ಮುಳಬಾಗಿಲು,ಆ.೧೧-ರಾಷ್ಟ್ರೀಯ.ಗ್ರಾಮೀಣ ಹೆದ್ದಾರಿ ೨೩೪ರ ಗುತ್ತಿಗೆದಾರರ ನಿರ್ಲಕ್ಷ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಮರ್ಪಕವಾದ ಚರಂಡಿ ನಿರ್ವಹಣೆ ಇಲ್ಲದೆ ಮುಂಗಾರು ಮಳೆ ನೀರಿನಿಂದ ನಷವಾಗಿರುವ ತಿಮ್ಮರಾಯುತನಹಳ್ಳಿ ರೈತರಿಗೆ ಪ್ರತಿ ಎಕರೆಗೆ ೧೦ ಲಕ್ಷ ರೂ ಪರಿಹಾರ ನೀಡಿ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳುವಂತೆ ಆ.೧೨ ರ ಮಂಗಳವಾರದಂದು ಮಣೇನಹಳ್ಳಿ ಗುತ್ತಿಗೆದಾರರ ಕ್ಯಾಂಪಸ್‌ಗೆ .ಮುತ್ತಿಗೆ ಹಾಕಲು ಬೆಳಗ್ಗೆ ೭ಗಂಟೆಗೆ ನೊಂದ ರೈತರ ಮಳೆಯಿಂದ ನಷ್ಟದ ತೋಟದಲ್ಲಿ ಕರೆದಿದ್ದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಲಕ್ಷಾಂತರ ರೂಪಾಯಿ ಖಾಸಗಿ ಸಾಲ ಮಾಡಿ ಬೆಳೆದಿರುವ ಹೂ, ಜೋಳ, ಟೋಮೋಟೊ ಮತ್ತಿತರ ವಾಣಿಜ್ಯ ಬೆಳೆಗಳಿಗೆ ರಾಷ್ಟ್ರೀಯ ಹೆದ್ದಾರಿ ೨೩೪ ಅಧಿಕಾರಿಗಳ ಬೇಜವಬ್ದಾರಿ ಗುತ್ತಿಗೆದಾರರ ನಿರ್ಲಕ್ಷದಿಂದ ಸಮರ್ಪಕವಾಗಿ ಮಳೆ ನೀರು ಹರಿಯಲು ಚರಂಡಿ ಹಾಗೂ ರಾಜಕಾಲುವೆಗಳನ್ನು ಅಭಿವೃದ್ಧಿ ಪಡಿಸದೆ ನಿರ್ಲಕ್ಷೆ ಮಾಡಿರುವುದರಿಂದ ೩ ದಿನಗಳಿಂದ ಸುರಿಯುತ್ತಿರುವ ದಾರಾಕಾರ ಮಳೆ ಸಾರಾಗವಾಗಿ ಹರಿಯಲು ಚರಂಡಿ ರಾಜಕಾಲುವೆಗಳಿಲ್ಲದೆ ನೇರವಾಗಿ ರೈತರ ಬೆಳೆಗಳಿಗೆ ನುಗ್ಗಿ ಸಂಪೂರ್ಣವಾಗಿ ಬೆಳೆ ನಾಶವಾಗುತ್ತಿದ್ದರೂ ಸಮಸ್ಯೆಯನ್ನು ಅಧಿಕಾರಿಗಳು ನಿರ್ಲಕ್ಷೆ ಮಾಡುತ್ತಿದ್ದಾರೆಂದು ರೈತ ವಿರೋದಿ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ರೈತ ಸಂಘದ ರಾಜ್ಯ ಉಪಾದ್ಯಕ್ಷ್ಯ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ನೊಂದ ರೈತ ವೆಂಕಟೇಶ್ ಮತ್ತು ಮಹೇಂದ್ರ ಮಾತನಾಡಿ ಭೂಮಿ ತಾಯಿಗೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಬಂಡವಾಳ ಹಾಕಿ ಜೋಳ, ಹೂ, ಟೊಮೋಟೊ, ಕೋಸು ಬೆಳೆ ಹಾಕಿ ರೋಗಗಳಿಂದ ರಕ್ಷಣೆ ಮಾಡಿಕೊಂಡು ಬಂದಿದ್ದೇವೆ ದಯವಿಟ್ಟು ರಾಜಕಾಲುವೆ ಚರಂಡಿ ಒತ್ತುವರಿ ತೆರೆವುಗೊಳಿಸಿ ಮಳೆ ನೀರು ತೋಟಗಳ ಮೇಲೆ ಹರಿಯದಂತೆ ಜಾಗೃತಿವಹಿಸಿ ಎಂದು ೩ ತಿಂಗಳಿಂದ ಗುತ್ತಿಗೆದಾರರನ್ನು ಕಣ್ಣೀರು ಹಾಕಿ ಕೈಮುಗಿದು ಬೇಡಿಕೊಂಡರೂ ರೈತರ ಮಾತು ನಿರ್ಲಕ್ಷೆ ಮಾಡಿರುವುದರಿಂದ ಇಂದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಬೆಳೆ ರಸ್ತೆ ಗುತ್ತಿಗೆದಾರರು ನಾಶ ವ ಮಾಡಿದ್ದಾರೆಂದು ರೈತ ವಿರೋದಿ ದೋರಣೆಗೆ ಆಕೋಶ ವ್ಯಕ್ತಪಡಿಸಿದರು.
