ಇಂಡಿ :ಸೆ.೧೦: ಚಡಚಣ ತಾಲೂಕಿನ ರೇವತಗಾಂವ ಗ್ರಾಮದಿಂದ ನಂದೂರ ಗ್ರಾಮಕ್ಕೆ ಹೊಗುವ ರಸ್ತೆಯ ಹತ್ತಿರ ದಲ್ಲಿರುವ ಕಿರಾಣಿ ಅಂಗಡಿಯ ಮೇಲೆ ಅಬಕಾರಿ ದಾಳಿ ಮಾಡಿ ಒಟ್ಟು-೨.೫೨ ಲೀಟರ್ ಮಹಾರಾಷ್ಟದ ಮಧ್ಯ ವನ್ನು ಜಪ್ತಿ ಮಾಡಿ ವಶಪಡಿಸಿಕೊಂಡಿದ್ದಾರೆ. ಉಮೇಶ ಮಹಾದೇವ
ಜಿಗಜೇವಣಿ ಸಾ-ರೇವತಗಾಂವ ತಾ-ಚಡಚಣ ಎಂಬುವರ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ರಾಹುಲ್ ಎಸ್ ನಾಯಕ ಅಬಕಾರಿ ನಿರಿಕ್ಷಕರು
ಇಂಡಿ ವಲಯ ರವರ ನೇತೃತ್ವ ದಲ್ಲಿ ವಾದಿರಾಜ ಅಬಕಾರಿ ಉಪ ನಿರಿಕ್ಷಕರು ಇಂಡಿ
ರವರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸಿಬ್ಬಂದಿ ಗಳಾದ, ಅಶೋಕ ಎಸ್ ಗೋಣಸಗಿ,
ಶಿವಾನಂದ ಕೊಡತೆ, ಲಾಳೆಮಶ್ಯಾ ಕ ಮಸಳಿ ದಾಳಿಯಲ್ಲಿ ಪಾಲಗೊಂಡಿದರು. ಎಂದು ರಾಹುಲ್ ನಯಕ
ಅಬಕಾರಿ ನಿರಿಕ್ಷಕರು ಇಂಡಿ ವಲಯ ಅವರು ತಿಳಿಸಿದ್ದಾರೆ.

























