ಧೂಳಿಗೆ ಬೆಳೆ ಬಲಿ ಕಂಗಾಲಾದ ರೈತರು

ಸುರೇಶ್ ಬಿಜನಳ್ಳಿ
ಸೇಡಂ,ಜ,04: ತೊಗರಿ ಬೆಳೆಗೆ ಪ್ರಖ್ಯಾತಿ ಪಡೆದ ಕಲಬುರ್ಗಿ ಜಿಲ್ಲೆಗೆ ಈ ವರ್ಷ ತೊಗರಿಗೆ ಗೊಡ್ಡು ರೊಗ ಬಂದಿರುವುದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ತಾಲೂಕಿನ ಮಳಖೇಡ,ಊಡಗಿ, ದಿಗ್ಗಾಂವ, ರೈತರ ಜಮೀನುಗಳಲ್ಲಿ ಸ್ಥಳೀಯ ರಾಜಶ್ರೀ ಸಿಮೆಂಟ್ ಕಾರ್ಖಾನೆಯಿಂದ ಹೊರಬರುತ್ತಿರುವ ಅತಿಯಾದ ಧೂಳಿನಿಂದಾಗಿ ಸುತ್ತಮುತ್ತಲಿನ ಗ್ರಾಮಗಳ ರೈತರು ಬೆಳೆದಿದ್ದ ತೊಗರಿ, ಕಡಲೆ ಹಾಗೂ ಜೋಳದ ಬೆಳೆಗಳು ಸಂಪೂರ್ಣ ನಾಶವಾಗುತ್ತಿದರೇ,ಮಂಜಿನೊಂದಿಗೆ ಸೇರಿದ ಸಿಮೆಂಟ್ ಧೂಳು ಗಿಡಗಳ ಮೇಲೆ ಗಟ್ಟಿಯಾಗಿ ಅಂಟಿಕೊಂಡಿದ್ದು,ಗಿಡಗಳು ಸುಟ್ಟು ಹೋದಂತೆ ಕಾಣುತ್ತಿವೆ.

ಮತ್ತೊಂದು ಬರೆ ಎಳದಂತೆ ಕಂಪನಿಯ ಸ್ಟೇಷನ್ ತಾಂಡದಿಂದ ಮಳಖೇಡ ದರ್ಗಾದವರೆಗೂ ಸಿಸಿ ರಸ್ತೆ ಮಾಡಲಾಗುತ್ತಿದ್ದು ರಸ್ತೆಯ ಅಕ್ಕಪಕ್ಕದಲ್ಲಿರುವ ಜಮೀನುಗಳಲ್ಲಿ ರೈತರು ಬೆಳೆಯುತ್ತಿರುವ ತೊಗರಿ ಕಡಲೇ ಜೋಳ ಕುಸುಬೆ, ಬೆಳೆಗಳಿಗೆ ವಾಹನದ ಧೂಳಿನಿಂದ ಸಂಪೂರ್ಣ ಹಾನಿಯಾಗುತ್ತಿದೆ,ರಾಜಶ್ರೀ ಸಿಮೆಂಟ್ ಕಂಪನಿ ಹಾಗೂ ತಾಂಡದಿಂದ ದರ್ಗಾದವರಿಗೆ ಮಾಡುವಂತಹ ಹೊರಗುತ್ತಿಗೆಯ ಗುತ್ತಿಗೆದಾರರಾದ ಆರ್ ಆರ್ ಕಂಟ್ರಾಕ್ಟರ್ ಅವರು ರಸ್ತೆಯ ಮೇಲೆ ಸರಿಯಾಗಿ ನೀರು ಆಯಿಸದೆ ಇರುವುದರಿಂದ ಧೂಳು ಹೊರ ಬರುತ್ತಿದ್ದು ಗುತ್ತಿಗೆದಾರರು ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ರೈತರಿಂದ ಆರೋಪ ಕೇಳಿ ಬರುತ್ತಿವೆ.ಕಾರ್ಖಾನೆಯು ಫಿಲ್ಟರ್‍ಗಳನ್ನು ಅಳವಡಿಸಿ ಧೂಳು ಹೊರಬರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿ ವಿಫಲವಾಗಿದ್ದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.ಸಿಮೆಂಟ್ ಕಂಪನಿಯು ಲಾಭಕ್ಕಾಗಿ ರೈತರ ಬದುಕು ಬೀದಿಗೆ ಬೀಳಬಾರದು ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನಮಗೆ ನ್ಯಾಯ ಕೊಡಿಸದಿದ್ದರೆ, ಮುಂಬರುವ ದಿನಗಳಲ್ಲಿ ಕಾರ್ಖಾನೆಯ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.ಪತ್ರಕರ್ತರೊಂದಿಗೆ ಮಾತನಾಡಿದ ರೈತರ ಬಸವರಾಜ ಪಾಟೀಲ ಮಳಖೇಡ ಅವರು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದು, ಸಂಬಂಧಪಟ್ಟ ಕೃಷಿ ಇಲಾಖೆ, ಪರಿಸರ ಮಾಲಿನ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೂ ಬೆಳೆ ಪರಿಹಾರ ರೈತರಿಗೆ ಕೊಡಿಸುವಂತೆ ಮನವಿ ಮಾಡಿರುವೆ ತಕ್ಷಣ ಜಿಲ್ಲಾಡಳಿತವು ಸಿಮೆಂಟ್ ಕಂಪನಿ ಹಾಗೂ ಆರ್ ಆರ್ ಕಾಂಟ್ರಾಕ್ಟರ್ ಅವರು ಮೂಲಕ ಸೂಕ್ತ ಕ್ರಮ ಕೈಗೊಳ್ಳಲಿ ಪರಿಹಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ ಎಂದರು.

ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ನ ರಾಜಶ್ರೀ ಸಿಮೆಂಟ್ ವರ್ಕ್ ಆದಿತ್ಯ ನಗರ ಕಂಪನಿಗೆ ದಿನ ನಿತ್ಯ ಬಂದು ಹೋಗುವ ವಾಹನಗಳಿಂದ ದಟ್ಟವಾದದ ಧೂಳು ನನ್ನ ಜಮೀನನ್ನ ಸರ್ವೆ ನಂಬರ್ 262 ಹಾಗೂ 323 ರಲ್ಲಿ ಮತ್ತು ಸುತ್ತಮುತ್ತಲಿನಲ್ಲಿರುವ ಜಮೀನುಗಳು ರಸ್ತೆಯ ಬದಿಯಲ್ಲಿರುವ ಫಲವತಾದ ಜಮೀನುಗಳ ಬೆಳೆಗಳ ಮೇಲೆ ಧೂಳು ಬಿದ್ದು ಸಂಪೂರ್ಣ ಬೆಳೆಯಾನಿಗುತ್ತಿವೆ,ಧೂಳಿನಿಂದ ತೊಗರಿ ಕಡಲೆ ಬೆಳೆಯಲ್ಲಿನ ಹೂಗಳು ಉದುರಿ ಹೋಗಿ ಬೆಳೆಗಳು ಸಂಪೂರ್ಣ ಹಾನಿಯಾಗುತ್ತಿವೆ,
ಬಸವರಾಜ್ ಪಾಟೀಲ್

ರೈತರು ಮಳಖೇಡ

ಕಳೆದ ಕೆಲವು ವಾರಗಳಿಂದ ಕಾರ್ಖಾನೆಯ ಚಿಮಣಿಯಿಂದ ಹೊರಬರುತ್ತಿರುವ ಸಿಮೆಂಟ್ ಧೂಳು ಗಾಳಿಯಲ್ಲಿ ಹರಡಿ ಸುತ್ತಮುತ್ತಲಿನ ಜನರಿಗೆ ಅನೇಕ ರೋಗಗಳು ಆಗಮಿಸುತ್ತೇವೆ ಸಿಮೆಂಟ್ ಧೂಳು ಕಡಿವಾಣ ಮಾಡುವಂತೆ ಸಂಬಂಧಪಟ್ಟ ಇಲಾಖೆಯವರಿಗೂ ನೀಡಿದರು ಕೂಡ ಕ್ರಮ ಕೈಗೊಳ್ಳಲಿ ವಿಫಲರಾಗಿದ್ದಾರೆ.
ಉಮೇಶ್ ಪಾಂಡುಸಿಂಗ್ ಚವ್ಹಾಣ್,

ಸಾಮಾಜಿಕ ಹೋರಾಟಗಾರರು ಮಳಖೇಡ

ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವೈಜ್ಞಾನಿಕವಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು,ಹಾನಿಗೊಳಗಾದ ಪ್ರತಿ ಎಕರೆಗೆ ಸಿಮೆಂಟ್ ಕಂಪನಿಯು ಸೂಕ್ತ ವೈಜ್ಞಾನಿಕ ಪರಿಹಾರ ಧನ ವಿತರಿಸುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು,
ರಾಜು ಕಟ್ಟಿ ಸಂಗಾವಿ ಸಾಮಾಜಿಕ ಹೋರಾಟಗಾರರು ಮಳಖೇಡ