
ಕಲಬುರಗಿ:ಜ.13: ಭಾರತದಲ್ಲಿನ ಅಜ್ಞಾನ ಅಂಧಕಾರ ಮೂಡನಂಬಿಕೆ ಕುರುಡ ಸಂಪ್ರದಾಯಗಳನ್ನು ಮೆಟ್ಟಿ ನಿಂತು ಅಕ್ಷರ ಕ್ರಾಂತಿ ಜ್ಯೋತಿ ಹಚ್ಚಿದ ಮುಸ್ಲಿಂ ಸಮುದಾಯದ ಪ್ರಥಮ ಶಿಕ್ಷಕಿ ಫಾತೀಮಾ ಶೇಖರವರ ಕಾರ್ಯ ಅಜರಾಮರವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಮಾರುತಿ ಗಂಜಗಿರಿ ರವರು ಚಿಂಚೋಳಿ ತಾಲೂಕಿನ ಅಣವಾರ ಗ್ರಾಮದಲ್ಲಿರುವ ಅಲ್ಪಸಂಖ್ಯಾತರ ಮೂರಾರ್ಜಿ ವಸತಿ ಶಾಲೆಯಲ್ಲಿ ಪಾತೀಮಾ ಶೇಖ್ ಮುಕ್ತ ಸಾಳ್ವೆ ಮತ್ತು ಸ್ವಾಮಿ ವಿವೇಕಾನಂದರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತ ಮುಂದುವರೆದು ವಿದವಾ ವಿವಾಹ ಸತಿ ಸಹಗಮನ ಪದ್ಧತಿ ವಿರೋದ ಮತ್ತು ಮಹಿಳಾ ಸಬಲೀಕರಣ ವಿಷಯಗಳ ಬಗ್ಗೆ ದ್ವನಿ ಎತ್ತಿ ದಲಿತ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಸಮಾನತೆಯ ಸಂಬಂದಗಳನ್ನು ಬೆಳೆಸುವ ಮುಖಾಂತರ ಜಾತ್ಯಾತೀತ ತತ್ವಗಳ ಜಾರಿಗೆ ಶ್ರಮಿಸಿದರೆಂದು ಸುದಿರ್ಘವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಮತೀನ ಸೌದಗಾರ ಮಾತನಾಡಿ ಪ್ರಸ್ತುತ ಸಮಾಜಕ್ಕೆ ಸ್ವಾಮಿ ವೀವೇಕನಂದರ ತತ್ವ ಆದರ್ಶಗಳು ಅವಶ್ಯಕವಾಗಿವೆ ಅವುಗಳನ್ನು ಶಾಲಾ ಹಂತದದಿಂದಲೆ ವಿದ್ಯಾರ್ಥಿಗಳು ಚೆನ್ನಾಗಿ ಅಧ್ಯಯನ ಮಾಡಿ ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ನಂತರ ಹಾಫೀಜ್ ಅಬ್ದುಲ್ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯಿಟ್ಟುಕೊಂಡು ನಮ್ಮ ದೇಶಕ್ಕಾಗಿ ಹೋರಾಟ ಮಾಡಿದ ಮಾಹತ್ಮರ ಚರಿತ್ರೆ ಅರಿಯಬೇಕೆಂದರು ಮೋಹನ ಐನಾಪೂರ ಸಾಗರ ಆನಂದಿ ಮಾತನಾಡಿದರು. ಅತಿಥಿಗಳಾಗಿ ಎಮ್ ಕೆ ಟೇಲರ್, ಹಫೀಜ್ ಇಸ್ಮಾಯಿಲ್, ಭಾಗ್ಯವಂತ ಕನಕಪೂರ, ಹರೀಷ್ ದೇಗಲ್ಮಡಿ, ಸಿದ್ದಲಿಂಗ ರಂಗನೂರ ಇದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಯದ ಹಸನ ಪ್ರಾಂಶುಲ ವಹಿಸಿದರು. ಜಗದೀಶ ಶಿಕ್ಷಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

























