
ಲಕ್ಷೆ÷್ಮÃಶ್ವರ,ಮಾ.೬: ಕೃಷಿ ಕ್ಷೇತ್ರದಲ್ಲಿ ಕೈಸುಟ್ಟುಕೊಳ್ಳುತ್ತಿರುವ ರೈತ ಸಮುದಾಯ ಈಗ ತೋಟಗಾರಿಕಾ ಬೆಳೆಯುತ್ತ ಮುಖ ಮಾಡಿದ್ದು ಲಭ್ಯವಿರುವ ನೀರಾವರಿಯನ್ನು ಬಳಸಿ ಹೊಸ ಹೊಸ ತಳಿಗಳ ನಾಟಿ ಮಾಡಿ ಹೊಸ ಪ್ರಯೋಗಕ್ಕೆ ಮುಂದಾಗುತ್ತಿದ್ದಾರೆ.
ರೈತರು ಇದುವರೆಗೆ ಸಾಂಪ್ರದಾಯಿಕ ತೋಟಗಾರಿಕಾ ಬೆಳೆಯಾದ ಮಾವು ಪಪ್ಪಾಯಿ ಬಾಳೆ ತೆಂಗು ಹಾಗೂ ತರಕಾರಿ ಹೂಗಳನ್ನು ಬೆಳೆಯುತ್ತಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ರೈತರು ಈಗ ಮಲೆನಾಡಿನ ಅಡಿಕೆ ತಾಳೆ ಹೊಸ ತಳಿಯ ಕಲ್ಲಂಗಡಿ ಪೇರಲ ಹಣ್ಣು ಬೆಳೆಯುತ್ತಿದ್ದಾರೆ.
ತಾಲೂಕಿನ ಶಿಗ್ಲಿ ಸಮೀಪದ ಕನಕಪುರ ಜಮೀನಿನಲ್ಲಿ ಯುವ ರೈತ ಸುಭಾನಿ ಸುರಣಗಿ ತನ್ನ೧.೫ ಎಕರೆ ಜಮೀನಿನಲ್ಲಿ ಕಲ್ಕತ್ತಾದಿಂದ ತರಿಸಿರುವ ವಿಶೇಷ ತಳಿಯ ಪೇರಲ ಸಸಿಗಳನ್ನು ತಂದು ನಾಟಿ ಮಾಡಿದ್ದು ಅದರಲ್ಲಿ ರೆಡ್ ಡೈಮಂಡ್ ತಳಿ ೨೫೦ ವಿ ಎನ್ ಆರ್ ೧೮೦ ಒಂದರAತೆ ಒಂದು ಸಾವಿರ ಸಸಿಗಳನ್ನು ತಂದು ನಾಟಿ ಮಾಡಿದ್ದು ಈಗ ಅದು ಫಲ ಕೊಡಲ ಆರಂಭಿಸಿದೆ ಕಲ್ಕತ್ತಾದ ಎವರಿ ಗ್ರೀನ್ ನರ್ಸರಿಯಿಂದ ತರಿಸಿರುವ ಈ ಸಸಿಗಳನ್ನು ಮಹಾರಾಷ್ಟçದ ಕೂಲಿಕಾರರು ಪ್ರತಿಯೊಂದು ಸ ಸಿ ನಾಟಿ ಮಾಡಲು ೨೫ ನೀಡಲಾಗಿದೆ ಎಂದು ಯುವ ರೈತ ಸುಭಾನಿ ಸುರಣಿಗಿ ಹೇಳಿದರು.
ನಾಟಿ ಮಾಡಿದ ೧೮ ತಿಂಗಳಲ್ಲಿ ಸುಮಾರು ೯ ಟನ್ ಮಾರಾಟ ಮಾಡಿದ್ದು ಪ್ರತಿ ಗಿಡದಲ್ಲಿ ಕನಿಷ್ಠ ೯ ಕೆಜಿ ಹಣ್ಣು ಲಭ್ಯವಾಗುತ್ತದೆ ಎಂದು ತಮ್ಮ ಅನುಭವ ಹೇಳಿದರು ಈಗಾಗಲೇ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಆದಾಯ ಪಡೆದಿರುವದಾಗಿ ಹೇಳಿದವರು ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ೬೫ ಕೆಜಿ ಮಾರಾಟವಾಗುತ್ತಿದೆ ಎಂದು ಹೇಳಿದರು.
ರೈತರು ಹೊಸ ಹೊಸ ತಳಿಯನ್ನು ಬೆಳೆದು ಆದಾಯ ಗಳಿಸಬಹುದು ಎಂದು ಹೇಳಿದರು.


















