
ಬೀದರ್ : ನ.11: ಅತಿವೃಷ್ಟಿಯಿಂದ ಜಿಲ್ಲೆಯಾದ್ಯಂತ ಬೆಳೆ ಸಂಪೂರ್ಣ ನಾಶವಾಗಿದ್ದು ರೈತರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಸಹ ಬಿಡುಗಡೆ ಗೊಳಿಸಲಾಗಿದೆ ಇದೀಗ ಅಲ್ಪ ಸ್ವಲ್ಪ ಉಳಿದ ಸೋಯಾಬೀನ್ ಬೆಳೆಗೆ ಕೇಂದ್ರ ಸರ್ಕಾರವು ಉತ್ತಮ ಬೆಂಬಲ ಬೆಲೆ ನೀಡಿ ಖರೀದಿಸುತ್ತಿರುವುದು ರೈತರಿಗೆ ಸಂತಸ ತಂದಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಸಂಗೋಳಗಿ ಪಿಕೆಪಿಎಸ್ ಕಚೇರಿ ಆವರಣದಲ್ಲಿ ಸೋಯಾಬೀನ್ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಾದ 2025-26ನೇ ಸಾಲಿನ ಬೆಂಬಲ ಬೆಲೆ ಎಫ್.ಎ.ಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಲಗೆ 5,328 ರೂ. ಬೆಂಬಲ ಬೆಲೆ ವೆಚ್ಚದಲ್ಲಿ (ಒSP) ಯೋಜನೆಯಡಿ ಸೋಯಾಬೀನ್ ಬೆಳೆ ಖರೀದಿಸಲಾಗುತ್ತಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಹೆಚ್ಚಿನ ರೈತರ ಬಳಿ ಬೆಳೆ ದಾಸ್ತಾನಿಗೆ ವ್ಯವಸ್ಥೆ ಇಲ್ಲದ ಕಾರಣ . ನಿರಂತರವಾಗಿ ಮಳೆ ಸುರಿಯುತ್ತಿದ್ದು, ಅನಿವಾರ್ಯವಾಗಿ ಖಾಸಗಿಯವರ ಕದ ತಟ್ಟುತ್ತಿದ್ದಾರೆ . ಖಾಸಗಿಯವರು ಪ್ರತಿ ಕ್ವಿಂಟಲ್ ಸೋಯಾ ಕೇವಲ ? 4 ಸಾವಿರಕ್ಕೆ ಖರೀದಿಸಿದ್ದಾರೆ.
ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ಸೋಯಾಗೆ ? 5,328 ಬೆಂಬಲ ಬೆಲೆ ನಿಗದಿಪಡಿಸಿದೆ. ಎಕರೆಗೆ ಐದು ಕ್ವಿಂಟಲ್‍ನಂತೆ ಗರಿಷ್ಠ 5 ಕ್ವಿಂಟಲ್‍ವರೆಗೆ ಖರೀದಿ, ‘ಎಫ್‍ಎಕ್ಯೂ’ ಸೋಯಾ ಖರೀದಿ ಮಾಡುತ್ತಿದ್ದಾರೆ.
ರಾಜ್ಯದಲ್ಲೇ ಅತಿ ಹೆಚ್ಚು ಸೋಯಾ ಬೆಳೆಯುವ ಪ್ರದೇಶ ಎಂಬ ಹೆಗ್ಗಳಿಕೆ ಬೀದರ್ ಜಿಲ್ಲೆಗಿದೆ. ಈ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 2.21 ಲಕ್ಷ ಹೆಕ್ಟೇರ್‍ನಲ್ಲಿ ಸೋಯಾ ಬಿತ್ತನೆ ಮಾಡಲಾಗಿತ್ತು.
ಅತಿವೃಷ್ಟಿಯಿಂದ 1 ಲಕ್ಷ ಹೆಕ್ಟೇರ್‍ಗೂ ಅಧಿಕ ಸೋಯಾ ಹಾಳಾಗಿದೆ. ಮಿಕ್ಕುಳಿದ ಬೆಳೆಯ ಮೇಲೂ ಪರಿಣಾಮ ಉಂಟಾಗಿದೆ.
ಅತಿವೃಷ್ಟಿಯಿಂದ ರೈತರು ಕಷ್ಟದಲ್ಲಿದ್ದು, ಹಾಕಿದ ಬಂಡವಾಳ ಕೈಸೇರಿದರೆ ಸಾಕು ಎಂಬ ಚಿಂತೆಯಲ್ಲಿದ್ದಾರೆ ಇದೀಗ ಕೇಂದ್ರ ಸರ್ಕಾರದಿಂದ ಸೋಯಾಬೀನ್ ಖರೀದಿ ಮಾಡಲಾಗುತ್ತಿರುವುದು ರೈತಯ ಮೊಗದಲ್ಲಿ ಮಂದಹಾಸ ಮೂಡಿದೆ ಎಂದರು.
ಪಿಕೆಪಿಎಸ್ ಅಧ್ಯಕ್ಷರಾದ ಶಿವಕುಮಾರ ಹಿಂದಾ, ಉಪಾಧ್ಯಕ್ಷರಾದ ವಿಶ್ವನಾಥ ಮುಸ್ತರಿ, ಮುಖಂಡರಾದ ಅಶೋಕ ಪಾಟೀಲ, ಚಂದ್ರಶೇಖರ ಚನ್ನಶೆಟ್ಟಿ,ಸುರೇಶ ಚನ್ನಶೆಟ್ಟಿ,ವಿಜಯಕುಮಾರ್ ಮಂಡಗಿ, ಸಿದ್ದಪ್ಪ ಕಟಗಿ ಲಕ್ಷ್ಮಣ ಅಲ್ಲುರೆ, ಮಹೇಬುಬಸಾಬ ಬಂಬುಳಗಿ, ಭೀಮರಾವ ಗುತ್ತಿ,
ವೈಜಿನಾಥ ರಾಠೋಡ, ಬಾಬುರಾವ್ ಮಳೆಗಾರ, ಬಸವರಾಜ ಖೌದಿ, ರಾಜಕುಮಾರ ಪಾಟೀಲ್, ಸಂಗಮೇಶ ಹಜ್ಜರಗಿ, ನಾಗಶೆಟ್ಟಿ ಸಜ್ಜನಶೆಟ್ಟಿ, ಅಶೋಕ ಉದಗೀರೆ, ನಂದಕುಮಾರ್,ವಿಜಯಕುಮಾರ, ರಾಜಕುಮಾರ ಮಡಿವಾಳ,ಮಾರುತಿ, ಪ್ರಭು ರಾಜಕುಮಾರ, ವಿರೇಶ, ಸಿದ್ಧಾರೂಢ, ಬಾಬುರಾವ, ಕಾರ್ಯದರ್ಶಿಗಳಾದ ರಾಮಲಿಂಗ ಕಾಡವಾದ ರೈತರು, ಸಿಬ್ಬಂದಿ ವರ್ಗದವರು ಹಾಜರಿದ್ದರು.

























