
ಕೆಂಭಾವಿ:ನಾರಾಯಣಪುರ ಎಡದಂಡೆ ಕಾಲುವೆಯ ಶಹಾಪೂರ ಶಾಖಾ ಉಪಕಾಲುವೆ -2ರ ಗೇಟ್ ಮುರಿದು ಮೂರು ದಿನ ಕಳೆದರೂ ಕೆಬಿಜೆಎನ್ಎಲ್ ಅಧಿಕಾರಿಗಳು ದುರಸ್ತಿ ಮಾಡದ ಕಾರಣ ನೂರಾರು ರೈತರು ದಿಢೀರ್ ಪ್ರತಿಭಟನೆ ನಡೆಸಿದರು. ಆಕ್ರೋಶಗೊಂಡ ರೈತರು ಸುರಪುರ-ಹುಣಸಗುಂದ ರಾಜ್ಯ ಹೆದ್ದಾರಿ ತಡೆದು, ಸ್ಥಳಕ್ಕೆ ಬಂದ ಕೆಬಿಜೆಎನ್ಎಲ್ ಮಾಲಗತ್ತಿ ಉಪ ವಿಭಾಗದ ಅಧಿಕಾರಿಯನ್ನು ಇಲಾಖೆಯ ಸರ್ಕಾರಿ ಜೀಪಿನ ಮೇಲೆ (ಬಾನೆಟ್ ಮೇಲೆ) ಕುರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಬಾರಿ ಮಳೆಯು ಕೈ ಕೊಟ್ಟಿದ್ದು ವಾರಬಂಧಿ ನೀತಿಯಿಂದ ಸಕಾಲಕ್ಕೆ ಸರಿಯಾಗಿ ನೀರು ಕೊಡಾ ಬರುತ್ತಿಲ್ಲ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಯುತ್ತಿರು ಬೆಳೆ ಈಗ ಒಣಗುತ್ತಿದ್ದೆ ಅಧಿಕಾರಿಗಳ ನಿರ್ಲಕಷ್ಯದಿಂದ ಅಪಾರ ಹಾನಿಯಾಗಿತ್ತಿದೆ ಎಂದು ಆಕ್ರೋಶ ಹೊರ ಹಾಕಿದರು
ಇದರಿಂದ ಕೆಲಕಾಲ ಸ್ಥಳದಲ್ಲಿ ಬೀಗುವಿನವಾತಾವರಣ ನಿರ್ಮಾಣವಾಗಿತ್ತು ಸ್ಥಳಾಕ್ಕಾಗಮಿಸಿದ ಸಿಪಿಕ್ ದೀಪಕ್ ಭೂಪರೆಡ್ಡಿ ನೀಡಿ, ಕಾಲುವೆ ಹರಿವು ಕಡಿಮೆಗೊಳಿಸಿ ಗೇಟ್ ದುರಸ್ತಿ ಮಾಡಿಕೊಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.




















