
ಕೋಲಾರ,ಫೆ,೧೩- ಶ್ರೀದೇವಿ ಅನ್ನಪೂರ್ಣೆಶ್ವರಿ ವೃತ್ತಿ ತರಭೇಟಿ ಮತ್ತು ಕೌಶಲ್ಯ ಅಭಿವೃದ್ದಿ ಸೇವಾ ಟ್ರಸ್ಟ್ ಶ್ರೀ ಆದಿ ಅನ್ನಪೂರ್ಣೇಶ್ವರಿ ಅಧ್ಯಾತ್ಮಿಕ ಕಾರ್ಯಕ್ರಮ ಸೇವಾ ಟ್ರಸ್ಟ್ ಹಾಗೂ ಕರ್ನಾಟಕ ಅಡುಗೆ ಕೆಲಸಗಾರರ ಹಾಗೂ ಕಾರ್ಮೀಕರ ಕ್ಷೇಮಾಭಿವೃದ್ದಿ ಯೂನಿಯನ್ ಸಹಭಾಗಿತ್ವದಲ್ಲಿ ಭಾರತದಲ್ಲಿಯೇ ಮೊಟ್ಟ ಮೊದಲಬಾರಿಗೆ ಅಡುಗೆ ಕಾರ್ಮೀಕರಿಗೆ ಕರ್ನಾಟಕ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮವನ್ನು ಫೆ,೧೬ರ ಸೋಮವಾರ ಮಧ್ಯಾಹ್ನ ೨ ಗಂಟೆಗೆ ನಗರದ ಟಿ.ಚೆನ್ನಯ್ಯ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ರಾಜ್ಯಾಧ್ಯಕ್ಷ ಕೆ.ವಿ.ಸುರೇಶ್ ಕುಮಾರ್ ಹಾಗೂ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕೊತ್ತೂರು ಮಂಜುನಾಥ್ ವಹಿಸಲಿದ್ದಾರೆ. ಸಂಸದರಾದ ಎಂ .ಮಲ್ಲೇಶ್ ಬಾಬು ಹಾಗೂ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಉಪಸ್ಥಿತರಿರುವರು ಮುಖ್ಯ ಅತಿಥಿಗಳಾಗಿ ವಿವಿಧ ಸಂಘ ಸಂಸ್ಥೆಗಳ ಮುಖಂಡರನ್ನು ಆಹ್ವಾನಿಸಲಾಗಿದೆ ಎಂದರು.
ಕಳೆದ ೨೦೦೪ರಲ್ಲಿ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ ಸ್ಥಾಪಿಸಲಾಯಿತು. ಕರ್ನಾಟಕ ಅಸಂಘಟಿತ ಕಾರ್ಮಿಕ ಪರಿಷತ್ ಹೋರಾಟದ ಮಾಡಿದ ಹಿನ್ನಲೆಯಲ್ಲಿ ದಕ್ಷಿಣ ಭಾರತದಲ್ಲಿಯೇ ಪ್ರಥಮವಾಗಿ ಸ್ಥಾಪಿಸಿದ್ದು ವಂಚನೆಗೆ ಒಳಗಾದ ಅಸಂಘಟಿತರನ್ನು ಗುರುತಿಸಿ ಗುರುತಿನ ಚೀಟಿ ಪ್ರಧಮವಾಗಿ ವಿತರಿಸಲಾಗುತ್ತಿದೆ.
ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿಗೆ ಸೇರ್ಪಡೆಗೊಳಿಸಲು ಅದೇಶಿಸಿರುವ ಸರ್ಕಾರಕ್ಕೆ ಅಭಿನಂದಿಸುತ್ತೇವೆ ಎಂದ ಅವರು ಅಡುಗೆ ಕಾರ್ಮಿಕರನ್ನು ಅಸಂಘಟಿತರೆಂದು ಗುರುತಿಸಿ ಅವರಿಗೂ ಪಿಂಚಣಿ, ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಲ್ಪಿಸಬೇಕೆಂಬುವುದು ನಮ್ಮ ಒತ್ತಾಸೆಯಾಗಿದೆ ಎಂದರು.
ಇದೇ ರೀತಿ ಅಡುಗೆ ಮಾಡುವವರನ್ನು ಅಸಂಘಟಿತ ಕಾರ್ಮಿಕರನ್ನು ಗುರುತಿಸಿದ್ದು ಅಡುಗೆ ಕಾರ್ಮಿಕರು ರಾಜ್ಯ ಪರಿಷತ್ ಅಡಿಯಲ್ಲಿ ಅಂಗ ಸಂಸ್ಥೆಯಾಗಿ ಪರಿಗಣಿಸಲಾಗಿದೆ. ೨೦೦೫ ರಲ್ಲಿ ಸರ್ಕಾರದಿಂದ ಮಾನ್ಯತೆಯನ್ನು ಪಡೆದು ಅಡುಗೆಯವರನ್ನು ಹಾಗೂ ಪುರೋಹಿತರನ್ನು ಸರ್ಕಾರವು ಗುರುತಿಸಿದ್ದು ಕಾರ್ಮಿಕ ಇಲಾಖೆಯಿಂದ ಅಂಘಟಿತ ಕಾರ್ಮಿಕರೆಂದು ಗುರುತಿನ ಚೀಟಿ ವಿತರಿಸಲು ಪರಿಗಣಿಸಿತು ಎಂದು ಹೇಳಿದರು.
