Home ಜಿಲ್ಲೆ ಸಮಾಜದ ಒಗ್ಗಟ್ಟಿಗೆ ಜಾತ್ರೆಗಳು ಸೇತುವೆ: ಮಾಗನೂರ

ಸಮಾಜದ ಒಗ್ಗಟ್ಟಿಗೆ ಜಾತ್ರೆಗಳು ಸೇತುವೆ: ಮಾಗನೂರ

ಯಾದಗಿರಿ:ಫೆ.೧೨:ಗ್ರಾಮೀಣ ಸಂಸ್ಕೃತಿ, ಸಂಪ್ರದಾಯಗಳು ಹಾಗೂ ಜಾತ್ರಾ ಮಹೋತ್ಸವಗಳು ನಮ್ಮ ನೆಲದ ಆತ್ಮಸ್ಪಂದನ. ಇಂತಹ ಧಾರ್ಮಿಕ-ಸಾಂಸ್ಕೃತಿಕ ಆಚರಣೆಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಹೇಳಿದರು.
ತಾಲ್ಲೂಕಿನ ಟಿ. ವಡಗೇರಾ ಹಾಗೂ ಕಿರಿ ಹೈಯಾಳ ಗ್ರಾಮಗಳಲ್ಲಿ ಆಯೋಜಿಸಿದ್ದ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು. ಗ್ರಾಮ ದೇವತೆಗಳ ಆಶೀರ್ವಾದ ಪಡೆಯುವುದು ಭಾಗ್ಯಕರ ಸಂಗತಿ ಎಂದರು.
ಈ ವೇಳೆ ಎರಡೂ ಗ್ರಾಮಗಳ ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ ಅವರ ಯೋಗಕ್ಷೇಮ ವಿಚಾರಿಸಿದರು. ಪಕ್ಷ ಸಂಘಟನೆ ಮತ್ತಷ್ಟು ಬಲಿಷ್ಠಗೊಳಿಸುವುದು, ಯುವಕರು ಮತ್ತು ಮಹಿಳೆಯರನ್ನು ಸಕ್ರಿಯವಾಗಿ ಸಂಘಟನೆಯೊAದಿಗೆ ಸಂಪರ್ಕಿಸುವುದು ಹಾಗೂ ಸ್ಥಳೀಯ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ಬಗ್ಗೆ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.
ಗ್ರಾಮಾಭಿವೃದ್ಧಿಗೆ ಸಂಬAಧಿಸಿದAತೆ ರಸ್ತೆ ಸುಧಾರಣೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ದೇವಸ್ಥಾನಗಳ ಮೂಲಸೌಕರ್ಯ ವೃದ್ಧಿ, ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಸ್ವಯಂ ಉದ್ಯೋಗಾವಕಾಶಗಳ ಸೃಷ್ಟಿ ಕುರಿತಂತೆ ಗ್ರಾಮಸ್ಥರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಸರ್ಕಾರದ ಜನಪರ ಯೋಜನೆಗಳನ್ನು ಮನೆಮನೆಗೆ ತಲುಪಿಸುವುದಾಗಿ ಭರವಸೆ ನೀಡಿದರು.

ಜನರೊಂದಿಗಿನ ನೇರ ಸಂಪರ್ಕವೇ ಸಾರ್ವಜನಿಕ ಜೀವನದ ನಿಜವಾದ ಬಲ. ಕಾರ್ಯಕರ್ತರ ಮನೆಬಾಗಿಲಿಗೆ ತೆರಳಿ ಅವರ ನೋವು-ನಲಿವು ಆಲಿಸುವುದು ಸೇವಾ ಮನೋಭಾವದ ಪ್ರತೀಕ ಎಂದು ಮಾಗನೂರ ಹೇಳಿದರು. ಗ್ರಾಮೀಣ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳು ಉಳಿದರೆ ಸಮಾಜದಲ್ಲಿ ಐಕ್ಯತೆ, ಪರಸ್ಪರ ವಿಶ್ವಾಸ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಯುವಕರು ಹಾಗೂ ಮಹಿಳೆಯರು ಉಪಸ್ಥಿತರಿದ್ದು ಜಾತ್ರಾ ಕಾರ್ಯಕ್ರಮವನ್ನು ಸಂಭ್ರಮದಿAದ ಆಚರಿಸಿದರು.