ಹಸಿ ಬರದ ಭೀತಿ

ಲಕ್ಷೆ÷್ಮÃಶ್ವರ,ಆ.೨೨:ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಬೆಳೆಗಳು ವಿಪರೀತವಾದ ಸುರಿದ ಮಳೆಯಿಂದಾಗಿ ಬಹುತೇಕ ಬೆಳೆಗಳು ಹಾಳಾಗಿದ್ದು ಒಂದು ರೀತಿಯಲ್ಲಿ ಹಸಿ ಬರದ ಭೀತಿ ರೈತರಿಗೆ ಎದುರಾಗಿದೆ.


ರೈತರು ಮುಂಗಾರು ಹಂಗಾಮೀನ ಕನಸು ಹೊತ್ತು ಬಿತ್ತನೆ ಮಾಡಿದ ಎಲ್ಲಾ ಬೆಳೆಗಳು ನೀರಿನಲ್ಲಿ ನಿಂತು ಕೊಳೆತೊಡಗಿವೆ ಆಗಸ್ಟ್ ತಿಂಗಳು ವಾಡಿಕೆಯ ಮಳೆಗಿಂತ ಅತ್ಯಧಿಕವಾಗಿ ಮಳೆಯಾಗಿದ್ದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರೆದಂತಾಗಿ ಬೆಳೆ ನಾಶವಾಗುವುದನ್ನು ನೋವಿನಿಂದ ಅನುಭವಿಸುತ್ತಿದ್ದಾರೆ.


ಅಗಸ್ಟ್ ತಿಂಗಳಲ್ಲಿ ವಾಡಿಕೆಯ ಮಳೆಗಿಂತ ಅತ್ಯಧಿಕವಾಗಿ ಮಳೆಯಾಗಿದ್ದರಿಂದ ಜಮೀನುಗಳಲ್ಲಿ ನೀರು ನಿಂತಿದೆ. ಕೃಷಿ ಇಲಾಖೆಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಆಗಸ್ಟ್ ತಿಂಗಳಲ್ಲಿ ಒಂದನೆಯ ತಾರೀಖಿನಿಂದ ೧೮ನೇ ತಾರೀಖಿನವರೆಗೆ ೪೬. ೭ ಎಂಎA ಮಳೆಯಾಗಬೇಕಾಗಿತ್ತು, ಆದರೆ ಇದುವರೆಗೆ ೧೩೭. ೫ ಎಂ ಎಂ ಮಳೆಯಾಗಿದ್ದು ಇದು ದಾಖಲೆಯ ಮಳೆಯಾಗಿದೆ ಇದರಿಂದಾಗಿ ಬಳ್ಳೊಳ್ಳಿ ಈರುಳ್ಳಿ ಹೆಸರು ಬೆಳೆಗಳು ನಾಶವಾಗಿದ್ದು ರೈತರು ಕಂಗಾಲಾಗಿದ್ದಾರೆ.


ಈಗಾಗಲೇ ಕೃಷಿ ಇಲಾಖೆಯವರು ಲಕ್ಷೆ÷್ಮÃಶ್ವರ ತಾಲೂಕಿನಲ್ಲಿ ಜಮೀನುಗಳಲ್ಲಿ ಬೆಳೆಗಳನ್ನು ಸಮೀಕ್ಷಾ ಕಾರ್ಯ ಕೈಗೊಂಡಿದ್ದು ರೈತರಿಗೆ ನೆರವು ಅಥವಾ ಪರಿಹಾರ ದ ನಿರೀಕ್ಷೆಯಲ್ಲಿದ್ದಾರೆ ರೈತರಿಗೆ ಈಗ ಆಗಿರುವ ಬೆಳೆ ಹಾನಿಯ ಬೆಳೆ ವಿಮೆಯನ್ನು ಮಧ್ಯಂತರ ವಿಮೆಯನ್ನಾಗಿ ಘೋಷಿಸಬೇಕು ಎಂಬುದು ರೈತರ ಅಳಲಾಗಿದೆ.
ಆದರೆ ವಿಧಾನಸಭೆಯ ಅಧಿವೇಶನ ಆರಂಭವಾಗಿದ್ದು ಜನ ಪ್ರತಿನಿಧಿಗಳು ಉತ್ತರ ಕರ್ನಾಟಕದ ಮಳೆಯ ಒಡತದಿಂದ ರೈತರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವಲ್ಲಿ ಮುಂದಾಗದಿರುವುದು ರೈತರ ಅಸಮಾಧಾನ ಕ್ಕೆ ಕಾರಣವಾಗಿದೆ.


ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ್ ನರಸಮ್ಮನವರ್ ತಾಲೂಕಿನ ಸೂರಣಗಿ ಮತ್ತಿತರ ಪ್ರದೇಶಗಳ ಜಮೀನುಗಳಿಗೆ ಭೇಟಿ ನೀಡಿ ಹಾನಿಯ ಅಂದಾಜು ಕೈಗೊಂಡಿದ್ದಾರೆ.