ಅಜೀಂ ಪ್ರೇಮ್‍ಜಿ ಸಂಸ್ಥೆ ಜೊತೆಯಲ್ಲಿ ಕಲಿಕಾ ಚಟುವಟಿಕೆಗಳ ಪ್ರದರ್ಶನ

ಅಫಜಲಪುರ: ಫೆ.19: ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಅಜೀಂ ಪ್ರೇಮ್‍ಜಿ ಪ್ರತಿಷ್ಠಾನ ಜಿಲ್ಲಾ ಸಂಸ್ಥೆಯ ಸಹಭಾಗಿತ್ವದಲ್ಲಿ 2025-2026ನೇ ಸಾಲಿನ ಶಾಲಾ ಮಟ್ಟದ ಕಲಿಕಾ ಪ್ರದರ್ಶನ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಂಕಲಗಾ ಯಲ್ಲಿ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಪ್ರತಿಬಿಂಬಿಸುವ ವಿವಿಧ ವಿಷಯಾಧಾರಿತ ಪ್ರದರ್ಶನಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ಆಟ-ಪಾಠ ಚಟುವಟಿಕೆಗಳು ಹಾಗೂ ಸೃಜನಾತ್ಮಕ ಕೃತಿಗಳು ಗಮನಸೆಳೆದವು.

ವಿದ್ಯಾರ್ಥಿಗಳ ಪ್ರತಿಭೆ ಮತ್ತು ಆತ್ಮವಿಶ್ವಾಸ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಗಾಂಧಿ ದಪ್ಪೆದಾರ ವಹಿಸಿದರು. ಮುಖ್ಯ ಅತಿಥಿಗಳಾಗಿ ಬಂಕಲಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸಾವಿತ್ರಿ ಮೆತ್ರಿ, ಃಖP ಭಿಮರಾಯ ದೋಡ್ಡಮನಿ ವಲಯ ಸಂಪನ್ಮೂಲ ವ್ಯಕ್ತಿ ಮಹೇಶ್ ಉಪ್ಪಿನ್ ಹಾಗೂ ಸಂಪನ್ಮೂಲ ವ್ಯಕ್ತಿ ಶಿವಕುಮಾರ್ ಭಾಗವಹಿಸಿದರು.

ಸಹ ಶಿಕ್ಷಕಿ ರೋಹಿಣಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಮಹೇಶ್ ಅವರು ಸ್ವಾಗತಿಸಿದರು. ಸಿಬ್ಬಂದಿಗಳಾದ ಶಿವಾನಂದ ಹತ್ತಿ, ನಾಗಮ್ಮ ಸೋಲೆಕರ್, ಅನ್ನಪೂರ್ಣ ಪಾಟಿಲ್, ರಮಾ ರಜಪೂತ್, ರೇಷ್ಮಾ ಗೋಪಗೊಂಡ, ಸಿದ್ದಮ್ಮ ಆಕಾಶಮಠ ಸೇರಿದಂತೆ ಊರಿನ ಪಾಲಕರು, ಪೆÇೀಷಕರು, ಹಿರಿಯರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಶಾಲೆಯ ಸಮಗ್ರ ಅಭಿವೃದ್ಧಿಗೆ ಇಂತಹ ಕಲಿಕಾ ಪ್ರದರ್ಶನಗಳು ಪ್ರೇರಣೆ ನೀಡುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.