
ಕೋಲಾರ,ಫೆ,೪-ಮೇಲ್ ಮರುವತ್ತೂರು ಶ್ರೀ ಆದಿಪರಾಶಕ್ತಿ ಆಧ್ಯಾತ್ಮಿಕ ಆಂದೋಲನದ ಪ್ರಯುಕ್ತ ಜಿಲ್ಲಾ ಕೇಂದ್ರದಲ್ಲಿ ಫೆ ೮ ರಂದು ಆಧ್ಯಾತ್ಮಿಕ ಜ್ಯೋತಿ ಬೆಳಗಿಸುವ ಕಾರ್ಯಕ್ರಮವನ್ನು ಡಾ.ಬಿ.ಆರ್. ಅಂಬೇಡ್ಕರ್ ನಗರದ ಶ್ರೀ ದೇವಿ ರೇಣುಕಾ ಯಲಮ್ಮ ದೇವಾಲಯದ ಅವರಣದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಓಂ ಶಕ್ತಿ ಮಂಡಳಿಯ ಅಧ್ಯಕ್ಷ ಶಕ್ತಿ.ಎ.ಕೃಷ್ಣಪ್ಪ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಕಳೆದ ೨೨ ವರ್ಷಗಳಿಂದ ಆಯೋಜಿಸಿ ಕೊಂಡು ಬರುತ್ತಿರುವ ಕಾರ್ಯಕ್ರಮವಾಗಿದೆ. ಕಳೆದ ವರ್ಷ ಗಂಜಿ ಪೂಜೆಯು ಯಶಸ್ವಿಯಾಗಿದ ಹಿನ್ನಲೆಯಲ್ಲಿ ಈ ಭಾರಿ ಮಹಾತಾಯಿ ಆದಿಪರಾಶಕ್ತಿ ಅಮ್ಮನವರ ಕೃಪೆಯಿಂದಲೂ ಮತ್ತು ಆಚಾರ್ಯ ಪೀಠದ ನಾಯಕರಾದ ಶ್ರೀ ಬಂಗಾರು ಆಡಿಗಳಾರ್ ಅವರ ಅಶೀರ್ವಾದಗಳಿಂದಲೂ ಮೇಲ್ ಮರವತ್ತೂರ್ ಆದಿ ಪರಾಶಕ್ತಿ ಆದ್ಯಾತ್ಮಿಕ ಜ್ಯೋತಿ ಬೆಳಗಿಸುವ ಕಾರ್ಯಕ್ರಮಕ್ಕೆ ಮೇಲ್ ಮರವತ್ತೂರು ಆಧಿಪರಾಶಕ್ತಿ ಆದ್ಯಾತ್ಮಿಕ ಆಂದೋಲನದ ಉಪಾಧ್ಯಕ್ಷರಾದ ಶ್ರೀ ಮರುವೂರ್ ಚಿನ್ನಾವರ್ ಅಮ್ಮನವರ ಅಧ್ಯಕ್ಷತೆಯಲ್ಲಿ ಕೋಲಾರದ ಅಧ್ಯಾತ್ಮಿಕ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ನಡೆಯಲಿದೆ ಎಂದರು.
ನಮ್ಮ ಕೋಲಾರ ಜಿಲ್ಲೆಯೂ ನೆರೆಯ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಗಡಿಭಾಗದಲ್ಲಿರುವುದರಿಂದ ಸುಮಾರು ೫-೭ ಸಾವಿರ ರೂ ಸಂಘಟಿತರಾಗುವ ನಿರೀಕ್ಷೆಯಿದೆ. ಈ ಕಾರ್ಯಕ್ರಮ ಫೆ,೮ರ ಭಾನುವಾರ ಬೆಳಿಗ್ಗೆ ೫ ಗಂಟೆಗೆ ಅಮ್ಮನವರ ಸುಪ್ರಭಾತದಿಂದ ಪ್ರಾರಂಭಿಸಿ ೯ ಗಂಟೆಯಿಂದ ೧೧.೪೫ರ ವರೆಗೆ ಕಳಸ, ದೀಪ ,ಯಾಗ ಪೂಜೆಗಳು ನಡೆಯಲಿದ್ದು ಮಧ್ಯಾಹ್ನ ೨ ಗಂಟೆ ಅನ್ನದಾಸೋಹದ ಪ್ರಸಾದ ವಿನಯೋಗವಾಗಲಿದೆ ಎಂದ ಅವರು ಈ ದಾಸೋಹದ ವ್ಯವಸ್ಥೆಯನ್ನು ಕೋಲಾರದ ಶಾಸಕ ಕೊತ್ತೂರು. ಡಾ.ಜಿ.ಮಂಜುನಾಥ್ ಅವರು ನೆರವೇರಿಸಿ ಕೊಡಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಲೋಕ ಸಭಾ ಸದಸ್ಯ ಎಂ.ಮಲ್ಲೇಶ್ ಬಾಬು. ಸಮಾಜ ಸೇವಕರಾದ ಸಿ.