Home ಜಿಲ್ಲೆ ರೈತರೆ ನನ್ನ ದೇವರು : ಅದೃಷ್ಯ ಕಾಡಸಿದ್ಧೇಶ್ವರ ಶ್ರೀ

ರೈತರೆ ನನ್ನ ದೇವರು : ಅದೃಷ್ಯ ಕಾಡಸಿದ್ಧೇಶ್ವರ ಶ್ರೀ

ಚಡಚಣ:ಮೇ.29: ಸಿದ್ದೇಶ್ವರ ಶ್ರೀಗಳು ಚಡಚಣಲ್ಲಿಯೇ ಬಾಲ್ಯದಲ್ಲಿ ಶಿಕ್ಷಣ ಪಡೆದಿದ್ದರಿಂದ ಜೋತೆಗ ಅವರಿಗೆ ರೈತರ ಮೇಲೆ ಅಪಾರವಾದ ಪ್ರೀತಿ ಇದ್ದ ಸಲುವಾಗಿ, ಇಲ್ಲಿಯೇ ಮೇಂದ್ರಕುಮಾರ ನಾಯಕ ಫೌಂಢೇಶ ವತಿಯಿಂದ ಗುರು ನಮನ ಹಾಗೂ ಜೋಡೇತ್ತಿನ ಕೃಷಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ನಿಸರ್ಗದೊಂದಿಗೆ ಹೊರಾಟ ಮಾಡಿ ತಾನು ಬೆಳೆದ ಅನ್ನವನ್ನು ಜಗತ್ತಿನ ಜನರಿಗೆ ನೀಡುವುದರ ಮೂಲಕ ಅವರ ಹೊಟ್ಟೆ ತುಂಬಿಸುತ್ತಾನೆ, ಆದ್ದರಿಂದ ರೈತರೆ ನನ್ನ ನೀಜವಾದ ದೇವರು ಎಂದು ಹೇಳಿದರು.

ಚಡಚಣ ಪಟ್ಟಣದ ಗುರುಕೃಪಾ ಮಂಗಲ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರು ನಮನ ಹಾಗೂ ಜೋಡೇತ್ತಿನ ಕೃಷಿಕರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಅವರು ಮಾತನಾಡಿದರು.

ಅಧ್ಯಾತ್ಮೀಕ ಚಿಂತಕ ಜಂಭುನಾಥ ಮಳಿಮಠ ಮಾತನಾಡಿ: ರೈತರು ಹೊಲಗಳನ್ನು ಮಾರಿ ಪಟ್ಟಣದಲ್ಲಿ ಪ್ರಾಟ್ ತಗೊಬೇಡಿ, ಇಂದಿಲ್ಲ ನಾಳೆ ಭೂಮಿಗೆ ಬಹಳಷ್ಟು ಬೆಲೆ ಬರುತ್ತದೆ, ಪ್ರತೊಯೊಬ್ಬರು ಗೋವುಗಳನ್ನು, ಎತ್ತುಗಳನ್ನು ಸಾಕುವುದರ ಮೂಲಕ ಅವುಗಳನ್ನು ಸಂರಕ್ಷಣೆ ಮಾಡಿ, ಋಷಿಮುನಿಗಳಿಂದ, ಪಂಚಭೂತಗಳಿಂದ ಈ ದೇಶ ನಡೆಯುತ್ತಿದೆ ಎಂದ ಅವರು ತಂದೆ ತಾಯಿಗಳು ಮಕ್ಕಳಿಗೆ ಒಳ್ಳೆ ಸಂಸ್ಕಾರ ನೀಡಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಾದ್ವಿ ಯೋಗೇಶ್ವರಿ ಮಾತಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ವೇಳೆ ಷಡಕ್ಷರಿ ಮಹಾಸ್ವಾಮಿಗಳು, ಯೋಗಾನಂದ ಸ್ವಾಮಿಗಳು, ಗುರುಪಾದೇಶ್ವರ ಶಿವಾಚಾರ್ಯರು, ವಿಜಯ ಮಹಾಂತೇಶ್ವರ ಶಿವಾಚಾರ್ಯರು, ಮಹಾಂತೇಶ ಹೀರೆಮಠ ಶಾಸ್ತ್ರೀಗಳು ಸೇರಿದಮತೆ ವಿವಿಧ ಮಠಾಧೀಶರು, ಪಟ್ಟಣದ ಪ್ರಮುಖ ಗಣ್ಯಮಾನ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುಮಾರು 300 ಅಧಿಕ ಜೋಡೇತ್ತಿನ ಕೃಷಿಕರಿಗೆ ಶಾಲು ಹೊದೊಸಿ ಸನ್ಮಾನಿಸಿ ಗೌರವಿಸಲಾಯಿತು.