
ಕಮಲನಗರ:ಮಾ.23: ಮನುಷ್ಯನ ಬದುಕು ಕೇವಲ ಹಣವಿದ್ದರೆ ಸಾಲದು, ಬದಲಾಗಿ ಹಸಿದವನಿಗೆ ಅನ್ನ ನೀಡುವುದು, ಶ್ರೇಷ್ಠ ಧರ್ಮ ವಾಗಬೇಕು ಎಂದು ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ತಮಲೂರ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಮುಧೋಳ (ಬಿ) ಗ್ರಾಮದ ಮಹಾದೇವ ಮಂದಿರದಲ್ಲಿ ಮಹಾದೇವ ಜಾತ್ರಾ ಮಹೋತ್ಸವ’ ನಿಮಿತ್ಯ ನಡೆಯುತ್ತಿರುವ ‘ಅಖಂಡ ಹರಿನಾಮ ಸಪ್ತಾಹ’ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.
ಇಂದಿನ ದಿನಗಳಲ್ಲಿ ಮನುಷ್ಯ ಹಣದ ಹಿಂದೆ ಬಿದ್ದು ನೆಮ್ಮದಿ ಹಾಳು ಮಾಡಿಕೊಂಡಿದ್ದಾನೆ ನೆಮ್ಮದಿಯ ಬದುಕಿಗೆ ಹಣವೇ ಮೂಲವೆಂದು ತಿಳಿದುಕೊಂಡಿದ್ದಾರೆ ಅದೆಲ್ಲವನ್ನು ಬಿಟ್ಟು ಮನುಷ್ಯತ್ವದಿಂದ ಬದುಕಲು ಮನುಷ್ಯತ್ವನಾಗಿ ತಿಳಿದು ನಡೆಯಲು ಆಧ್ಯಾತ್ಮಿಕ ಚಿಂತನೆ ಮಾಡಬೇಕೆಂದು ತಿಳಿಸಿದರು.
ಆರೋಗ್ಯದ ಕಡೆ ನಿರ್ಲಕ್ಷ ವಹಿಸಿ ಬದುಕುತ್ತಿದ್ದಾರೆ.ಅದಕ್ಕಾಗಿ ಆರೋಗ್ಯ ಹಾಳು ಮಾಡಿಕೊಳ್ಳದೆ ಆರೋಗ್ಯವೇ ಭಾಗ್ಯ, ತಿಳಿದು, ನಡೆಯಲು ಆಧ್ಯಾತ್ಮಿಕ ಚಿಂತನೆ ಮಾಡಬೇಕೆಂದು ತಿಳಿಸಿದರು.ಎಷ್ಟೇ ಕೆಲಸಗಳಿದ್ದರೂ ಮೊದಲು ಶರೀರಕ್ಕೆ ಪೌಷ್ಟಿಕ ಆಹಾರ ನೀಡುವುದನ್ನು ಮರೆಯಬೇಡಿ.ಸಾವಿರ ಕೆಲಸ ಬಿಟ್ಟು ಅನ್ನದಾನ ಮಾಡಿ: ಹಸಿದವರಿಗೆ ಅನ್ನ ನೀಡುವುದು ಶ್ರೇಷ್ಠ ಧರ್ಮವಾಗಲು ಇಂತಹ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳಿ.
ಕೋಟಿ ಕೆಲಸಗಳ ಮಧ್ಯೆದಲ್ಲಿಯು ಸತ್ಸಂಗಕ್ಕಾಗಿ ಸಮಯ ಮೀಸಲಿಡುವುದು ನಿಮ್ಮ ಆತ್ಮಕ್ಕೆ ಶಾಂತಿ ಸಿಗುವುದರಲ್ಲಿ ಎರಡು ಮಾತಿಲ್ಲ! ಎಂದು ಭಕ್ತರಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಮಹಾದೇವ ಭಜನೆ ಮಂಡಳಿ ಸದಸ್ಯರು, ಗ್ರಾಮದ ಹಿರಿಯರು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಮುಧೋಳ (ಬಿ)ಗ್ರಾಮಗಳ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.




