ಎಂ.ಆರ್. ಶ್ರೀನಾಥ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ. ಪೊಲೀಸ್ ತರಭೇತಿಯ ಡಿ.ಐ.ಜಿ.ಪಿ. ದೇವರಾಜ್, ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀಮತಿ ಕನ್ನಿಕಾ ಸುಕ್ರಿವಾಲ್ ಅವರು ಸೇರಿದಂತೆ ಇತರೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಈ ವರ್ಷ ೪೫ ದಿನಗಳ ಕಾಲದ ಇರುಮುಡಿಯನ್ನು ಅಮ್ಮನವರಿಗೆ ಅರ್ಪಿಸಿ ಹರಕೆ ಹೊತ್ತರೆ ಅವರ ಇಷ್ಟಾರ್ಥಗಳು ನೆರವೇರುವುದು, ಅಮ್ಮನವರ ಸೇವೆ ಮಾಡಿದವರಿಗೆ ಒಳ್ಳೆಯದು ಆಗಿದೆ ಎಂಬುವುದು ಪ್ರತೀತಿ ಇದೆ ಹಾಗಾಗಿ ಜ್ಯೋತಿ ಕಾರ್ಯಕ್ರಮದ ನಂತರ ಭಕ್ತಾಧಿಗಳ ಮನೆ ಮನೆಗೆ ಅಮ್ಮನವರೇ ಬಂದು ಅವರ ಕೋರಿಕೆ, ಪ್ರಾರ್ಥನೆಗಳನ್ನು ಅಲಿಸಲಿದ್ದಾರೆ ಎಂದರು.
ಈ ಭಾರಿ ಕೋಲಾರದಲ್ಲಿ ಜ್ಯೋತಿ ಬೆಳಗಿದ ನಂತರೇ ರಾಜ್ಯಾದಾದ್ಯಂತ ಜ್ಯೋತಿ ಬೆಳಗುವುದು. ಈ ಬಾರಿ ಮೆರವಣಿಗೆಯ ನಂತರದಲ್ಲಿ ದೇವಾಲಯದಲ್ಲಿ ವೇಲ್ವೆ ಹಾಗೂ ಯಾಗ ಪೂಜೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಾಹಸ್ರರಾರು ಸಂಖ್ಯೆಯಲ್ಲಿ ಅಗಮಿಸಲಿದ್ದಾರೆ. ಮಂಡಲದ ಗುಂಪುಗಳು ಗ್ರಾಮಗಳಿಂದ ಅಗಮಿಸಲಿದ್ದಾರೆ. ಕಳೆದ ಬಾರಿ ಗಂಜಿ ಪೂಜೆಯ ಮೆರವಣಿಗೆಯೂ ಯಶಸ್ವಿಯಾಗಿರುವುದು ತೃಪ್ತಿ, ಸಮಾಧಾನ ತಂದಿದೆ. ರಾಜ್ಯದಾದ್ಯಂತ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸುಮಾರು ೬ ಲಕ್ಷಕ್ಕೂ ಹೆಚ್ಚು ಓಂ ಶಕ್ತಿ ಮಂಡಳಿಯ ಭಕ್ತಾಧಿಗಳು ಸ್ವಯಂ ಪ್ರೇರಿತರಾಗಿ ಭಾಗವಹಿಸುತ್ತಿದ್ದು ಪ್ರತಿ ವರ್ಷದಿಂದ ವರ್ಷಕ್ಕೆ ಈ ಸಂಖ್ಯೆಯು ಹೆಚ್ಚಾಗುತ್ತಲೆ ಇದೆ. ಅಮ್ಮನವರ ಪವಾಡಗಳೇ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಸ್ವಷ್ಟನೆ ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಓಂ ಶಕ್ತಿ ಮಂಡಳಿ ಪದಾಧಿಕಾರಿಗಳಾದ ಚಿಕ್ಕಪುರ ಜಿ.ಮರುಗೇಷ್,ಯಲ್ಲಮ್ಮ, ನಾರಾಯಣಸ್ವಾಮಿ,ಸಂತೋಷ್, ವೇಣು, ಅಶ್ವಿನಿ, ಉಪಸ್ಥಿತರಿದ್ದರು.



