ಈಗಾಗಲೇ ಅಸಂಘಟಿತ ವಲಯದಲ್ಲಿ ಕಟ್ಟಡ ಕಾರ್ಮಿಕರು ಮತ್ತು ಆಟೋಚಾಲಕರನ್ನು ಗುರುತಿಸಿರುವಂತೆ ಈಗಾ ಅಡುಗೆ ಕಾರ್ಮಿಕರನ್ನು ಗುರುತಿಸಿದ್ದು ಮಂಡಳಿಯ ರಚನೆಗೆ ಅನುಮತಿಸ ಬೇಕೆಂಬುವುದು ಸರ್ಕಾರದ ಮುಂದಿರುವ ನಮ್ಮ ಬೇಡಿಕೆಯಾಗಿದೆ. ಸರ್ಕಾರದಿಂದ ನೇರ ಅನುದಾನ ವಿತರಿಸಲಾಗದ ಕಾರಣ ಮಂಡಳಿಗೆ ಮದುವೆ ಸಮಾರಂಭಗಳ ಕಲ್ಯಾಣ ಮಂಟಪಗಳಿಂದ ಶೇ ೧ ರಷ್ಟು ಸೆಸ್ಸ್ ರೂಪದಲ್ಲಿ ತೆರಿಗೆ ವಸೂಲಿ ಮಾಡಿ ಅಡುಗೆ ಆಸಂಘಟಿತ ಕಾರ್ಮಿಕ ಪರಿಷತ್‌ಗೆ ಅನುದಾನವಾಗಿ ಮಂಜೂರು ಮಾಡಬೇಕು ಇದರಿಂದ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ವಿವರಿಸಿದರು.
ಕರ್ನಾಟಕ ಅಡುಗೆ ಕೆಲಸಗಾರರ ಮತ್ತು ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ದಿ ಯೂನಿಯನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ರಮೇಶ್ ಬಾಬು ಮಾತನಾಡಿ ನಮ್ಮ ಸಂಘಟನೆಯು ರಾಜ್ಯಾದ್ಯಾಂತ ಸುಮಾರು ೧೦ ಲಕ್ಷ ಮಂದಿ ಸದಸ್ಯರನ್ನು ಹೊಂದಿದೆ. ಜಿಲ್ಲೆಯಲ್ಲಿ ಕನಿಷ್ಟ ೩ ಸಾವಿರ ಮಂದಿ ಸದಸ್ಯರನ್ನು ಹೊಂದಿದೆ. ಯಾವೂದೇ ಜಾತಿ ಮತ ಭೇದಗಳಿಲ್ಲದೆ ಸಂಘಟನೆಯನ್ನು ರಚಿಸಲಾಗಿದೆ. ೨೦೦೪ರಲ್ಲಿ ಅಗಿನ ಮುಖ್ಯ ಮಂತ್ರಿ ಸದಾನಂದಗೌಡರು ಬೆಂಗಳೂರಿನ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ನೆರವೇರಿಸಿದರು ಎಂದು ನೆನಪಿಸಿದರು
ಅಪಘಾತ ಪರಿಹಾರ, ಸಹಜ ಸಾವುಗಳ ಅಂತ್ಯಸಂಸ್ಕಾರಕ್ಕೆ ಸಹಾಯ ಧನ, ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಅಸಂಘಟಿತ ಭದ್ರತಾ ಮಂಡಳಿಯಿಂದ ಸಿಗುವ ಸೌಲಭ್ಯಗಳನ್ನು ಅಡುಗೆ ಕಾರ್ಮಿಕರಿಗೂ ಕಲ್ಪಿಸಬೇಕು. ರಾಜ್ಯಾದಾದ್ಯಂತ ಪ್ರತಿ ಜಿಲ್ಲೆಯಲ್ಲೂ ಅಡುಗೆ ಕಾರ್ಮಿಕರ ಟ್ರಸ್ಟ್ ರಚಿಸಲಾಗಿದೆ. ಮೇ ೧ ರೊಳಗೆ ಗುರುತಿನ ಚೀಟಿಯನ್ನು ರಾಜ್ಯಾದಾದ್ಯಂತ ಅಡುಗೆ ಕಾರ್ಮಿಕರಿಗೆ ವಿತರಿಸ ಬೇಕೆಂಬ ಬೇಡಿಕೆಗಳ ಮನವಿಯನ್ನು ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು,
ಈಗಾಗಲೇ ಅನ್ನಪೂರ್ಣೇಶ್ವರಿ ದೇವಿಯ ಪಂಚಲೋಹದ ವಿಗ್ರಹವನ್ನು ಹೋಮ ಹವನ ಮೂಲಕ ದೇವಾಸ್ಥಾನದಲ್ಲಿ ಪ್ರತಿಷ್ಠಾಪನೆಯನ್ನು ಮಾಡಲಾಗಿದೆ ಮಾ,೨೭ ರಿಂದ ಪ್ರತಿ ಶುಕ್ರವಾರ ಭಕ್ತಾಧಿಗಳಿಗೆ ಮಧ್ಯಹ್ನಾದ ವೇಳೆ ಅನ್ನದಾಸೋಹ ಕಾರ್ಯಕ್ರಮವನ್ನು ನಿರಂತರವಾಗಿ ಮುಂದುವರೆಸಲಾಗುವುದು ಎಂದು ತಿಳಿಸಿದರು.



























