
ಕಲಬುರಗಿ,ಮೇ 10: ಶಿಸ್ತುಬದ್ಧ ಪೂರ್ವಸಿದ್ಧತೆ ಇದ್ದರೆ ಮಾತ್ರ ಯಶಸ್ಸುಕೈಗೂಡುತ್ತದೆ.ಪೂರ್ವಸಿದ್ಧತೆಯೇ ಯಶಸ್ಸಿನ ಗುಟ್ಟುಎಂಬುದನ್ನು ವಿದ್ಯಾರ್ಥಿಗಳು ಮನದಟ್ಟು ಮಾಡಿಕೊಳ್ಳಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಸಚಿನ್ ಪೋತನಕರ್ ಕಿವಿಮಾತುಹೇಳಿದರು.
ಇಲ್ಲಿನ ಜೇವರ್ಗಿ ಕಾಲೊನಿಯ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಅರ್ಥಶಾಸ್ತ್ರ ವಿಭಾಗದಿಂದ ಬಿ.ಎ. ಅಂತಿಮ ವರ್ಷದ ಅರ್ಥಶಾಸ್ತ್ರವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದ
ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು ವಿದ್ಯಾರ್ಹತೆಯಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶಿಸ್ತುಬದ್ಧವಾದ ಅಧ್ಯಯನಕೈಗೊಳ್ಳುವುದರಿಂದ ಉತ್ತಮ ಹುದ್ದೆಗಳನ್ನು ಪಡೆಯಲು ಸಾಧü್ಯವಿದೆ ಎಂದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿ ಕೆ.ಎಸ್‍ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ
ಡಾ.ಮೋರಗೆ ಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ಡಾ.ವಿಜಯಕುಮಾರ ಹೆಬ್ಬಾಳ್ಕರ್, ಡಾ.ಸುನಂದಾ,ಡಾ.ಮಲ್ಲಪ್ಪ ದಂಡಗುಂಡ, ಡಾ.ರಾಜಕುಮಾರ ಕಟ್ಟಿಮನಿ,ಡಾ.ರಾಜಕುಮಾರ ಕುರಣೆ, ಡಾ.ಶೋಭಾ ರಾಠೋಡ ಹಾಗೂ ಬಿ.ಎ. ಅಂತಿಮವರ್ಷದ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರುಭಾಗವಹಿಸಿದ್ದರು.ವಿದ್ಯಾರ್ಥಿನಿಯರಾದ ಸುಪ್ರಿಯಾ ಸ್ವಾಗತಿಸಿ, ಶ್ರೀದೇವಿ ನಿರೂಪಿಸಿದರು.ಅಕ್ಷತಾ ವಂದಿಸಿದರು.


























