಲರನ್ನು ಒಂದುಗೂಡಿಸುವಂತಹ ಕಾರ್ಯವಾಗಲಿದೆ ಮುಂದಿನ ದಿನಗಳಲ್ಲಿ ಈ ಜಾತ್ರಾ ಉತ್ಸವವು ತಾಲೂಕಿನಲ್ಲಿಯೇ ಮಾದರಿಯ ಜಾತ್ರೆ ಉತ್ಸವ ಆಗಲಿ ಎಂದು ಆಶಿಸಿದರು.
ಕಾರ್ಯಕ್ರಮದ ಸಾನಿದ್ಯ ವಹಿಸಿದ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಜಾತ್ರೆ ಉತ್ಸವಗಳ ಆಚರಣೆಯಿಂದ ಸಮಾಜದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ ಸಮಾಜದಲ್ಲಿ ಸಾಮರಸ್ಯ ಭಾವನೆ ಎಂಬುದು ಮೂಡಲಿದೆ ಈ ಉತ್ಸವದಲ್ಲಿ ಪ್ರವಚನವನ್ನು ಆಯೋಜಿಸುವದರೊಂದಿಗೆ ಗ್ರಾಮದಲ್ಲಿಯ ಅಜ್ಞಾನದ ಕತ್ತಲೆ ಹೋಗಲಾಡಿಸುವದರೊಂದಿಗೆ ಜ್ಞಾನದ ಬೆಳಕನ್ನು ಮೂಡಿಸುವಂತಹ ಕಾರ್ಯ ಗ್ರಾಮಸ್ಥರರು ಮಾಡಿರುವದು ಮೇಚ್ಚುವಂತಹ ಕಾರ್ಯವಾಗಿದೆ ಎಂದರು.
ಕಲಕೇರಿ ಹಿರೇಮಠದ ಶ್ರೀ ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಮಹಾಂತಯ್ಯ ದೇವರು, ಶಿವಶರಣೆ ಕಾಶಿಬಾಯಿ ಅಮ್ಮನವರು, ಶರಣೆ ಸರೋಜಮ್ಮತಾಯಿ ಅವರು ಹಾಗೂ ಕೆಪಿಸಿಸಿ ಮಾಜಿ ಸದಸ್ಯ ಸುರೇಶಬಾಬುಗೌಡ ಬಿರಾದಾರ(ಫೀರಾಪೂರ) ಅವರು ಮಾತನಾಡಿದರು.
ವೇದಿಕೆಯ ಮೇಲೆ ವೇ.ಮಡಿವಾಳಯ್ಯ ಶಾಸ್ತ್ರೀಗಳು, ವೇ.ಅಮಯ್ಯಶಾಸ್ತ್ರೀ, ಸುನೀಲಗೌಡ ಪಾಟೀಲ, ಬಸವಂತ್ರಾಯಗೌಡ ನಾಡಗೌಡ(ಶಳ್ಳಗಿ), ಜಿಪಂ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ, ಮಡುಸಾಹುಕಾರ ಬಿರಾದಾರ, ವಿಶ್ವನಾಥರೆಡ್ಡಿ ನಾಡಗೌಡ, ಶಂಕರಗೌಡ ದೇಸಾಯಿ(ಶಳ್ಳಗಿ), ಸಾಯಬಣ್ಣ ಆಲ್ಯಾಳ, ಬಸವರಾಜ ನಾಯ್ಕಲ್, ಮೊದಲಾದವರು ಉಪಸ್ಥಿತರಿದ್ದರು.
ಬಸವಾರ ಭಂಟನೂರ ಗವಾಯಿ ಪ್ರಾರ್ಥಿಸಿದರು. ಅಮಯ್ಯಶಾಸ್ತ್ರೀ ನಿರೂಪಿಸಿದರು. ಬಸವರಾಜ ಸಿಂಗನಹಳ್ಳಿ ವಂದಿಸಿದರು.