Home ಜಿಲ್ಲೆ ಸನ್ಮಾನ ಸಮಾರಂಭ

ಸನ್ಮಾನ ಸಮಾರಂಭ


ಚನ್ನಮ್ಮನ ಕಿತ್ತೂರ,ಜು.೨೭: ನಾವೆಲ್ಲರೂ ನೆಮ್ಮದಿಯಿಂದಿರಲು ಕಾರಣಿಕರ್ತ ದೇಶ ಕಾಯುವ ರಕ್ಷಕ ಎಂದು ಹಿರೇನಂದಿಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಬಿ.ಸಿ.ಬಿದರಿ ಅಭಿಪ್ರಾಯಪಟ್ಟರು.
ತಾಲೂಕಿನ ನಿಚ್ಚಣಕಿ ಗ್ರಾಮದ ಮಡಿವಾಳೇಶ್ವರ ಮಠದಲ್ಲಿ ಏರ್ಪಡಿಸಿದ್ದ ಸೈನಿಕರಿಗೆ ಸನ್ಮಾನ, ೨೭ನೇ ಕಾರ್ಗಿಲ್ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿ ಮನೆಗೊಬ್ಬ ಯುವಕರು ದೇಶ ಸೇವೆಗೆ ಮುಂದಾಗಬೇಕೆAದು ಹೇಳಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಯೂರೇಟರ್ ರಾಘವೇಂದ್ರ ಕೇಂದ್ರ ಸರ್ಕಾರ ಅಗ್ನಿವೀರರಾಗಿ ಕಾರ್ಯನಿರ್ವಸುವವರಿಗೆ ಅನೇಕ ಸೌಲತ್ತುಗಳನ್ನು ನೀಡಿದೆ ಎಂದರು.
ಕಸಾಪ ಅಧ್ಯಕ್ಷ ಡಾ. ಎಸ್.ಬಿ.ದಳವಾಯಿ ಸಮಾರೋಪ ನುಡಿಯನ್ನಾಡಿದರು. ರಾಜು ಪರಮೇಶ್ವರ ತಿಳಗಂಜಿಯವರನ್ನು ಸನ್ಮಾನಿಸಲಾಯಿತು.


ಶ್ರೀ ಪಂಚಾಕ್ಷರಿ ಸ್ವಾಮಿಜಿ ಆರ್ಶೀವಚನ ನೀಡಿ ಮಾತನಾಡಿ ದೇಶಭಕ್ತಿ ಸಂಕೇತವಾಗಿ ಸೈನಿಕರಿಗೆ ಗೌರವ ಸಮರ್ಪಣೆ ಮಾಡಬೇಕಾದುದ್ದು ನಮ್ಮ ಕರ್ತವ್ಯ ಕಾರ್ಗಿಲ್ ವಿಯೋತ್ಸವವನ್ನು ಪ್ರತಿ ಗ್ರಾಮದಲ್ಲೂ ಆಚರಿಸಬೇಕು ಎಂದರು.


ಗ್ರಾಪA ಮಾಜಿ ಅಧ್ಯಕ್ಷ ರಮೇಶ ವರಗನ್ನವರ ಸ್ವಾಗತಿಸಿದರು, ಶಿಕ್ಷಕ ಮಹೇಶ ಹೊಂಗಲ ವಂದಿಸಿದರು, ಗ್ರಂಥಪಾಲಕ ಬಸವರಾಜ ದಳವಾಯಿ ನಿರೂಪಿಸಿದರು, ಪತ್ರಕರ್ತ ಮಹಾಂತೇಶ ಕರಬಸನ್ನವರ, ಕುಮಾರ ಪರದೇಶಿ, ಮಾಜಿ ಸೈನಿಕ ಮಂಜುನಾಥ ಬೆಣ್ಣಿ, ಮಡಿವಾಳಯ್ಯ ಪೌರಾಣಿಕಮಠ, ಸೈನಿಕ ಅರುಣಕುಮಾರ ವರಗನ್ನವರ, ಬಾಬು ಗಾಳಿ, ರಾಜು ತಿಳಗಂಜಿ, ಕುಟುಂಬದ ಸದಸ್ಯರು, ಗ್ರಾಮಸ್ಥರು ಇತರರಿದ್ದರು.