
ಇಂಡಿ :ನ.6: ತಾಲೂಕಿನ ಬಬಲಾದ ಗ್ರಾಮದ ಬಡ ರೈತರೊಬ್ಬರು ತಾವು ದಶಕಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನಿನ ಹಕ್ಕು ಪತ್ರ ಸಿಗದೆ, ನೂರಾರು ಹೋರಾಟ, ಅಲೆದಾಟ ಮಾಡಿದರೂ ಕೊನೆಗೆ ಭೂಮಿಯ ಹಕ್ಕು ಸಿಗದೇ ಕೊನೆ ಉಸಿರು ಇರವ ತನಕ ಭೂಮಿ ಪತ್ರ, ಸಾಗುವಳಿ ಪತ್ರ ಎನ್ನುತ್ತಲೇ ಜೀವ ಬಿಟ್ಟ ಘಟನೆ ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಭೂಮಿಯ ಹಕ್ಕುಪತ್ರ ಸಿಗದೇ ಮಾನಸಿಕ ಒತ್ತಡಕ್ಕೆ ಒಳಗಾಗಿಯೇ ಮೃತಪಟ್ಟಿದ್ದಾರೆಂದು ಕುಟುಂಬ, ಆಪ್ತ ಸ್ನೇಹಿತರು ದೂರುತ್ತಿದ್ದಾರೆ.
ಇಡೀ ಜೀವನದ ಉದ್ದಕ್ಕೂ ಕೂಲಿ ಮಾಡಿಯೇ ಬದುಕಿದ ಜೀವಕ್ಕೆ ಭೂಮಿ ಸಿಗುತ್ತದೆಂಬ ಭರವಸೆ ಇತ್ತು, ಆದರೆ ಇವರು ಸಾಗುವಳಿ ಮಾಡುವ ಭೂಮಿಯನ್ನೇ ಅಧಿಕಾರಿಗಳು ಪಶುಸಂಗೋಪನಾ ಇಲಾಖೆಗೆ ಮಂಜೂರಾತಿ ನೀಡಿರುವುದರಿಂದ ಅಂದಿನಿಂದ ಖಿನ್ನತೆಗೆ ಒಳಗಾಗಿದ್ದರು. ಭೂಮಿ ಕೈತಪ್ಪಿ ಹೋಗಿ ಬಿಡಬಹುದೆಂಬ ಆತಂಕದಲ್ಲೇ ನಿದ್ದೆ ಮಾಡದೇ, ಯೋಚನೇಯಲ್ಲೇ ಕಾಲ ಕಳೆಯುತ್ತಿದ್ದರು, ಜೀವ ಬಿಡುವವರೆಗೂ ಭೂಮಿಯ ಬಗ್ಗೆ ಚಿಂತೆಯಲ್ಲೇ
ದಿನಾಂಕ 29.10.2025 ರಂದು ಬಬಲಾದ ಗ್ರಾಮದ ನಿವಾಸಿ ಕಲ್ಲಪ್ಪ ದುಂಡಪ್ಪ ಹರಿಜನ ಅವರು ಬಡತನ ಮತ್ತು ಸಾಗುವಳಿ ಜಮೀನಿನ ಆತಂಕದಿಂದ ಬಳಲುತ್ತಿದ್ದು, ರಕ್ತದೊತ್ತಡ (ಃP) ಏರುಪೇರಾಗಿ ಸಾವನ್ನಪ್ಪಿದ್ದಾರೆ.
ಘಟನೆಯ ವಿವರಗಳು:
ಕಲ್ಲಪ್ಪ ಹರಿಜನ ಅವರ ಕುಟುಂಬವು ಕಳೆದ 22 ವರ್ಷಗಳಿಗೂ ಹೆಚ್ಚು ಕಾಲ ವಿಜಯಪುರ ಜಿಲ್ಲೆ, ಇಂಡಿ ತಾಲೂಕಿನ ಬಬಲಾದ ಗ್ರಾಮದ ಸರ್ವೇ ನಂಬರ್ 355 ರಲ್ಲಿನ 4 ಎಕರೆ 38 ಗುಂಟೆ ಜಮೀನನ್ನು ಸಾಗುವಳಿ ಮಾಡುತ್ತಾ ಜೀವನ ಸಾಗಿಸುತ್ತಿತ್ತು.
ಬಡ ಕುಟುಂಬದ ಆಧಾರವಾಗಿದ್ದ ಈ ಜಮೀನಿನ ಹಕ್ಕು ಪತ್ರಕ್ಕಾಗಿ 2019 ರಲ್ಲಿ ಕಲ್ಲಪ್ಪ ಅವರ ಪತ್ನಿ ಬಾಯಿಜಾಬಾಯಿ ಅವರ ಹೆಸರಿನಲ್ಲಿ ನಮೂನೆ 57ರಡಿ ಬಗರ್ ಹುಕುಂ ಅರ್ಜಿಯನ್ನು ಸಲ್ಲಿಸಲಾಗಿತ್ತು.
