
ಕಲಬುರಗಿ : ಕರ್ನಾಟಕ ಪ್ರದೇಶ ಬಂಜಾರ ಲಂಬಾಣಿ ಸೇವಾ ಸಂಘದ ರಾಜ್ಯ ಸಮಿತಿ, ಬೆಂಗಳೂರು ವತಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದಿರುವ ಡಾ. ಸಿದ್ದಯ್ಯ ನಾಯಕ್, ಡಾ. ಬಿ.ಬಿ. ನಾಯಕ್ ಹಾಗೂ ಡಾ. ಸುಭಾಷ್ ಚವಾಣ್ ಅವರನ್ನು ಭಾನುವಾರ ಬೆಂಗಳೂರಿನಲ್ಲಿರುವ ಬಂಜಾರ ಭವನದಲ್ಲಿ ಸನ್ಮಾನಿಸಲಾಯಿತು.
ಸಂಘದ ರಾಜ್ಯ ಸಮಿತಿ ಪದಾಧಿಕಾರಿಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಅಧ್ಯಕ್ಷರು ಸೇರಿದಂತೆ ಬಂಜಾರ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಗೌರವ ಡಾಕ್ಟರೇಟ್ ಪಡೆದ ಗಣ್ಯರಿಗೆ ಅಭಿನಂದನೆ ಸಲ್ಲಿಸಿದರು. ಸಮಾಜದ ಅಭಿವೃದ್ಧಿ, ಶಿಕ್ಷಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅವರು ಸಲ್ಲಿಸುತ್ತಿರುವ ಸೇವೆಯನ್ನು ಇದೇ ಸಂದರ್ಭದಲ್ಲಿ ಶ್ಲಾಘಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಅಧ್ಯಕ್ಷ ಡಾ. ಸಿದ್ದಯ್ಯ ನಾಯಕ್, ಉಪಾಧ್ಯಕ್ಷ ಶ್ರೀ ರಾಮದಾಸ್ ನಾಯಕ, ಎನ್.ಆರ್. ನಾಯಕ, ಧನಂಜಯ ನಾಯಕ, ಧರ್ಮರಾಜ ನಾಯಕ, ಬಲರಾಮ ನಾಯಕ, ಆರ್.ಬಿ. ನಾಯಕ, ಮಾದೇಶ್ ನಾಯಕ (ಕನಕಪುರ), ಮಹೇಶ್ ಚವಾಣ್, ಶೇಖರಪ್ಪ ನಾಯಕ, ಶೀಲಾ ನಾಯಕ, ಗಂಗಮ್ಮ ರಾಮನಾಯಕ, ಲಕ್ಷ್ಮಣ್ ಚವಾಣ್, ರವೀಂದ್ರಕುಮಾರ್ ರಾಠೋಡ, ಕಿಶನ್ ನಾಯಕ, ಕಮಲಾಕರ್ ವಿ. ರಾಠೋಡ, ರಾಮಚಂದ್ರ ಜಾಧವ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.





















