
ಜಮಖಂಡಿ: ಜ.7: ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ರಾಜಕೀಯದ ಇತಿಹಾಸದಲ್ಲಿ ಹೆಚ್ಚು ದೀರ್ಘಾವಧಿ ಕಾಲ ಆಡಳಿತ ನಡೆಸುವ ಮೂಲಕ ದಾಖಲೆ ನಿರ್ಮಿಸಿದ ಈ ಐತಿಹಾಸಿಕ ದಿನದಂದು ಸಿದ್ಧರಾಮಯ್ಯನವರ ಅಭಿಮಾನಿ ಬಳಗ ವತಿಯಿಂದ ನಗರದ ಶ್ರೀ ಭಕ್ತ ಕನಕದಾಸ ವೃತ್ತದಲ್ಲಿ ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ತೆಂಗಿನಕಾಯಿ ಒಡೆದು ಪಟ್ಟಾಕಿಯನ್ನು ಸಿಡಿಸುವುದರ ಮೂಲಕ ಸಂಭ್ರಮಾಚರಣೆ ಮಾಡಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬನ) ರಾಜ್ಯ ಸಂಚಾಲಕ ಶಾಮರಾವ ಘಾಟಗೆ ಮಾತನಾಡಿ ದೀನದಲಿತರ ಏಳಿಗೆಗಾಗಿ ಹರಿಜನ ಗಿರಿಜನರ ಕಲ್ಯಾಣಕ್ಕಾಗಿ ಬಡವರ ಅಭಿವೃದ್ಧಿಗಾಗಿ ಹಲವಾರು ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ನಾಡಿಗೆ ಒಂದು ಕಣ್ಮನಿಯಾದ ಸಿದ್ದ ರಾಮಯ್ಯ ಮಾಜಿ ಮುಖ್ಯ ಮಂತ್ರಿ ದಿವಂಗತ ದೇವರಾಜ ಅರಸು ಅವರ ದಾಖಲೆ ಮುರಿದು ಕರ್ನಾಟಕದ ದೀರ್ಘಾವಧಿ ಮುಖ್ಯ ಮಂತ್ರಿಯಾಗಿ ಇತಿಹಾಸ ನಿರ್ಮಿಸಿದ್ದರೆ ಎಂದರು
ಜಮಖಂಡಿ ತಾಲೂಕ ಕುರುಬ ಸಂಘದ ಅಧ್ಯಕ್ಷರು ಮಾತನಾಡಿ ಈ ದಾಖಲೆ ನಿರ್ಮಾಣವಾಗಲು ಕಾರಣಿ ಕರ್ತರಾಗಿರತಕ್ಕಂತ ರಾಜ್ಯದ ಎಲ್ಲಾ ಜನತೆಗೆ ಕಾರ್ಯಕರ್ತರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದ ತಿಳಿಸಿದರು.
ಯುವ ಅಭಿಮಾನಿ ಚಿದಾನಂದ ಬಬಲಾದಿ ಮಾತನಾಡಿ ಸಿದ್ದರಾಮಯ್ಯ ನವರ ಜೀವನ ಚರಿತ್ರೆ ರಾಜಕೀಯದಲ್ಲಿ ನಡೆದು ಬಂದ ಹಾದಿ ಹಾಗೂ ಸಿದ್ದರಾಮಯ್ಯನವರ ವಿರುದ್ಧ ನಡೆದಂತ ಷಡ್ಯಂತ್ರಗಳನ್ನು ವಿರೋಧಿಸಿ ಮಾತನಾಡಿ, ಪೂರ್ವ ದಿಕ್ಕಿನಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ಸಿದ್ದರಾಮಯ್ಯನವರು ಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಮುಂದುವರೆಯುವುದು ಅಷ್ಟೇ ಸತ್ಯ ಎಂದು ತಮ್ಮ ಅಭಿಮಾನವನ್ನು ಹಂಚಿಕೊಂಡರು.
ಪಟಾಕಿ ಹೆಚ್ಚಿ ಸಂಭ್ರಮಿಸಿದ ನಂತರ, 20ಕ್ಕೂ ಅಧಿಕ ಯುವ ಅಭಿಮಾನಿಗಳು ಸಮಾಜಕ್ಕೆ ಕಾರ್ಯವಾದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನವನ್ನು ಮಾಡಿದರು.
ಉಪಾದ್ಯಕ್ಷ ಕರೆಪ್ಪ ಬೀಳಗಿ,ಹನಮಂತ ಯಮಗಾರ,ದಲಿತ ಮುಖಂಡ ಮುತ್ತನ್ನ ಮೇತ್ರಿ,ಸೊಮರಾಯ ಚಿಕ್ಕೋಡ್ರ,
ಸಂತೋಷ ಮಮದಾಪೂರ, ಆಕಾಶ ಬಿಳಗಿ,ಮುದಕಪ್ಪ ಎಣ್ಣಿ, ನಿಂಗಪ್ಪ ಮಟಗಾರ,ಶಿವು ಸಿಂಗಣ್ಣವರ,ಸೇರಿದಂತೆ ಅನೇಕರು ಇದ್ದರು

























