
ಕಲಬುರಗಿ,ಡಿ.28: ಚಿಂಚೋಳಿ ತಾಲೂಕಿನ ಹುಡದಳ್ಳಿ ಸುತ್ತಲಿನ ಹಳ್ಳಿಗಳಲ್ಲಿ ವಿಪರೀತ ಮಳೆ ಮತ್ತು ನೆಟೆರೋಗದಿಂದ ತೊಗರಿ ಇಳುವರಿ ಕುಂಠಿತಗೊಂಡು ರೈತರು ಕಂಗಾಲಾಗಿದ್ದಾರೆ.
ಈ ಮೊದಲು ಎಕರೆಗೆ ಸಾಮಾನ್ಯವಾಗಿ 5ರಿಂದ 6 ಕ್ವಿಂಟಾಲ್ ತೊಗರಿ ಇಳುವರಿ ಬರುತ್ತಿದ್ದು ಈಗ ಇಳುವರಿ ಸಂಪೂರ್ಣ ಕುಸಿದುಹೋಗಿದೆ.
ತೊಗರಿಯ ಕಣಜ ಎಂದು ಹೆಸರಾದ ಕಲಬುರಗಿ ಜಿಲ್ಲೆಯಲ್ಲಿ ಈ ವರ್ಷ ತೊಗರಿ ಇಳುವರಿ ಕುಸಿತಕ್ಕೆ ರೈತ ಚಿಂತಿತನಾಗಿದ್ದಾನೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರಕಾರ ಧಾವಿಸುವಂತೆ ರೈತ ಸಮೂಹದ ಒಕ್ಕೊರಲಿನ ಮನವಿಯಾಗಿದೆ. ತೊಗರಿಗೆ ಕೀಟಗಳ ಹಾವಳಿ ವಿಪರೀತ ಇರುವದರಿಂದ ಇಳುವರಿಗೆ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಈ ಸಲ ರೈತರಿಗೆ ಹಾಕಿದ ಖರ್ಚು ಮರಳಿ ಬರುವ ವಿಶ್ವಾಸವೇ ಇಲ್ಲದಾಗಿದೆ.

























