ರಾಗಿ ಖರೀದಿ ನೋಂದಣಿ ಅವಕಾಶಕ್ಕೆ ರೈತರ ಒತ್ತಾಯ

ಕೋಲಾರ ,ಡಿ,೧೭-ಜಿಲ್ಲೆಯ ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ರಾಗಿಯನ್ನು ನೀಡಲು ರಾಜ್ಯ ಸರಕಾರ ಮತ್ತೊಂದು ಬಾರಿಗೆ ನೋಂದಣಿ ಆಗದೆ ಉಳಿದ ರೈತರಿಗೂ ಸಹ ಅವಕಾಶವನ್ನು ನೀಡಬೇಕು ಎಂದು ರೈತರು ರಾಜ್ಯ ಸರಕಾರವನ್ನು ಒತ್ತಾಯ ಮಾಡಿದ್ದಾರೆ.


ಜಿಲ್ಲೆಯಲ್ಲಿ ರಾಗಿ ಬೆಳೆದ ರೈತರ ಅದೃಷ್ಟ ಈ ಬಾರಿ ಖುಲಾಯಿಸುಸಿದೆ. ಉತ್ತಮ ಮಳೆ ಬೆಳೆ ಯಿಂದ ಹೆಚ್ಚುವರಿ ರಾಗಿಯನ್ನು ಬೆಳೆಯಲು ಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ಬೆಳೆ ದ ರಾಗಿಯನ್ನು ಕಟಾವು ಮಾಡಿ, ರಾಗಿ ಖರೀದಿ ಕೇಂದ್ರಕ್ಕೆ ನೀಡಲು ಬಹುತೇಕ ರೈತರು ಜಿಲ್ಲೆಯಲ್ಲಿ ಇದ್ದಾರೆ. ರಾಜ್ಯ ಸರ್ಕಾರ ಕೋಲಾರ ಜಿಲ್ಲೆಗೆ ನೀಡಿರುವ ೧ ಲಕ್ಷ ೬೨ ಸಾವಿರದ ಎರಡು ನೂರು ೬೫ ಕ್ವಿಂಟಾಲ್ ಟಾರ್ಗೆಟ್ ಅನ್ನು ರಾಜ್ಯ ಸರಕಾರ ಹೆಚ್ಚಿಸಿ, ಮತ್ತೊಂದು ಬಾರಿ ರೈತರ ಹಿತ ದೃಷ್ಟಿಯಿಂದ ರಾಗಿ ಖರೀದಿ ಕೇಂದ್ರಕ್ಕೆ ರೈತರು ರಾಗಿ ನೀಡುವ ನೋಂದಣಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.


ಜಿಲ್ಲೆಯ ಬಹುತೇಕ ರೈತರಿಗೆ ಸರ್ಕಾರದಿಂದ ರಾಗಿ ಖರೀದಿಯ ಅವಧಿಯ ಅರಿವು ಇಲ್ಲದ ಕಾರಣ, ನೊಂದಣಿಯ ಕೊನೆಯ ದಿನಾಂಕವೂವಿದ್ದರೂ ಸಹ ಸುಮಾರು ನೂರಾರು ಮಂದಿ ರೈತರು ರಾಗಿ ಖರೀದಿ ಕೇಂದ್ರಕ್ಕೆ ದಾಖಲೆಗಳೊಂದಿಗೆ ಆಗಮಿಸಿದ್ದ, ರೈತರಿಗೆ ರಾಗಿ ಖರೀದಿಸುವ ಟಾರ್ಗೆಟ್ ಪೂರ್ಣಗೊಂಡಿದ್ದು, ರಾಜ್ಯ ಸರ್ಕಾರ ರೈತರಿಗೆ ನೊಂದಣಿ ಅವಕಾಶವನ್ನು ನಿಲ್ಲಿಸಲಾಗಿದೆ ಎಂದು ಹೇಳಿ ಕಳುಹಿಸಿದ ಘಟನೆ ನಡೆಯಿತು.