ಗುತ್ತಿಗೆದಾರರನ್ನು ನಮ್ಮ ಬೆಳೆ ರಕ್ಷಣೆ ಮಾಡಿ ಎಂದು ಕೇಳಿದರೆ ಇದು ರಾಷ್ಟ್ರೀಯ ಗ್ರಾಮೀಣ ಹೆದ್ದಾರಿ ಕಾಮಗಾರಿಗೆ ತೊಂದರೆ ಕೊಟ್ಟರೆ ನಿಮ್ಮ ವಿರುದ್ಧ ಕೇಸು ದಾಖಾಲಿಸಿ ಬಳ್ಳಾರಿಯ ಜೈಲಿಗೆ ಹಾಕುತ್ತಾರೆ ಎಂದು ಬೆದರಿಸುವ ಗುತ್ತಿಗೆದಾರರ ವಿರುದ್ಧ ಅವರಿಗೆ ಗುಲಾಮರಾಗಿರುವ ಅದಿಕಾರಿಗಳ ವಿರುದ್ಧ ಯುವ ರೈತರು ಅಕ್ಕೋಷ ವ್ಯಕ್ತ ಪಡಿಸಿದರು
೨೪ ಗಂಟೆಯಲ್ಲಿ ಅಧಿಕಾರಿಗಳು ಗುತ್ತಿಗೆದಾರರು ರೈತರ ತೋಟಕ್ಕೆ ಬಂದು ವೀಕ್ಷಣೆ ಮಾಡಿ ನಷವಾಗಿ ರುವ ಪ್ರತಿ ಎಕರೆಗೆ ೧೦ ಲಕ್ಷ ಪರಿಹಾರ ವಿತರಣೆ ಮಾಡದೆ ಇದ್ದರೆ ಆ.೧೨ ರ ಮಂಗಳವಾರ ನಷ್ಟ ಬೆಳೆ ಸಮೇತ ಮಣೇನಹಳ್ಳಿ ಗುತ್ತಿಗೆದಾರರ ಕ್ಯಾಂಪಸ್ ಮುತ್ತಿಗೆ ಹಾಕುವ ಜೊತೆಗೆ ಪರಿಹಾರ ಸಿಗುವವರೆಗೂ ಕಾಮಗಾರಿ ಸ್ಥಗಿತಗೊಳಿಸುವ ಮೂಲಕ ರೈತರ ಎರಡನೇ ಮುಖ ತೋರಿಸುವ ಎಚ್ಚರಿಕೆಯನ್ನು ನೀಡಿದರು.
ಸಭೆಯಲ್ಲಿ ಲೋಕೇಶ್. ವೆಂಕಟೇಶ. ದಿವಾಕರ..ಅನಂದ. ಮಣಿಕಂಠ.ಜಯಪಾಲ್. ಗೌತಮ್ಮ. ಪವನ ಕುಮಾರ. ನಾಜಿರ್. ಚಂಗ ರಡ್ಡಿ. ವಿಶ್ವ ನಾಥ ರಡ್ಡಿ. ನಾಗರಾಜ ರಾಜು, ತಾ.ಆ ಯಲುವಳ್ಳಿ ಪಭಾಕರ್, ಹೆಬ್ಬಣಿ ಆನಂದ್‌ರೆಡ್ಡಿ, ರೈತರಾದ ದ್ಯಾವಪ್ಪ, ಜನಾರ್ಧನ್, ನಟರಾಜ್, ರಾಜಣ್ಣ, ಮುಂತಾದವರಿದ್ದರು.


