2021 ರಲ್ಲಿ ಗ್ರಾಮ ಲೆಕ್ಕಧಿಕಾರಿಗಳು (ತಲಾಟಿ) ಬಂದು ಜಮೀನನ್ನು ಪರಿಶೀಲಿಸಿ, ಜೀ.ಪಿ.ಎಸ್ (ಉPS) ಮೂಲಕ ಅಳತೆ ಕಾರ್ಯವನ್ನೂ ನಡೆಸಿದ್ದರು. ಇದರಿಂದ ಹಕ್ಕು ಪತ್ರ ಸಿಗುವ ಭರವಸೆ ಕುಟುಂಬದಲ್ಲಿ ಮೂಡಿತ್ತು.
ಆದರೆ, 2022 ರಲ್ಲಿ ಸರ್ವೇ ನಂಬರ್ 355 ರಲ್ಲಿ ‘ಮುಪತ ಗೈರಾಣ’ ಎಂದು ಇದ್ದ ಜಮೀನನ್ನು ಏಕಾಏಕಿ ‘ಪಶುಸಂಗೋಪನೆ’ ಇಲಾಖೆಯ ಹೆಸರಿಗೆ ಉತಾರೆಯಲ್ಲಿ ವರ್ಗಾವಣೆ ಮಾಡಲಾಗಿತ್ತು. ಇದು ರೈತ ಕಲ್ಲಪ್ಪ ಹರಿಜನ ಅವರಿಗೆ ಅತೀವ ನೋವು ಮತ್ತು ಮಾನಸಿಕ ಕೊರಗಿಗೆ ಕಾರಣವಾಯಿತು.
ಇದರಿಂದ ತೀವ್ರವಾಗಿ ನೊಂದ ಕಲ್ಲಪ್ಪ ಹರಿಜನ ಅವರು ಜಮೀನಿನ ಹಕ್ಕಿಗಾಗಿ ಇಂಡಿ ಉಪ ವಿಭಾಗಾಧಿಕಾರಿಗಳಿಗೆ (ಂಅ), ತಹಶೀಲ್ದಾರ್, ಸ್ಥಳೀಯ ಶಾಸಕರು (ಒಐಂ) ಮತ್ತು ಜಿಲ್ಲಾಧಿಕಾರಿ (ಆಅ) ಅವರಿಗೆ ಹಲವಾರು ಬಾರಿ ಮನವಿ ಪತ್ರಗಳನ್ನು ಸಲ್ಲಿಸಿದ್ದರು.
ದುರದೃಷ್ಟವಶಾತ್, ಯಾವುದೇ ಅಧಿಕಾರಿಗಳಿಂದ ಸಕಾಲಿಕ ಪ್ರತಿಕ್ರಿಯೆ ಅಥವಾ ಪರಿಹಾರ ದೊರೆಯಲಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯವು ಕಲ್ಲಪ್ಪ ಹರಿಜನ ಅವರನ್ನು ತೀವ್ರ ಮಾನಸಿಕ ಆಘಾತಕ್ಕೆ ದೂಡಿತು.
ಬಡತನದಿಂದ ಬಳಲುತ್ತಿದ್ದ ಕುಟುಂಬದ ಆಧಾರ ಸ್ತಂಭವಾಗಿದ್ದ ಕಲ್ಲಪ್ಪ ಅವರು ಹಕ್ಕು ಪತ್ರ ಸಿಗುವ ಮುನ್ನವೇ ಮೃತಪಟ್ಟಿರುವುದು ಅತ್ಯಂತ ದುರದೃಷ್ಟಕರ. ಸಂಬಂಧಪಟ್ಟ ಜಿಲ್ಲಾಡಳಿತ ಮತ್ತು ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು, ಹಾಗೂ ಅವರು ದಶಕಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನಿನ ಹಕ್ಕು ಪತ್ರವನ್ನು ತಕ್ಷಣವೇ ಬಾಯಿಜಾಬಾಯಿ ಅವರಿಗೆ ಮಂಜೂರು ಮಾಡಬೇಕು ಎಂದು ಕುಟುಂಬದವರು ಒತ್ತಾಯಿಸಿದ್ದಾರೆ.
ಸರ್ಕಾರವು ಈ ರೀತಿಯ ಬಡ ಜನರಿಗೆ ಆದಷ್ಟು ಬೇಗ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವವರಿಗೆ ಭೂಮಿ ಮಂಜೂರಾತಿ ನೀಡುವ ಮೂಲಕ ಭೂಮಿಯ ಕನಸಲ್ಲೇ, ಚಿಂತೆಯಲ್ಲೇ ಬಲಿಯಾಗುವುದನ್ನು ತಡೆಯಬೇಕೆಂದು ಆಗ್ರಹವಾಗಿದೆ.























