ಕಬ್ಬು ಕಟಾವಿಗೆ ಆಗ್ರಹಿಸಿ ಬೀಗ ಹಾಕಿ ರೈತರ ಪ್ರತಿಭಟನೆ

ಯಡ್ರಾಮಿ:ಡಿ.10:ಉಗರ್ ಶುಗರ್ ಕಾರ್ಖಾನೆ ನಾಗರಹಳ್ಳಿ-ಮಳ್ಳಿ ಅಧಿಕಾರಿಗಳು ಕಬ್ಬು ಕಟಾವು ಮಾಡಲು ಲೇಬರ್ ಸಿದ್ಧತೆ ಮಾಡಿಕೊಳ್ಳದೆ ರೈತರ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿ ಈಚೆಗೆ ಯಡ್ರಾಮಿ ಪಟ್ಟಣದ ಉಗರ್ ಸುಗರ್ (ಆರ್. ಎಸ್.ಕೆ) ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಯಿತು.

ತಹಶೀಲ್ದಾರ್ ದೂರವಾಣಿ ಮೂಲಕ ನಮ್ಮನ್ನು ಸಂಪರ್ಕಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಕಳುಹಿಸಿ ಒಂದು ವಾರದಲ್ಲಿ ಸಮಸ್ಯೆಯನ್ನು ಬಗೆಹರಿಸುವತ್ತೆವೆಂದು ಆಶ್ವಾಸನೆ ನೀಡಿದ್ದಾರೆ.

ಒಂದು ವೇಳೆ ಒಂದುವಾರದಲ್ಲಿ ಲೇಬರ್ ವ್ಯವಸ್ಥೆ ಮಾಡದೆ ಇದ್ದಲ್ಲಿ ರಸ್ತೆ ತಡೆದು ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

ಈ ವೇಳೆ ಅಮೀರ ಪಟೇಲ ಚಿಂಚೋಳಿ, ಬಸ್ಸಯ್ಯ ಮೇಲಿನಮಠ, ಮಲ್ಲಿಕಾರ್ಜುನ ಸೊಮಪ್ಪಗೊಳ, ಚನ್ನವೀರಪ್ಪಗೌಡ ಬಂಡೆಪ್ಪಗೊಳ, ದೇವೇಂದ್ರಪ್ಪಗೌಡ ಕಾಚಾಪುರ, ಮಹ್ಮದಲಿ ಹೊಸಮನಿ, ಮಡಿ-ವಾಳಪ್ಪಗೌಡ ಮಾಳಿ, ರಫೀಕ ಬಾಗವಾನ, ಗುರುಸಿದ್ದಪ್ಪ ಕೆರಟಗಿ, ಮಲ್ಲಿಕಾರ್ಜುನ ದೊಡ್ಡಳ್ಳಿ, ರಹಿಮ್ ಹೊಸಮನಿ, ಚಂದಾಸಾಬ ಚೌದ್ರಿ, ಲಾಳೆಸಾಬ ಹೊಸಮನಿ ಸೇರಿ ಅನೇಕರು ಪಾಲ್ಗೊಂಡಿದ್ದರು.