
ಸೇಡಂ , ಫೆ,25: ಜಿಲ್ಲೆಯ ಚಂದ್ರಶೇಖರ್ ಪಾಟೀಲ್ ಸ್ಟೇಡಿಯಂನಲ್ಲಿ ದಿನಾಂಕ 21 ಹಾಗೂ 22 ರಂದು ಕಲ್ಯಾಣ ಕರ್ನಾಟಕ ಕರಾಟೆ ಸಂಘದ ಅಧ್ಯಕ್ಷರಾದ ಶಿಹಾನ ದಶರಥ ದುಮ್ಮನಸೂರ್ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಜರುಗಿತು ಈ ಕರಾಟೆ ಕ್ರೀಡಾಕೂಟದಲ್ಲಿ ಸೇಡಂ ತಾಲೂಕಿನ (ಎಚ್ ಪಿ ಎಸ್ ನಂ2 ವಿದ್ಯಾನಗರ ಶಾಲೆಯ ವಿದ್ಯಾರ್ಥಿಗಳು ಈ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಒಟ್ಟು 24 ಪದಕಗಳನ್ನು ಗೆದ್ದುಕೊಂಡು ಸೇಡಂ ತಾಲೂಕಿನ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ ಚಿನ್ನ 8 ಬೆಳ್ಳಿ 7 ಕಂಚು 9 ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಯಭೇರಿ ಗಳಿಸಿದ ವಿದ್ಯಾರ್ಥಿಗಳ ಸಾಧನೆಗೆ ಕರಾಟೆ ಶಿಕ್ಷಕರಾದ ಸಾಬಣ್ಣ ಸಿ ಅಳೊಳ್ಳಿ, ಸುನಿಲ್ ಹಳಿಮನಿ, ಶರತ್ ಕುಮಾರ್ ಅವರು ಹರ್ಷವನ್ನು ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ



























