
ಜಮಖಂಡಿ :ನ.07:ತಾಲೂಕಿನ ಚಿಕ್ಕಲಕಿ ಕ್ರಾಸ್ ನಲ್ಲಿ ರೈತ ಸಂಘಟನೆಯಿಂದ ರಸ್ತೆ ತಡೆ ನಡೆಸಿ. ರಾಜ್ಯ ಹೆದ್ದಾರಿ ರಸ್ತೆಯ ಮೇಲೆ ಶ್ಯಾಮಿಯಾನ ಹಾಕಿ ಪ್ರತಿಭಟನೆಯನ್ನು ನಡೆಸಿದರು.
ರೈತರ ವಿವಿಧ ಬೇಡಿಕೆಗಳನ್ನು ಒಂದು ಟನ್‍ಗೆ 3500,ರೂ,ಗಳ ಬೆಂಬಲ ಬೆಲೆಯನ್ನು ನೀಡಬೇಕೆಂದು ಸರಕಾರಕ್ಕೆ ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸಿದರು. ಪ್ರತಿಭಟನೆಯಲ್ಲಿ ತಾಲೂಕಿನ ವಿವಿಧ ಮಠದ ಮಠಾಧೀಶರುಗಳಾದ ಆಲಗೂರಿನ ಧರಿದೇವರ ಮಠದ ಪೂಜ್ಯ ಶ್ರೀ ಶಾಂತ ಮೂರ್ತಿ ಲಕ್ಷ್ಮಣ ಮುತ್ಯಾ, ಹುಲ್ಯಾಳದ ಗುರುದೇವಾಶ್ರಮದ ಪುಜ್ಯ ಶ್ರೀ ಹರ್ಷಾನಂದ ಮಹಾಸ್ವಾಮಿಗಳು, ಕುಂಚನೂರಿನ ಕಮರಿಮಠದ ಪುಜ್ಯ ಶ್ರೀ ಸಿದ್ದಲಿಂಗದೇವರು,ಲಿಂಗನೂರಿನ ಪುಜ್ಯ ಶ್ರೀ ಶಿವಪುತ್ರ ಅವಧೂತರು,ಮೈಗೂರಿನ ಪುಜ್ಯ ಶ್ರೀ ಗುರು ಪ್ರಸಾದ ಮಹಾಸ್ವಾಮಿಗಳು, ಚಿಕ್ಕ ಪಡಸಲಗಿಯ ಸಿದ್ದಲಿಂಗ ಆಶ್ರಮದ ಮಾತೋಶ್ರೀ ಅಕ್ಕಮಹಾದೇವಿ ಅಮ್ಮನ್ನವರು,ಮಧರಖಂಡಿಯ ಪುಜ್ಯ ಶ್ರೀ ಬಸಯ್ಯ ಸ್ವಾಮಿಗಳು,ಇಂಚಗೇರಿ ಸಂಪ್ರದಾಯದ ಶ್ರೀ ಪ್ರದೀಪ ಮೆಟಗುಡ ಮಹಾರಾಜರು ಹಾಗೂ ಪ್ರಮುಖ ಉಮೇಶ ಸಿಧ್ರಡ್ಡಿ ಭಾಗವಸಿದರು.
ಮಠಾಧೀಶರು ಮಾತನಾಡಿ,ದೇಶಕ್ಕೆ ರೈತ ಬೆನ್ನಲಬು ಎಂದು ಹೇಳುವ ರಾಜಕೀಯ ಮುಖಂಡರುಗಳು ಇವಾಗ ರೈತನ ಬಗ್ಗೆ ಕಾಳಜಿ ತೋರಿಸದೆ. ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ರೈತರು ಬೆಳದ ಕಬ್ಬಿನ ಬೆಂಬಲ ಬೆಲೆಯನ್ನು ನೀಡದೆ ಮಿನಾಮೇಷೆ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಮಧ್ಯಸ್ಥಿಕೆ ವಹಿಸಿ. ಸಕ್ಕರೆ ಕಾರ್ಖಾನೆಗಳ ಮಾಲಿಕರ ಜೊತೆಗೆ ಸಭೆ ನಡೆಸಿ. ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರಕಾರವನ್ನು ಒತ್ತಾಯಿಸಿದರು.
ರೈತರು ರಾಜ್ಯ ಹೆದ್ದಾರಿ ಬಂದ ಮಾಡಿ. ಶ್ಯಾಮಿಯಾನ ಹಾಕಿ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಭಾಗಿಯಾಗಿದ ಎಲ್ಲ ರೈತರಿಗೆ ಹಾಗೂ ಹೋರಾಟಗಾರರಿಗೆ ನಮ್ಮ ಮಠಗಳಿಂದ ಅನ್ನ ಸಂತರ್ಪಣೆಯನ್ನು ಮಾಡುತ್ತೇವೆ. ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು.























