
ಬಂಗಾರಪೇಟೆ,ನ.೧೯- ಕೇಂದ್ರ ಸರ್ಕಾರದಿಂದ ಪ್ರತಿ ಟನ್ ಕಬ್ಬುಗೆ ೪ ಸಾವಿರ ರೂಗಳು ನಿಗಧಿ ಮಾಡಿ ಮುಂಗಾರು ಮಳೆಯಿಂದ ನಷ್ಟವಾಗಿರುವ ಬೆಳೆ ಪರಿಹಾರ ವಿತರಣೆ ಮಾಡಲು ೨ ಸಾವಿರ ಕೋಟಿ ರೂ ಅನುಧಾನವನ್ನು ಬಿಡುಗಡೆ ಮಾಡಿ ನಕಲಿ ಬಿತ್ತನೆ ಬೀಜ ಕೀಟ ನಾಶಕ ನಿಯಂತ್ರಣಕ್ಕೆ ಪ್ರಬಲ ಕಾನೂನು ಜಾರಿ ಮಾಡಿ ಪ್ರತಿ ಜಿಲ್ಲೆಗೊಂದು ಗುಣಮಟ್ಟ ಔಷಧಿ ನಿಯಂತ್ರಣ ಪ್ರಯೋಗಾಲಯ ಸ್ಥಾಪನೆ ಮಾಡಬೇಕೆಂದು ರೈತಸಂಘದಿಂದ ಕಬ್ಬು ಹಾಗು ನಷ್ಟಬೆಳೆ ಸಮೇತ ರೈಲ್ವೆ ಇಲಾಖೆಯ ಮುಂದೆ ಹೋರಾಟ ಮಾಡಿ ರೈಲ್ವೆ ಅಧಿಕಾರಿಗಳ ಮುಖಾಂತರ ಮನವಿ ನೀಡಿ ಒತ್ತಾಯಿಸಲಾಯಿತು.
ಇಡಿ ದೇಶಕ್ಕೆ ಅನ್ನ ಹಾಕುವ ಅನ್ನಧಾತನ್ನು ಸರ್ಕಾರ ನಿರ್ಲಕ್ಷ್ಯೇ ಮಾಡಿದರೆ ಮುಂದಿನ ದಿನಗಳಲ್ಲಿ ತುತ್ತು ಅನ್ನಕ್ಕಾಗಿ ಹೊರದೇಶದ ಬಳಿ ಕೈಚಾಚಬೇಕಾದ ಪರಸ್ಥಿತಿ ಬರುವ ಕಾಲ ದೂರವಿಲ್ಲ ಕೈಗಾರಿಗಳಿಗೆ ಆದ್ಯತೆ ಕೃಷಿ ಕ್ಷೇತ್ರಕ್ಕೆ ನೀಡುತ್ತಿಲ್ಲ ಕೈಗಾರಿಕೆ ಮಾಲೀಕರು ನಷ್ಠವೆಂದು ತಪ್ಪು ವರಧಿ ನೀಡಿದರೆ ನೂರಾರು ಕೋಟಿ ನೀಡುವ ಸರ್ಕಾರಗಳು ಕನಿಷ್ಠ ರೈತ ನಷ್ಠವಾದರೆ ರೈತನ ಸಮಸ್ಯೆಯನ್ನು ಗಂಭಿರವಾಗಿ ಏಕೆ ಪರಿಗಣಿಸುತ್ತಿಲ್ಲ. ಇಡಿ ದೇಶದ ಯುವ ಜನತೆಯನ್ನು ಹಾಳು ಮಾಡುವ ಕ್ರಿಕೆಟ್ ಕ್ರೀಡೆಗೆ ನೀಡುವ ಆದ್ಯತೆ ರೈತನ ಸಮಸ್ಯೆಗೆ ನೀಡುತ್ತಿಲ್ಲ. ಮಳೆ ಬಂದರೆ ಕ್ರಿಕೆಟ್ ಮೈಧಾನಕ್ಕೆ ರಕ್ಷಣೆ ಕೊಡುವ ಸರ್ಕಾರಗಳು ರೈತರ ಬೆಳೆ ಮಳೆಯಿಂದ ನಷ್ಠವಾದರೆ ಏಕೆ ರಕ್ಷಣೆ ಕೊಡುತ್ತಿಲ್ಲ ಎಂಬುದನ್ನು ಅನ್ನ ತಿನ್ನುವ ಸರ್ಕಾರಗಳು ಆತ್ಮ ವಿಮರ್ಶೆ ಮಾಡಿಕೊಳ್ಳುವ ಮುಖಾಂತರ ರೈತರ ರಕ್ಷಣೆಗೆ ನಿಲ್ಲಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಪ್ರತಿ ವರ್ಷ ರೈತರು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವ ಬೆಳೆ ಕೈಗೆ ಬರುವ ಸಮಯದಲ್ಲಿ ಅತಿವೃಷ್ಠಿ ಅನಾವೃಷ್ಠಿ ಪ್ರಕೃತಿ ವಿಕೋಪಗಳು ಇಲ್ಲವೇ ನಕಲಿ ಬಿತ್ತನೆ ಬೀಜಗಳ ಹಾವಳಿಗಳಿಗೆ ಸಿಲುಕಿ ಸಾವಿರಾರು ಹೆಕ್ಟರ್ ಕೃಷಿ ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ನಾಶವಾಗಿ ಹಾಕಿದ ಬಂಡವಾಳ ಕೈಗೆ ಸಿಗದೇ ಖಾಸಗಿ ಸಾಲಕ್ಕೆ ಸಿಲುಕಿರುವ ರೈತರು ಸರ್ಕಾರಗಳಿಂದ ರೈತರ ರಕ್ಷಣೆಗೆ ಶಾಶ್ವತ ಪರಿಹಾರ ಕಲ್ಪಿಸುತ್ತಾರೆಂದು ಜಾತಕ ಪಕ್ಷಗಳಂತೆ ಕಾಯುತ್ತಿರುವ ರೈತರ ಸಮಸ್ಯೆಗಳಿಗೆ ಸರ್ಕಾರಗಳು ಸ್ಪಂದಿಸಿದೇ ಇರುವುದು ದುರಾದೃಷ್ಟಕರ ವಿಚಾರವಾಗಿದೆಂದು ರೈತ ವಿರೋಧಿ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಂಗಾರು ಮಳೆಯಿಂದ ಲಕ್ಷಾಂತರ ಹೆಕ್ಟಾರ್ ಬೆಳೆಗಳು ನಾಶವಾಗಿ ಹಾಕಿದ ಬಂಡವಾಳ ಕೈಗೆ ಸಿಗದೇ ಸರ್ಕಾರ ನೀಡುವ ಪರಿಹಾರಕ್ಕಾಗಿ ಕಾಯುತ್ತಿರುವ ರೈತರಿಗೆ ರಾಜ್ಯ ಸರ್ಕಾರ ನಮ್ಮ ಬಳಿ ಅನುಧಾನವಿಲ್ಲ ಕೇಂದ್ರ ಸರ್ಕಾರ ೨ ಸಾವಿರ ಕೋಟಿ ಅನುಧಾನ ಬಿಡುಗಡೆ ಮಾಡಲು ಪತ್ರ ಬರೆದಿದ್ದೆವೆಂದು ಪ್ರತಿ ವರ್ಷವು ರೈತರಿಗೆ ನೀಡಲು ಅನುಧಾನಕ್ಕಾಗಿ ತಾರತಮ್ಯ ಮಾಡುತ್ತಿರುವುದರಿಂದ ರೈತರು ಪರಿಹಾರವೂ ಬೇಡ ಕೃಷಿಯೂ ಬೇಡ ಇರುವ ಭೂಮಿಯನ್ನು ಮಾರಾಟ ಮಾಡಿ ಕೂಲಿ ಮಾಡುವ ನಿರ್ಧಾರ ಕೈಗೊಳ್ಳುವ ಮಟ್ಟಕ್ಕೆ ಸರ್ಕಾರಗಳು ನಡೆದುಕೊಳ್ಳುತ್ತಿವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ರೈಲ್ವೆ ಅಧಿಕಾರಿಗಳ ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಮುಖಾಂತರ ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.
ಹೋರಾಟದಲ್ಲಿ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಜಿಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ತಾ ಅಧ್ಯಕ್ಷ ಕದಿರನತ್ತ ಅಪ್ಪೋಜಿರಾವ್, ಸಂತೋಷ್, ಲಕ್ಷ್ಮಣ, ಕಾಮುಸಮುದ್ರದ ಹೋಬಳಿ ಅಧ್ಯಕ್ಷ ಮುನಿಕೃಷ್ಣ, ವಿಶ್ವ, ಚಾಂದ್ ಪಾಷ, ಮುನಿರಾಜು, ರಾಮಸಾಗರ ವೇಣು, ಬಾಬು, ಮಂಜುನಾಥ, ಸುರೇಶ ಬಾಬು, ಮಂಗಸಂದ್ರ ತಿಮ್ಮಣ್ಣ, ಕಿರಣ್, ಬಾಬಾಜನ್, ಗಿರೀಶ್, ರಾಜು, ಸು. ಶೈಲಜ, ಚೌಡಮ್ಮ, ನಾಗರತ್ನ, ಪವಿತ್ರ, ವೆಂಕಟಮ್ಮ, ಸುಶೀಲ, ರತ್ನಮ್ಮ, ಭಾಗಮ್ಮ ಮುಂತಾದವರು ಇದ್ದರು.



























