ಸಂಸದರ ಸತತ ಪ್ರಯತ್ನ ದಿಂದ ಇಂಡಿ, ಸಿಂದಗಿ ರೈತರಿಗೆ ಸಂತಸ

ಇಂಡಿ : ಜೂ.೨೨:ಕೃಷ್ಣ ಭಾಗ್ಯ ಜಲ ನಿಗಮದ ಕಾಲುವೆಯ ಆಧುನಿಕರಣಕ್ಕೆ ಕೇಂದ್ರ ಸರ್ಕಾರದ (ಅWಅ) ಸೆಂಟ್ರಲ್ ವಾಟರ್ ಕಮಿಷನ್ ಬೋರ್ಡ್ ನಿಂದ ಸುಮಾರು ೨೬೬೬ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲು ಸಂಸದ ಶ್ರೀ ರಮೇಶ ಜಿಗಜಿಣಗಿ ಅವರ ಸತತ ಪ್ರಯತ್ನದಿಂದ ಇಂಡಿ ಹಾಗೂ ಸಿಂದಗಿಯ ತಾಲೂಕಿನ ಜನರಿಗೆ ಸಂತಸದ ತಂದಿದೆ ಎಂದು ಬಿಜೆಪಿ ಮಂಡಲ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಅವರು ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಆPಖ ಸಲ್ಲಿಕೆಗಾಗಿ ಕಾಯುತ್ತಿದೆ…
ಕೆಲ ದಿನಗಳಿಂದ ರೈತರು ಪಡುತ್ತಿದ್ದ ಸಂಕಷ್ಟ ಗಮನಿಸಿ ಕಾಲುವೆಗಳ ನವೀಕರಣಕ್ಕೆ ಪ್ರಸ್ತಾಪಿಸಿದ್ದರು ಇದು ರಾಜ್ಯ ಸರ್ಕಾರಕ್ಕೆ ಸಂಬAಧಪಟ್ಟಿದ್ದು ಆದರೂ ಸಂಸದರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಅಷ್ಟಲ್ಲದೆ ಕೆಲವು ತಿಂಗಳ ಹಿಂದೆ ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಈ ಯೋಜನೆ ಬಗ್ಗೆ ಪ್ರಸ್ತಾಪಿಸಿದರು. ಕೃಷ್ಣಭಾಗ್ಯ ಜಲನಿಗಮ ರಾಜ್ಯ ಸರ್ಕಾರಕ್ಕೆ ಸಂಬAಧಪಟ್ಟದ್ದು ಇದರ ಬಗ್ಗೆ ರಾಜ್ಯ ಸರ್ಕಾರ ಯಾವುದೇ ರೀತಿಯ ಸ್ಪಂದನೆ ನೀಡದ ಕಾರಣ ಅವರು ಕೇಂದ್ರ ಸರ್ಕಾರಕ್ಕೆ ಮೊರೆ ಹೋಗಿ… ಕೇಂದ್ರ ಸರ್ಕಾರ ಸ್ಪಂದನೆ ನೀಡಿದ್ದರಿಂದ ಈ ಹಣವನ್ನು ಮಂಜೂರು ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಆPಖ ನಿರೀಕ್ಷೆಯಲ್ಲಿದ್ದ ಕೇಂದ್ರ ಸರ್ಕಾರ.
ಆದ್ದರಿಂದ ರಾಜ್ಯ ಸರ್ಕಾರ ತಕ್ಷಣ ಆPಖ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಮಾಡುತ್ತೆವೆ ಎಂದು ಅವರು ತಿಳಿಸಿದರು.
ರೈತರ ಆಶಾಕಿರಣ ಅಭಿವೃದ್ಧಿಯ ಹರಿಕಾರರು ಜನಪ್ರಿಯ ಸಂಸದ ಸನ್ಮಾನ್ಯ ಶ್ರೀ ರಮೇಶ್ ಜಿಗಜಿಣಗಿ ಅವರಿಗೆ ವಯಕ್ತಿಕ ಹಾಗೂ ಇಂಡಿ ಮತಕ್ಷೇತ್ರದ ಪರವಾಗಿ ಕೋಟಿ ಕೋಟಿ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಬಿಜೆಪಿ ಮಂಡಲ ತಾಲೂಕ ಅಧ್ಯಕ್ಷ
ಶ್ರೀ ಮಲ್ಲಿಕಾರ್ಜುನ ಕಿವಡೆ ತಿಳಿಸಿದರು.