ಜಿಲ್ಲೆಯ ಆರು ತಾಲೂಕುಗಳಲ್ಲಿ ಸುಮಾರು ಏಳು ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಬಂಗಾರಪೇಟೆ ತಾಲೂಕಿನಲ್ಲಿ ರಾಗಿ ಬೆಳೆ ರೈತರು ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ೨೭೫೫ ಮಂದಿ ರೈತರು ೫೪ ಸಾವಿರದ ೮೮೮ ಕ್ವಿಂಟಾಲ್ ರಾಗಿಯನ್ನು ಬಂಗಾರಪೇಟೆ ರೈತರು ಇದ್ದಾರೆ. ಉಳಿದಂತೆ ಕೋಲಾರ ೧೬೯೧ ಮಂದಿ ರೈತರು ೨೯ ಸಾವಿರದ ೭೧೫ ಕ್ವಿಂಟಲ್, ಮಾಲೂರು ೧೨೩೬ ಮಂದಿಗೆ ಎರಡು ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಇದರಿಂದ ಸುಮಾರು ೬೧ ಸಾವಿರದ ೮೮೪ ಕ್ವಿಂಟಾಲ್ ಇದೆ.ಮುಳಬಾಗಿಲು ೨೯೯ ಮಂದಿ ಯಿಂದ, ಸುಮಾರು ೫,೯೩೧ ಕ್ವಿಂಟಲ್, ಹಾಗೂ ಶ್ರೀನಿವಾಸಪುರ ೪೦೪ ಮಂದಿಯಿಂದ ೭ ಸಾವಿರ ದ ೭೪೩ ಕ್ವಿಂಟಲ್ ಮತ್ತು ಕೆಜಿಎಫ್ ೧೨೮ ಮಂದಿ ರೈತರಿಂದ ಅತಿ ಕಡಿಮೆ ಎರಡು ಸಾವಿರದ ನೂರ ಎರಡು ಮಂದಿ ರಾಗಿಯನ್ನು ರೈತರು ಖರೀದಿ ಕೇಂದ್ರಕ್ಕೆ ನೀಡಲು ಮುಂದಾಗಿದ್ದಾರೆ.


ಕರ್ನಾಟಕ ಆಹಾರ ನಾಗರೀಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಪ್ರಸಾದ್ ಮಾತನಾಡಿ,ಅಕ್ಟೋಬರ್ ಒಂದರಿಂದ ಡಿಸಂಬರ್ ೧೫ ಇಲ್ಲಿವರೆಗೂ ಸುಮಾರು ೮೦೨೬ ಮಂದಿ ರೈತರು ತಮ್ಮ ನೋಂದಣಿಯನ್ನು ಮಾಡಿದ್ದಾರೆ.ಪ್ರಸಕ್ತ ಸಾಲಿನಲ್ಲಿ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಗಿಗೆ ಪ್ರತಿ ಕ್ವಿಂಟಲ್ ರೂ.೪,೮೮೬ಗಳ ದರದಲ್ಲಿ ರಾಜ್ಯ ಸರಕಾರ ಖರೀದಿ ಮಾಡಲಾಗುತ್ತಿದೆ. ರೈತರು ಪ್ರತಿ ಚೀಲದಲ್ಲಿ ೫೦ ಕೆ.ಜಿ ರಾಗಿಯಂತೆ ತಂದುಕೊಡಬೇಕಾಗುತ್ತದೆ. ಸಿಬ್ಬಂದಿಯು ಅದನ್ನ ಗ್ರೈಂಡರ್ ಮೂಲಕ ರಾಗಿಯ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತದೆ. ಆದ್ದರಿಂದ ಎಲ್ಲ ರೈತರು ಉತ್ತಮ ಗುಣಮಟ್ಟದ ರಾಗಿಯನ್ನು ತರಬೇಕೆಂದರು.


ರೈತ ಮುಖಂಡ ಹಾಗೂ ರೈತ ಕೆ. ಶ್ರೀನಿವಾಸಗೌಡ ಮಾತನಾಡಿ, ರಾಜ್ಯ ಸರಕಾರ ದಿಡೀರನೇ ರಾಗಿ ನೋಂದಣಿಯನ್ನು ನಿಲ್ಲಿಸಿದ್ದು, ರೈತರು ರಾಗಿ ಖರೀದಿ ಕೇಂದ್ರಗಳಿಗೆ ರಾಗಿಯನ್ನು ನೀಡಲು ಸಾಧ್ಯವಾಗುತ್ತಿಲ್ಲ, ಇನ್ನೂ ಶೇ. ೫೦ ರಷ್ಟು ರಾಗಿಯನ್ನು ರೈತರು ಕಟಾವು ಮಾಡದೆ ಉಳಿದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಪೂರ್ತಿ ರಾಗಿ ಕಟಾವು ಮುಗಿಯುವುದು ಮಾತ್ರ ಜನವರಿ ೧೫ ರ ಮೇಲೆಯೇ ಮುಗುಯುವುದು, ಜಿಲ್ಲೆಯ ಜನಪ್ರತಿನಿದಿಗಳು ಹಾಗೂ ಜಿಲ್ಲಾಡಳಿತ ರೈತರ ಅನುಕೂಲ ಕ್ಕಾಗಿ ರಾಗಿ ನೋಂದಣಿ ಅವಧಿಯನ್ನು ಜನವರಿ ೨೦ ರ ವರೆಗೂ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದರು.