
ಕೋಲಾರ ನ,೮- ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ ಪ್ರತಿ ಟನ್ ಕಬ್ಬುಗೆ ೩೫೦೦ ಬೆಲೆ ಘೋಷಣೆ ಮಾಡಿಬೇಕೆಂದು ರೈತ ಸಂಘದಿಂದ ಪಲ್ಲವಿ ಸರ್ಕನಲ್ಲಿ ಕಬ್ಬು ಸಮೇತ ಹೋರಾಟ ಮಾಡಿ ತಾಲ್ಲೂಕು ದಂಡಾಧಿಕಾರಿಗಳ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ವೃತ್ತದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ನಾರಾಯಣಗೌಡ ನೇತ್ರದಲ್ಲಿ ಸಂಘಟಿತರಾಗಿ ರಸ್ತೆ ತಡೆ ನಡಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಮಹಿಳಾ ಜಿಲ್ಲಾದಕ್ಷೆ ಎ ನಳಿನಿಗೌಡ ಮಾತನಾಡಿ ಇಡೀ ದೇಶಕ್ಕೆ ಅನ್ನಹಾಕುವ ಅನ್ನದಾತನಿಗೆ ಅನ್ಯಾಯವಾದಗ ಕೋಲಾರ ಜಿಲ್ಲೆಯ ರೈತ ಸಂಘ ಸದಾ ರೈತರ ನಿಲ್ಲುವು ಜೊತೆಗೆ ಕಬ್ಬ ಬೆಳೆಗಾರರ ಹೋರಾಟಕ್ಕೆ ಬೆಂಬಲ ಸೂಚಿಸಿ ೨೪ಗಂಟೆಯಲ್ಲಿ ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿದೆ ಹೋದರೆ ಲಕ್ಷಾಂತರ ರೈತರರೊಂದಿ ರಾಷ್ಟ್ರೀಯ ರಾಜ್ಯ ಹಾಗೂ ಗ್ರಾಮೀಣ ರಸ್ತೆಗಳನ್ನು ಬಂದ್ ಮಾಡುವ ಎಚ್ಚರಿಕೆಯನ್ನು ರೈತ ವಿರೋಧಿ ಸರ್ಕಾರಗಳಿಗೆ ನೀಡಿದರು.
ರೈತ ಸಂಘ ರಾಜ್ಯ ಉಪಾಧ್ಯಕ್ಷ ಕೆ ನಾರಾಯಣಗೌಡ ಮಾತನಾಡಿ ರೈತರು ಕಷ್ಟ ಪಟ್ಟು ಬೆಳೆದ ಕಬ್ಬುಗೆ ಪ್ರತಿ ಟನ್‌ಗೆ ೩೫೦೦ ಘೋಷಣೆ ಮಾಡಿ ಬೆವರಿಗೆ ತಕ್ಕ ಬೆಲೆ ನೀಡಿ ಎಂದು ಕೇಂದ್ರ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ೭ ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಸ್ಪಂದಿಸದ ಸರ್ಕಾರ ರೈv ವಿರೋಧಿ ಧೋರಣೆಯನ್ನು ಅನುಸರಿಸುತ್ತಿದ್ದೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರು ಯಾವುದೇ ಜನ ಪ್ರತಿನಿಧಿಗಳ ಹಾಗೂ ಸರ್ಕಾರದ ಆಸ್ತಿಯನ್ನು ಕೇಳುತ್ತಿಲ್ಲ ಕಷ್ಟಪಟ್ಟು ಬೆಳೆದಿರುವ ರೈತರ ಕಬ್ಬಿನಲ್ಲಿ ಪ್ರತಿ ಟನ್‌ಗೆ ಸಕ್ಕರೆ ಕಾರ್ಖಾನೆ ಹತ್ತು ಸಾವಿರದಿಂದ ಹದಿನೈದು ಸಾವಿರದವರೆಗೆ ಲಾಭ ಪಡೆಯುತ್ತಾರೆ ಆದರೆ ಚಳಿ ಮಳೆ ರಾತ್ರಿ ಹಗಲು ದುಡಿಯುವ ರೈತನಿಗೆ ಪ್ರತಿ ಟನ್‌ಗೆ ೩೫೦೦ ಘೋಷಣೆ ಮಾಡಲು ಹಿಂದೆ ಮುಂದೆ ನೋಡುತ್ತಿರುವುದು ನ್ಯಾಯವೇ? ಎಂದು ಪ್ರಶ್ನೆ ಮಾಡಿದರು.
ಜಿಲ್ಲಾಧಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ ನಮ್ಮ ಬೆವರ ಹನಿಗೆ ತಕ್ಕ ಬೆಲೆ ಕೊಡಿ ಹಾಗೂ ಕಾರ್ಖಾನೆಗಳ ಮಾಲೀಕರು ರೈತರಿಗೆ ಮಾಡುತ್ತಿರುವ ತೂಕದ ಮೋಸ ಸರಿಪಡಿಸಿ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಹತ್ತು ಸಾವಿರ ಕೋಟಿ ಅನುಧಾನವನ್ನು ಮೀಸಲು ಇಡಿ ಎಂದು ಅನ್ನಧಾತರು ಸತತವಾಗಿ ೭ ದಿನದಿಂದ ಗುರ್ಲಾಪುರ ರಾಜ್ಯ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಮಾಡಿ ರಸ್ತೆಯಲ್ಲಿಯೇ ಅನ್ನಧಾತನು ಹೋರಾಟವನ್ನು ಮಾಡುತ್ತಿದ್ದರು ಮಾನವಿಯತೆ ಇಲ್ಲದ ಹಾಗೂ ರೈತರ ಮೇಲೆ ಕಾಳಜಿ ಇಲ್ಲದ ಸರ್ಕಾರ ಅನ್ನದಾತನ್ನು ರಸ್ತೆಯಲ್ಲಿ ನಿಲ್ಲಿಸಿರುವುದು ದೃರಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲಾ ಸಕ್ಕರೆ ಕಾರ್ಖಾನೆಗಳು ಕಾಗ್ರೇಂಸ್ ಸರ್ಕಾರದ ಶಾಸಕರ ಮಾಲಿಕತ್ವದಲ್ಲಿರುವುದರಿಂದ ಕ್ರಮ ಕೈಗೊಳ್ಳಲು ಮಾನ್ಯ ಮುಖ್ಯಮಂತ್ರಿಗಳು ಹಿಂದೇಟು ಹಾಕುತ್ತಿದ್ದರೆ ರೈತ ಪರ ನಿಂತರೆ ಮುಖ್ಯಮಂತ್ರಿ ಕುರ್ಚಿ ಅಲಗಾಡುವ ಭೀತಿಯಲ್ಲಿ ಸರ್ಕಾರಕ್ಕೆ ಕಬ್ಬುಬೆಳೆಗಾರರ ಹೋರಾಟ ನುಂಗಲಾರದ ಬಿಸಿ ತುಪ್ಪವಾಗಿದೆ ಎಂದು ಆರೋಪಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳನ್ನು ೪೮ ಗಂಟೆಗಳಲ್ಲಿ ಈಡೇರಿಸಿ ರೈತ ಪರ ಬೇಡಿಕೆಯಾದ ಪ್ರತಿ ಟನ್‌ಗೆ ೩೫೦೦ ಬೆಲೆ ನಿಗಧಿಮಾಡಿ ರಸ್ತೆಯಲ್ಲಿರು ಅನ್ನಧಾತನ ಪರ ನಿಲ್ಲಬೇಕೆಂದು ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ತಾಲ್ಲೂಕು ಉಪ ದಂಢಾಧಿಕಾರಿಗಳು ಮಾತನಾಡಿ ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಮುಖಂಡ ಬಂಗವಾದಿ ನಾಗರಾಜುಗೌಡ,.ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಕುವಣ್ಣ, ಗೋವಿಂದಪ್ಪ ಚಂದ್ರಪ್ಪ ವಕ್ಕಲೇರಿ ಹನುಮಯ್ಯ ಅಪ್ಪೋಜಿರಾವ್, ಯಲ್ಲಣ್ಣ, ರಾಮಸಾಗರದ ವೇಣು, ಬಾಬು, ಕೇಶವ ಸುಪ್ರಿಂ ಚಲ, ಗಂಗಾಧರ್ ಮುನಿರಾಜು ಶೈಲಜ ರತ್ನಮ್ಮ ಬಾಗ್ಯಮ್ಮ ಗೌರಮ್ಮ ಚೌಡಮ್ಮ ಗೀತಮ್ಮ ವೆಂಕಟಮ್ಮ ಮುಂತಾದವರು ಇದ್ದರು.


























