ಜಾತ್ರಾ ಮಹೋತ್ಸವ

ಲಕ್ಷ್ಮೇಶ್ವರ,ಫೆ1: ಪಟ್ಟಣದ ಪೇಠಬಣ ವ್ಯಾಪ್ತಿಯ ಕದರಗೇರಿ ಓಣಿಯ ಶ್ರೀ ಶಕ್ತಿ ಮಾತಾ ಶಿವರುದ್ರಮ್ಮ ದೇವಸ್ಥಾನದ ಮೂರನೇ ವರ್ಷದ ವಾರ್ಷಿಕೋತ್ಸವ ಜಾತ್ರಾ ಮಹೋತ್ಸವ ಮತ್ತು ಲಕ್ಷ ದೀಪೆÇೀತ್ಸವ ಕಾರ್ಯಕ್ರಮ ದಿನಾಂಕ 3ರಂದು ಮಂಗಳವಾರ ಸಂಜೆ6:00ಗೆ ನಡೆಯಲಿದ್ದು, ಶಿರಹಟ್ಟಿ ಮತ್ತು ಬಾಲೇಹೂಸೂರ ಮಠದ ಶ್ರೀ ಫಕೀರ ದಿಂಗಾಲೇಶ್ವರ ಶ್ರೀಗಳು ಚಾಲನೆ ನೀಡಲಿದ್ದಾರೆ.


ಅಂದೇ ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಯುವಕರು ಮತ್ತು ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.


ಸಂಜೆ 6:00ಗೆ ಜೀವನ ದರ್ಶನ ಪ್ರವಚನ ಜರುಗಲಿದೆ. ನಂತರ ಅನ್ನಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ.


ಆದ್ದರಿಂದ ಭಕ್ತಾದಿಗಳು ಪಾಲ್ಗೊಂಡು ಪುನೀತರಾಗಬೇಕು ಎಂದು ಟ್ರಸ್ಟ್ ಕಮಿಟಿ ಅಧ್ಯಕ್ಷ ಸೋಮಣ್ಣ ಉಪನಾಳ ಮತ್ತು ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.