
ಹುಬ್ಬಳ್ಳಿ, ಮೇ27: ಹಳೇಹುಬ್ಬಳ್ಳಿ ಅರವಿಂದನಗರದಲ್ಲಿರುವ ಶ್ರಿ ಹುಲಿಗೆಮ್ಮಾದೇವಿಯವರ ದೇವಸ್ಥಾನದಲ್ಲಿ ಶ್ರೀ ಹುಲಿಗೆಮ್ಮಾದೇವಿಯವರ ಜಾತ್ರಾಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಶ್ರೀ ಹುಲಿಗೆಮ್ಮಾ ದೇವಿಯವರಿಗೆ ನವವಿಧ ಸ್ನಾನಗಳು, ಮಹಾಭಿಷೇಕ, ವಿಶೇಷ ಅಲಂಕಾರದೊಂದಿಗೆ ಉದಯಪೂಜೆ ನೆರವೇರಿಸಲಾಯಿತು.
ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆಯು ಸದರಿ ದೇವಸ್ಥಾನದಿಂದ ಹೊರಟು ಪ್ರಮುಖ ರಸ್ತೆಯಿಂದ ಹಳೇಹುಬ್ಬಳ್ಳಿಯಲ್ಲಿ ಸಂಚರಿಸಿ ಮೂಲ ದೇವಸ್ಥಾನಕ್ಕೆ ತಲುಪಿತು. ಇದೆ ಸಂದರ್ಭದಲ್ಲಿ ಡಾ. ಮೇಜರ್ ಉದಯಕುಮಾರ ಗೋಟುರ, ಮಾಜಿ ವೀರಯೋಧರುಗಳಾದ ಸುರೇಶ ನೀಡಗುಂದಿ, ಶಿವಾಜಿ ಗಾಂವಕರ ರವರಿಗೆ ದೇವಸ್ಥಾನದ ವತಿಯಿಂದ ಗೌರವಿಸಲಾಯಿತು. ನಂತರ ಶ್ರೀ ದೇವಿಯವರಿಗೆ ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ಅನ್ನಪ್ರಸಾದ ವಿತರಣೆ ಜರುಗಿತು.
ಮಾತೋಶ್ರಿ ಡಾ. ಹುಲಿಗೆಮ್ಮಾ ಪೋಸಾ ಅಮ್ಮನವರು ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಮಹೇಶ ಟೆಂಗಿನಕಾಯಿ ಆಗಮಿಸಿದ್ದರು.
ಪ್ರಧಾನ ಅರ್ಚಕರಾದ ರವಿಕುಮಾರ ಮಡ್ಡಿ ಸೇರಿದಂತೆ ಭಕ್ತಾದೀಗಳು ಆಗಮಿಸಿದ್ದರು. ದೇವಸ್ಥಾನದ ವತಿಯಿಂದ ಮುಖ್ಯ ಅತಿಥಿಗಳಿಗೆ ಗೌರವಿಸಲಾಯಿತು. ಎಚ್.ಪಿ. ಧೂಪದ ರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.