
ಕಲಬುರಗಿ,ಫೆ.28-ನಗರದ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರವಾಚಕರಾದ ಚವ್ಹಾಣ ಶೆಟ್ಟಿ ರವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಶಾಲಾ ಶಿಕ್ಷಣ ಇಲಾಖೆ ಆಡಳಿತ ಅಧಿಕಾರಿ ಗಣಪತಿ ಬಾರಾಟಕ್ಕೆ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಶಿಕ್ಷಣ ಕಲಿಕೆ ಜೀವನಕ್ಕೆ ಸಂಜೀವಿನಿ ಎನ್ನುವ ಹಾಗೆ ಬಡತನದಲ್ಲಿ ಬಾಲ್ಯವನ್ನು ಕಳೆದ ಚವಾನ್ ಶೆಟ್ಟಿ ಅವರು ಸತತ ಅಭ್ಯಾಸದ ಮೂಲಕ ಪದವಿ, ಬಿಎಡ್ ವಿದ್ಯಾಭ್ಯಾಸ ಮಾಡಿ ಕೆಎಎಸ್ ಪರೀಕ್ಷೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಸರ್ಕಾರಿ ಪ್ರೌಢಶಾಲಾ ಹುದ್ದೆಗೆ ಮುಖ್ಯೋಪಾಧ್ಯಾಯರಾಗಿ ಕೆಲಸ ನಿರ್ವಹಿಸಿ ಹಂತ ಹಂತವಾಗಿ ಆಳಂದ್, ಚಿತ್ತಾಪುರ, ಕಲ್ಬುರ್ಗಿ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರರ. ಔರಾದ್ ತಾಲೂಕನಲ್ಲಿ ಶಿಕ್ಷಣ ಆಡಳಿತ ನಡೆಸಿ, ಕಲಬುರಗಿಯ ಶಿಕ್ಷಕಿರ ತರಬೇತಿ ಕೇಂದ್ರ ಹಾಗೂ ಕಾಲೇಜ್ ಕರ್ನಾಟಕ ಪ್ರೌಢ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಸೇವೆ ಹಾಗೂ ಸರ್ಕಾರಿ ಶಿಕ್ಷಣ ತರಬೇತಿ ಮಹಾವಿದ್ಯಾಲಯದಲ್ಲಿ ಕಲಿಕಾ ತರಬೇತಿ ಪಡೆದು ನಂತರ ವಿವಿಧ ಹುದ್ದೆಗಳ ನಿಭಾಯಿಸಿ ಕೊನೆಗೆ ಕಲಿತ ಶಾಲೆಯಲ್ಲಿಯೇ ಪ್ರವಾಚಕರಾಗಿ ಸೇವೆ ಸಲ್ಲಿಸುತ್ತಾ ನಿವೃತ್ತಿ ಆಗಿರುವುದು ಅಪರೂಪದಲ್ಲೇ ಅಪರೂಪವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಕಲಬುರಗಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಶಂಕ್ರಮ್ಮ ಢವಳಗಿ, ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀನಿವಾಸ್ ರೆಡ್ಡಿ ಡೈಟ್ ಪ್ರಿನ್ಸಿಪಾಲ್ ಬಸವರಾಜ್ ಶೆಟ್ಟಿ, ಶಾಲಾ ಶಿಕ್ಷಣ ಇಲಾಖೆಯ ಎನ್ ಹೆಚ್ ನಾಗೂರ್ ಹಾಗೂ ಲಿಂಗರಾಜ ಅರಸ್ ಉಪಸ್ಥಿತರಿದ್ದರು.
ಯುವರಾಜ್ ಗಾಡಿ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಕ್ರಪ್ಪ ಗೌಡ್ ಬಿರಾದಾರ್ ಹಾಗೂ ಜಗದೇವಿ ಹತ್ತುರೆ ಅವರು ಚೌಹಾಣ್ ಶೆಟ್ಟಿ ಅವರ ಕುರಿತು ಸೇವಾ ವಿವರ ನೀಡಿದರು.
ಅನಿಲ್ ಕುಮಾರ್ ಬಿರಾದರ್ ನಿರೂಪಿಸಿದರು. ಕಲ್ಬುರ್ಗಿ ಮತ್ತು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು. ಔರಾದ್, ಚಿತಾಪುರ್ ಅಧಿಕಾರಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ವಯೋನಿವೃತ್ತ ಹೊಂದಿದ ಚವ್ಹಾಣ ಶೆಟ್ಟಿ ದಂಪತಿಗಳಿಗೆ ಸನ್ಮಾನಿಸಿದರು. ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಮುಂತಾದವರು ಉಪಸ್ಥಿತರಿದ್ದರು.



























