Home ಜಿಲ್ಲೆ ಕಲಬುರಗಿ ನೇತ್ರದಾನ ಮಹಾದಾನ, ಮತ್ತೊಬ್ಬರಿಗೆ ಬೆಳಕು

ನೇತ್ರದಾನ ಮಹಾದಾನ, ಮತ್ತೊಬ್ಬರಿಗೆ ಬೆಳಕು

ಕಲಬುರಗಿ : ಕಣ್ಣುಗಳನ್ನು ದಾನ ಮಾಡುವುದು ಒಂದು ಶ್ರೇಷ್ಠ ಕಾರ್ಯ. ಹುಟ್ಟು ಕುರುಡರಾಗಿ ಅಥವಾ ಅಪಘಾತದಿಂದ ದೃಷ್ಟಿ ಕಳೆದುಕೊಂಡವರಿಗೆ ಕಣ್ಣುಗಳನ್ನು ದಾನ ಮಾಡುವ ಮೂಲಕ ಅವರಿಗೆ ಬದುಕಿನ ದೃಷ್ಟಿ ಭಾಗ್ಯವನ್ನು ನೀಡಬಹುದು. ಸಾವಿನ ನಂತರವು ನೇತ್ರದಾನದಿಂದ ಜಗತ್ತನ್ನು ನೋಡಬಹುದು.ಯಾವುದೇ ಜಾತಿ, ಧರ್ಮ, ವಯಸ್ಸು, ಲಿಂಗ, ರಕ್ತದ ಗುಂಪು, ಅಥವಾ ಕಣ್ಣಿನ ಸಮಸ್ಯೆಗಳ ಅಡೆತಡೆಗಳಿಲ್ಲದೆ ಯಾರಾದರೂ ನೇತ್ರದಾನ ಮಾಡಬಹುದು ಎಂದು ನೇತ್ರಾಧಿಕಾರಿ ಡಾ.ಜಿ.ದಸ್ತಗಿರ್ ಹೇಳಿದರು. ನಗರದ ಆಳಂದ ರಸ್ತೆಯ ಖಾದ್ರಿ ಚೌಕ್ ನಲ್ಲಿರುವ ‘ಜ್ಯೋತಿ ಐ ಕೇರ್ ಕ್ಲಿನಿಕ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಸಂಜೆ ಜರುಗಿದ “42ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನೇತ್ರದಾನದಿಂದ ಅಂಧತ್ವ ನಿವಾರಣೆ, ಸಾರ್ಥಕ ಸಾವು, ಶಾಶ್ವತ ಬದುಕು ಸಾಧ್ಯವಿದೆ. ಆದ್ದರಿಂದ ಮರಣಾನಂತರ ನೇತ್ರದಾನ ಮಾಡಬೇಕು. ಇದರ ಬಗ್ಗೆ ವ್ಯಾಪಕ ಜಾಗೃತಿ ಅಗತ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ್, ಕ್ಲಿನಿಕ್ ಮುಖ್ಯಸ್ಥ ಅಮರ ತಡಕಲ್, ಪ್ರಮುಖರಾದ ಅಸ್ಲಾಂ ಶೇಖ್, ಸೈಯದ್ ಹಮೀದ್, ಮೊಹಮ್ಮದ್ ಕೈಫ್ ಸೇರಿದಂತೆ ಇನ್ನಿತರರಿದ್ದರು.