ಬೀಜ ಮಸೂದೆ 2025 ಮತ್ತು ಕಾರ್ಮಿಕ ಸಂಹಿತೆಗಳ ವಿರೋಧಿಸಿ ರೈತ-ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

ಬೀದರ್:ನ.28:ಬೀಜ ಮಸೂದೆ 2025 ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿ, ಸಂಯುಕ್ತ ಕಿಸಾನ್ ಮೋರ್ಚಾ (ಎಸ್‍ಕೆಎಂ) ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ಇಂದು ಬೀದರ್‍ನಲ್ಲಿ ಭಾರೀ ಪ್ರತಿಭಟನೆ ನಡೆಯಿತು.

ರಾಜ್ಯ ಮತ್ತು ಜಿಲ್ಲಾ ಮಟ್ಟದ ಹಲವಾರು ರೈತ, ಕಾರ್ಮಿಕ ಹಾಗೂ ದಲಿತ ಸಂಘಟನೆಗಳ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ರಾಷ್ಟ್ರಪತಿ ಮತ್ತು ಕರ್ನಾಟಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಬೀಜ ಮಸೂದೆ 2025 ಪಾರಂಪರಿಕ ಬೀಜ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದು, ರೈತರನ್ನು ಕಾಪೆರ್Çೀರೇಟ್ ಬೀಜ ಕಂಪನಿಗಳ ಮೇಲೆ ಅವಲಂಬಿತರನ್ನಾಗಿಸುತ್ತದೆ ಎಂದು ಆರೋಪ.
ಹೊಸ ಆರ್ಥಿಕ ನೀತಿ ಮತ್ತು Wಖಿಔ ಒಪ್ಪಂದಗಳ ಪರಿಣಾಮವಾಗಿ ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಬಿಕ್ಕಟ್ಟಿಗೆ ಸಿಲುಕಿರುವುದಾಗಿ ಸಂಘಟನೆಗಳು ಹೇಳಿದರು.
ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳು ಕಾರ್ಮಿಕ ವಿರೋಧಿ ಮತ್ತು ಕಂಪನಿ ಮಾಲೀಕರ ಪರವಾಗಿದ್ದು, ಹಿಂದಿನ 29 ಕಾರ್ಮಿಕ ಕಾಯ್ದೆಗಳನ್ನು ರದ್ದು ಮಾಡಿದ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು.
ಕೃಷಿ ವಲಯದ ಬಿಕ್ಕಟ್ಟಿನಿಂದ ದೇಶದಲ್ಲಿ ಐದು ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಸಭೆಯಲ್ಲಿ ಉಲ್ಲೇಖಿಸಲಾಯಿತು.
ಪ್ರಮುಖ ಹಕ್ಕೋತ್ತಾಯಗಳಾದ ಬೀಜ ಮಸೂದೆ 2025 ಅನ್ನು ತಕ್ಷಣ ಹಿಂಪಡೆಯಬೇಕು.ಕಾರ್ಮಿಕ ವೇತನ ಸಂಹಿತೆ, ಕೈಗಾರಿಕ ಸಂಬಂಧ ಸಂಹಿತೆ, ಸಾಮಾಜಿಕ ಭದ್ರತೆ ಸಂಹಿತೆ ಹಾಗೂ ವೃತ್ತಿಪರ ಸುರಕ್ಷತೆ ಸಂಹಿತೆ – ಈ ನಾಲ್ಕು ಸಂಹಿತೆಗಳನ್ನು ರದ್ದುಗೊಳಿಸಿ ಹಿಂದಿನ 29 ಕಾರ್ಮಿಕ ಕಾಯ್ದೆಗಳನ್ನು ಮರು ಜಾರಿಗೆ ತರಬೇಕು.
ಈ ಸಂದರ್ಭದಲ್ಲಿ ಬಾಬುರಾವ ಹೊನ್ನಾ, ಮಲ್ಲಿಕಾರ್ಜುನ ಸ್ವಾಮಿ, ನಜೀರ್ ಅಹ್ಮದ್, ಎಂ.ಡಿ. ಖಮರ್ ಪಟೇಲ್, ಶೇಖ್ ನವಾಜ್, ಜೈಶೀಲಕುಮಾರ, ವೀರಶೆಟ್ಟಿ ವಟಂಬೆ, ರಾಮಣ್ಣ ಅಲಮಾಸಪೂರ,ಪ್ರಭು ತಗಣಿಕರ್, ೀದರ ಶ್ರೀಮತಿ ಶೀಲಾ ಸಾಗರ, ಚಾಂದೋಬಾ ಭೋಸ್ಲೆ, ಖದೀರಮಿಯ್ಯಾ, ಶಿವಾಜಿ ಮುಲಾರಿ, ಬಸವರಾಜ ಪಾಟೀಲ್ ಸೇರಿದಂತೆ ಅನೇಕ ರೈತ-ಕಾರ್ಮಿಕ ಸಂಘಟನೆಗಳ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.