
ಬಂಗಾರಪೇಟೆ,ಡಿ,೨- ಅಮೇರಿಕ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಪ್ರಧಾನಿಗಳು ಸಹಿ ಹಾಕಬಾರದೆಂದು ಡಿ.೫ ರ ಶುಕ್ರವಾರ ಜೋಳ, ಹಸುಗಳ ಸಮೇತ ಕೋಲಾರ ರೈಲ್ವೇ ಇಲಾಖೆ ಮುತ್ತಿಗೆ ಹಾಕಲು ಬಾಬಾ ಆಂಭೇಡ್ಕರ್ ಪ್ರತಿಮೆ ಮುಂದೆ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಆಮೆರಿಕ ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರಕ್ಕೆ ದೇಶದ ರೈತರು ಮುಖ್ಯವೋ ಅಥವಾ ಅಮೇರಿಕಾ ಕಾರ್ಪೋರೇಟ್ ಕಂಪನಿಗಳ ಹಿತ ಮುಖ್ಯವೋ ಎಂಬುದನ್ನು ದೇಶದ ೪೦ ಕೋಟಿ ಗ್ರಾಮೀಣ ರೈತ ಕೂಲಿ ಕಾರ್ಮಿಕರಿಗೆ ಸ್ವಾಭಿಮಾನದ ಬದುಕು ನೀಡಿರುವ ಹೈನೋದ್ಯಮದ ಕ್ಷೇತ್ರದ ರೈತರಿಗೆ ಬಹಿರಂಗ ಉತ್ತರ ನೀಡಬೇಕೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾನ್ಯ ಪ್ರಧಾನಿಗಳನ್ನು ಒತ್ತಾಯಿಸಿದರು.
ದೇಶದ ರೈತರು ಸ್ವಾಭಿಮಾನಿಗಳು ಹಗಲು ರಾತ್ರಿ ಎನ್ನದೆ ಭೂಮಿ ತಾಯಿಗೆ ವರ್ಷ ಪೂರ್ತಿ ದುಡಿದು ಬೆವರು ಸುರಿಸುವ ರೈತರ ದುಡಿಮೆಯ ಹಾಗೂ ಕೃಷಿ ಕೇತ್ರದ ಮೇಲೆ ಬಂಡವಾಳ ಶಾಹಿಗಳ ಕೆಂಗಣ್ಣು ಬಿದ್ದಿದೆ. ಪ್ರತಿ ಕ್ಷೇತ್ರದಲ್ಲಿ ಪ್ರಮುಖವಾಗಿ ಬೀಜ ರಸಗೊಬ್ಬರ ಕೀಟನಾಶಕಗಳು ಸಹ ಬಹುರಾಷ್ಟ್ರೀಯ ಕಂಪನಿಗಳು ನೀಡಿ ಆಮೇರಿಕದಂತಹ ಬಂಡವಾಳ ಶಾಹಿ ಮತ್ತು ಅಧಿಕಾರಶಾಹಿ ರಾಷ್ಟ್ರಗಳು ನಮ್ಮ ದೇಶದ ರೈತರನ್ನು ಸರ್ಕಾರಗಳ ಮೇಲೆ ಒತ್ತಡ ಹಾಕಿ ಹತೋಟಿಯಲ್ಲಿ ಹಿಡಿದಿಟ್ಟುಕೊಳ್ಳಲು ಕೇಂದ್ರ ಸರ್ಕಾರವೇ ಕುಮ್ಮಕ್ಕು ನೀಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.
ರೈತ ಮಹಿಳೆ ಶೈಲಜ, ರತ್ನಮ್ಮ ಮಾತನಾಡಿ ಕೂಲಿ ಮಾಡುವ ನಮ್ಮ ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಗುಣಮಟ್ಟದ ಆಹಾರವನ್ನು ನೀಡುತ್ತಿರುವ ಹೈನೋದ್ಯಮದ ಮೇಲೆ ಬಹುರಾಷ್ಟ್ರೀಯ ಕಂಪನಿಗಳ ಕಣ್ಣೇಕೆ ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಹಾಲು, ರೇಷ್ಮೇ , ತರಕಾರಿಗಳನ್ನು ಕೇಂದ್ರ ಸರ್ಕಾರ ಹೊರ ದೇಶಗಳಿಗೆ ಏಕೆ ರಪ್ತು ಮಾಡಲು ಒಪ್ಪಂದ ಮಾಡಿಕೊಳ್ಳುವುದಿಲ್ಲ, ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಕರ್ನಾಟಕ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ೩೦-೪೦ ಲಕ್ಷ ಲೀಟರ್ ಹೆಚ್ಚುವರಿ ಹಾಲನ್ನು ಉತ್ಪಾದನೆ ಮಾಡುವ ಮುಖಾಂತರ ಅಗ್ರಸ್ಥಾನದಲ್ಲಿರುವ ರೈತರ ಹಿತ ಕಾಯುವಲ್ಲಿ ಸರ್ಕಾರ ವಿಪಲವಾಗುತ್ತಿರುವ ಜೊತೆಗೆ ಹಾಲಿನ ಜೊತೆ ಮೆಕ್ಕೆ ಜೋಳ ರೈತರ ಬದುಕನ್ನು ಬೀದಿಗೆ ತಳ್ಳಲು ಕೇಂದ್ರ ಸರ್ಕಾರದ ರೈತ ವಿರೋದಿ ದೋರಣೆಯನ್ನು ಖಂಡಿಸಿ ಆಮೆರಿಕಾ ಮುಕ್ತ ಮಾರುಕಟ್ಟೆ ಒಪ್ಪಂದಕ್ಕೆ ಸಹಿ ಹಾಕಬಾರದೆಂದು ಡಿ.೫ರ ಶುಕ್ರವಾರ ಹಸುಗಳ ಸಮೇತ ಕೋಲಾರ ರೈಲ್ವೆ ಇಲಾಖೆ ಮುತ್ತಿಗೆ ಹಾಕುವ ಮುಖಾಂತರ ಸರ್ಕಾರಕ್ಕೆ ಬುದ್ದಿ ಎಚ್ಚರಿಕೆಯನ್ನು ನೀಡಿದರು.
ಸಭೆಯಲ್ಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾ.ಅ ಕದರಿನತ್ತ ಅಪ್ಪೋಜಿರಾವ್, ಗೋವಿಂದಪ್ಪ, ಹ.ಸೇ ಅ ಕಿರಣ್, ಚಾಂದ್‌ಪಾಷ, ಸಂತೋಷ್, ಮಂಗಸಂದ್ರ ತಿಮ್ಮಣ್ಣ, ಗೀರಿಶ್, ರಾಜು, ಮುನಿಕೃಷ್ಣ, ವಿಶ್ವ, ಮುನಿರಾಜು ಸುಗುಣ, ರತ್ನಮ್ಮ ಚೌಡಮ್ಮ, ರಾಧಮ್ಮ, ಗೌರಮ್ಮ, ಶೋಭ ಮುಂತಾದವರಿದ್ದರು


































