
ಸಂಜೆ ವಾಣಿ ವಾರ್ತೆ
ಜಮಖಂಡಿ:ನ.೪:ತಾಲೂಕಿನ ಚಿಕ್ಕಲಕಿ ಕ್ರಾಸ್ ಹತ್ತಿರ ಕೃಷ್ನಾ ತೀರ ರೈತರ ಕಬ್ಬು ಬೆಳೆಗಾರರ ಸಂಘ ಹಸಿರು ಸೇನೆ ಸೇರಿದಂತೆ ವಿವಿಧ ರೈತ ಹೋರಾಟ ಸಂಘಗಳ ಸಹಯೋಗದಲ್ಲಿ ಇಂದು ಸಾವಿರಾರು ರೈತರು ಬೀದಿಗಿಳಿದು ಉಗ್ರವಾದ ಪ್ರತಿಭಟನೆಯನ್ನು ಬೆಳಗಿನಿಂದ ಸಂಜೆಯರೆಗೆ ಅವ್ಯಾಹತವಾಗಿ ಮಾಡಿದ್ದಾರು.
ಪ್ರತಿ ಭಟನೆಯಲ್ಲಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ ಕಬ್ಬಿಗೆ ಯೋಗ್ಯ ಬೆಲೆ ನೀಡಬೇಕು ಎಂದು ಒತ್ತಾಯಿಸಿ ಈ ಪ್ರತಿಭಟನೆ ಯೋಗ್ಯವಾಗಿದೆ ನದೀ ತಿರದಲ್ಲಿ ಗುಣಮಟ್ಟದ ಕಬ್ಬು ಬೆಳೆಯುತ್ತಾರೆ ಇಂತಹ ಕಬ್ಬು ಮತ್ತೆಲ್ಲಿಯೂ ಸಹ ಸಿಗಲಾರದು ಕಬ್ಬಿಗೆ ಬೆಲೆ ನಿಗದಿ ಮಾಡುವದು ಸರಕಾರದ ಆದ್ಯ ಕರ್ತವ್ಯವಾಗಿದೆ ಎಂದರು,
ಕಳೆದೆರಡು ದಿನ ಹಿಂದೆ ಗುರ್ಲಾಪೂರ ಹತ್ತಿರ ನಡೆದ ಪ್ರತಿಭಟನೆಯಲ್ಲಿ ಬೆಳಗಾವಿ ಜಿಲ್ಲೆಯ ಅಧಿಕಾರಿಗಳು ೩೨೦೦ ರೂಗಳು ನೀಡಿಸುತ್ತೇವೆಂದು ಜಿಲ್ಲಾಧಿಕಾರಿಗಳು ತಿಳಿಸಿದರೂ ಸಹ ರೈತರು ತಮ್ಮ ಪಟ್ಟು ಬಿಡದೆ ೩೫೦೦ ನೀಡುವ ವರೆಗೆ ರೈತರು ಪ್ರತಿಭಟನೆಯನ್ನು ಮುಂದುವರೆಸಿದರು. ಕಾರ್ಖಾನೆ ಮಾಲೀಕರು ಜಿಲ್ಲಾಧಿಕಾರಿಗಳ ಜೊತೆಗೆ ಮಾತು ಕತೆಯನ್ನು ಮಾಡುತ್ತಿದ್ದಾರೆ. ಸರಕಾರವನ್ನು ನಡೆಸುವ ಶಾಸಕರು ಸಚಿವರು ಕಾರ್ಖಾನೆಯನ್ನು ನಡೆಸುತ್ತಿದ್ದಾರೆ ಆದರಿಂದ ರೈತರ ಗೋಳು ಕೇಳುವವರೇ ಇಲ್ಲ ರೈತರು ಇಂದು ಜೀವದ ಅರಿವಿಲ್ಲದೇ ದುಡಿಯುತ್ತಾರೆ, ಅಂತಹ ಬೆಳೆಗೆ ಬೆಂಬಲ ನೀಡಲು ಆಗದಿದ್ದರೆ ಸರಕಾರವು ಇದ್ದರೆಷ್ಟು ಹೋದರೆಷ್ಟ. ಎಂದರು.
ಹೋರಾಟದಲ್ಲಿ ಪಕ್ಷಾತೀತವಾಗಿ ಇದ್ದಾರೆ ಆದರೆ ಎಲ್ಲರೂ ತಮ್ಮ ಹಿತವನ್ನು ಕಾಣುತ್ತಿದ್ದಾರೆ ಆದರೆ ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ ಓರ್ವ ಮಾಲೀಕ ಒಂದರಿAದ ಹತ್ತು ಉದ್ಯಮ ಆದರೆ ರೈತರ ಒಂದು ಎಕರೆ ಇದ್ದರೆ ಅದನ್ನು ಮಾರಲು ಮುಂದಾಗುತ್ತಾನೆ ಕಾರ್ಖಾನಯ ಮಾಲೀಕರು ಕಬ್ಬಿನಿಂದ ಬಂದ ಲಾಭವನ್ನು ರೈಥರಿಗೂ ನೀಡಬೇಕು ಎಂದು ಒತ್ತಾಯಿಸಿದರು.
ಮಹೇಶ ದೇಶಪಾಂಡೆ ಕಳೆದ ೧೫ ದಿನದಿಂದ ಹೋರಾಟ ನಡೆಯುತ್ತಿದೆ ಆದರೆ ಯಾವ ರಾಜಕರಣಿಯೂ ಸಹ ನಮ್ಮತ್ತ ನೋಡುತ್ತಿಲ್ಲ ಇಂದು ಅತೀ ದೊಡ್ಡ ಮಟ್ಟದ ರೈತರ ಹೋರಾಟ ನಡೆದಿದೆ.ಕಬ್ಬಿಗೆ ಬೆಂಬಲ ಬೆಲೆ ನೀಡದ ಹೊರತು ನಾವು ಪ್ರತಿಭಟನೆ ಹಿಂತೆಗೆಯುವದಿಲ್ಲ. ಕಾರ್ಖಾನೆಯವರು ೧೦ ರಷ್ಟು ಲಾಭಾಂಶ ಪಡೆದರೆ ಸರಕಾರವು ದುಪಟ್ಟಟ್ಟು ಲಾಭ ಗಳಿಸುತ್ತದೆ. ನಿನ್ನೆ ಬೆಳಗಾವಿ ಜಿಲ್ಲಾಧಿಕಾರಿಗಳು ರೈತರು ಮನವಲಿಸಲು ನೋಡಿದ್ದಾರೆ ಆದರೆ ರೈತರು ಅದಕ್ಕೆ ಸೊಪ್ಪು ಹಾಕಿಲ್ಲ ಎಂದರು.
ರೈತ ಮುಖಂಡ ಬಸವರಾಜ ಸಿಂಧೂರ ಮಾತನಾಡಿ ನಾವಿಂದು ರಾಜಕೀಯೇತರವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ರೈತರಿಗೆ ಹೊಟ್ಟೆಯ ಮೇಲೆ ಹೊಡೆಯಬೇಡಿ ರೈತರ ಬೆಳೆಗೆ ಯೋಗ್ಯ ಬೆಲೆ ಯಾವುದೆ ಸರಕಾರವೂ ಸಹ ನೀಡಿಲ್ಲ ನೀಡುತ್ತಿಲ್ಲ. ರಾಜ್ಯದ್ಯಾಂತ ಪ್ರತಿಭಟನೆಯನ್ನು ಮಾಡಿದರೂ ಸಹ ಕಿಂಚಿತ್ತ ಲಾಭವಿಲ್ಲ ದೇಶದಲ್ಲಿ ಕಬ್ಬು ಬೆಳೆಗಾರರ ಎರಡನೇ ರಾಜ್ಯವಾಗಿದೆ. ಕೇಂದ್ರಸರಕಾರವು ಮುಂದೆ ಬಂದು ರಾಜ್ಯ ಸರಕಾರಗಳಿಗೆ ಸೂಚನೆ ನಿಡಬೇಕು ರೈತರಿಗೆ ಸ್ಪಂದಿಸಬೇಕು ಎಂದರು.
ಜಮಖAಡಿ ವಕೀಲರ ಸಂಘ ಕೂಡ ರೈತರಿಗೆ ಬೆಂಬಲ ವ್ಯಕ್ತ ಪಡಿಸಿ ಉಪಾದ್ಯಕ್ಷ ಎಸ್.ಬಿ.ಕಾಳೆ ಹಾಗೂ ಪ್ರದೀಪ ಮೆಟಗುಡ ಮಹಾರಾಜರು,ನ್ಯಾಯವಾದಿ ಯಲ್ಲಪ್ಪ ಹೆಗಡೆ,ಭರ್ಮೇಶ ಪಾಟೀಲ ಮಾತನಾಡಿ ಸರ್ಕಾಕ್ಕೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸುಮಾರು ೪೦೦೦ ಸಾವಿರಕ್ಕೂ ಅಧಿಕ ರೈತರು ಸ್ವಯಂ ಪ್ರೇರಿತವಾಗಿ ಬಂದು ಪ್ರತಿಭಟನೆಯನ್ನು ಮಾಡಿದ್ದಾರೆ.ವಿಜಯಪುರ ಧಾರವಾಡ ಹೆದ್ದಾರಿಯನ್ನು ಬೆಳಗಿನಿಂದ ಬಂದ ಮಾಡಿದ್ದರಿಂದ ಪ್ರಯಾಣಿಕರಿಗೆ ಪ್ರತಿಭಟನೆಯ ಬಿಸಿ ತಟ್ಟಿದಂತಾಗಿದೆ ಎಷ್ಟೋ ಜನ ಪ್ರಯಾಣಿಕರು ಪರದಾಡಿದ್ದಾರೆ.






























