ಡಿಕೆಶಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಅಭಿಮಾನಿಗಳ ಒತ್ತಾಯ

ತುಮಕೂರು, ನ. ೨೯- ಇಲ್ಲಿನ ಕ್ಯಾತ್ಸಂದ್ರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಅಭಿಮಾನಿಗಳು ಘೋಷಣೆ ಕೂಗುತ್ತಾ ಕಾಂಗ್ರೆಸ್ ಹೈಕಮಾಂಡ್‌ನ್ನು ಒತ್ತಾಯಿಸಿದರು.


ಕಾಂಗ್ರೆಸ್ ಮುಖಂಡರು ಆಗಿರುವ ಎಳ್ಳಾರ ಬಂಡೆಯ ಜಯಸಿಂಹ ರವರ ನೇತೃತ್ವದಲ್ಲಿ ಡಿಕೆಶಿ ಅಭಿಮಾನಿಗಳು ಕ್ಯಾತ್ಸಂದ್ರದ ಪೇಟೆ ಬೀದಿಯಲ್ಲಿ ಡಿ.ಕೆ. ಶಿವಕುಮಾರ್ ರವರ ಭಾವಚಿತ್ರವಿರುವ ಭಿತ್ತಿ ಪತ್ರಗಳನ್ನು ಹಿಡಿದು ಘೋಷಣೆ ಕೂಗತ್ತಾ ಮುಖ್ಯಮಂತ್ರಿಯನ್ನಾಗಿ ಮಾಡಲೇಬೇಕು ಎಂದು ಆಗ್ರಹಿಸಿದರು.


ಈ ಹಿಂದೆ ಆಗಿತ್ತು ಎನ್ನಲಾದ ಒಪ್ಪಂದದ ಪ್ರಕಾರ ಸಿದ್ದರಾಮಯ್ಯರವರು ಆಧಿಕಾರದಿಂದ ಕೆಳಗೆ ಇಳಿದು ಡಿ.ಕೆ.ಶಿವಕುಮಾರ್ ರವರಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಮಾತಿಗೆ ತಪ್ಪಿ ಎಲ್ಲರ ಆಕ್ರೋಶಕ್ಕೆ ಕಾರಣರಾಗುತ್ತೀರಾ ಎಂದು ಮುಖಂಡ ಜಯಸಿಂಹ ಮಾರ್ಮಿಕವಾಗಿ ನುಡಿದರು.


ಒಂದು ವೇಳೆ ಸಿಎಂ ಸ್ದಾನ ನೀಡದಿದ್ದರೆ ರಾಜ್ಯದ ಎಲ್ಲೆಡೆ ಡಿಕೆಶಿ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಲಿದ್ದಾರೆ ಎಂದು ಹೇಳಿದರು.


ನಂತರ ಕ್ಯಾತ್ಸಂದ್ರದಲ್ಲಿರುವ ಆಂಜನೇಯಸ್ವಾಮಿ ದೇವಸ್ದಾನಕ್ಕೆ ತೆರಳಿದ ಅಭಿಮಾನಿಗಳು ಡಿ.ಕೆ. ಶಿವಕುಮಾರ್ ರವರು ಸಿಎಂ ಆಗಬೇಕೆಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ಅಪ್ಸರ್ ಪಾಷ, ಸಲೀಂ, ಅಕ್ರಮ್ ಪಾಷ, ಚಾಂದ್, ನದೀಮ್ ಶಾಹಿಲ್ ಪಾಷ, ನಾರಾಯಣ್ ಮತ್ತಿತರರು ಪಾಲ್ಗೊಂಡಿದ್ದರು.