
ಕೋಲಾರ,ಮೇ,೩೧- ಕೆ.ಜಿ.ಎಫ್. ಮಾಜಿ ಶಾಸಕ ವೈ.ಸಂಪಂಗಿ ಅವರು ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಟಿ.ಎ.ಪಿ.ಸಿ.ಎಂ.ಎಸ್. ಕ್ಷೇತ್ರದಿಂದ ಸ್ವರ್ಧಿಸಿದ್ದ ತಮ್ಮ ಮಗ ಪ್ರವೀಣ್ ಅವರಿಗೆ ಮಾಚಿ ಸಚಿವ ವರ್ತೂರ್ ಪ್ರಕಾಶ್ ತಮ್ಮ ಬೆಂಬಲ ವಾಪಾಸ್ ಪಡೆದ ಹಿನ್ನಲೆಯಲ್ಲಿ ಪ್ರವೀಣ್ ನಾಮಪತ್ರವನ್ನು ವಾಪಾಸ್ ಪಡೆಯ ಬೇಕಾಯಿತು ಎಂಬ ಅರೋಪವು ಸತ್ಯಕ್ಕೆ ದೂರವಾಗಿದೆ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿನ ಸುದ್ದಿ ಗೋಷ್ಟಿಯಲ್ಲಿ ಅವರು ಮಾತನಾಡಿ ಈ ಚುನಾವಣೆಯಲ್ಲಿ ಟಿ.ಎ.ಪಿ.ಸಿ.ಎಂ.ಎಸ್. ಕ್ಷೇತ್ರದಲ್ಲಿ ಒಟ್ಟು ೯ ಮತಗಳಿದ್ದು, ಈ ಪೈಕಿ ಬಿಜೆಪಿ ಬೆಂಬಲಿತರು ಇಬ್ಬರು ಮಾತ್ರ ಇದ್ದು ಉಳಿದ ೭ ಮಂದಿ ಕಾಂಗ್ರೇಸ್ ಬೆಂಬಲಿತರಾಗಿದ್ದರು. ನಾಮಪತ್ರ ಸಲ್ಲಿಕೆಗೆ ಸೂಚಕರು ಪರಸ್ಪರ ಹಾಕ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರೆ ಬಿಜೆಪಿ ಬೆಂಬಲಿತ ಸಂಪಂಗಿ ಮಗ ಪ್ರವೀಣ್ ಹಾಗೂ ತಂಬಳ್ಳಿ ಮುನಿಯಪ್ಪ ಇಬ್ಬರು ಸಹ ನಿದೇರ್ಶಕ ಅಕಾಂಕ್ಷಿಗಳಾಗಿದ್ದರು ಎಂದರು.
ಈ ಸಂದರ್ಭದಲ್ಲಿ ಪ್ರವೀಣ್ ಅವರಿಗೆ ಗೌರಿಬಿದನೂರಿನವರಿಂದ ಸೂಚಕರಾಗಿ ಸಹಿ ಮಾಡಿಸಿ ಕೊಂಡು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ನನ್ನ ಬೆಂಬಲವನ್ನು ಯಾಚಿಸಲಿಲ್ಲ. ಇದಕ್ಕೂ ೧೫ ದಿನದ ಮೊದಲೇ ನಾನು ಡಿಸಿಸಿ ಬ್ಯಾಂಕ್ ಚುನಾವಣೆ ಸಂಬಂಧವಾಗಿ ಕರೆ ಮಾಡಿ ಬೆಂಬಲ ಕೋರಿ ತಂಬಳ್ಳಿ ಮುನಿಯಪ್ಪ ನಿರ್ದೇಶಕ ಸ್ಥಾನದ ಅಕಾಂಕ್ಷಿಯಾಗಿರುವ ವಿಚಾರ ತಿಳಿಸಿದಾಗ ಸೂಚಕರಿಗಾಗಿ ಅವರು ಗೌರಿಬಿದನೂರಿಗೆ ಹೋಗಿ ಹಾಕಿಸಿ ಕೊಂಡಿ ಬಂದಿದ್ದರು ಎಂದರು.
ನಂತರದಲ್ಲಿ ನಾನು ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜೇಂದ್ರ ಅವರ ಬಳಿ ಮಾತನಾಡಿ ಸಂಪಂಗಿಗೆ ಸಹಾಯ ಮಾಡಲು ಕೇಳಿದಾಗ ಪ್ರಧಾನ ಕಾರ್ಯದರ್ಶಿ ಮುನಿರಾಜು ಅವರಿಗೆ ತಂಬಳ್ಳಿ ಮುನಿಯಪ್ಪ ಅವರಿಗೆ ಸಹಾಯ ಮಾಡಲು ಸಂಪಂಗಿ ಅವರಿಗೆ ಹೇಳಿ ಕಳುಹಿಸಿದರು. ಅದರೆ ತಂಬಳ್ಳಿ ಮುನಿಯಪ್ಪ ಅವರಿಗೆ ಸೂಚಕರೇ ಸಿಗದಂತಾಗಿತ್ತು ಹಾಗಾಗಿ ನಾಮಪತ್ರ ಸಲ್ಲಿಸಲಿಲ್ಲ. ಅದರೆ ಸಂಪಂಗಿ ಅವರು ನಾಮಪತ್ರ ವಾಪಾಸ್ ಪಡೆಯುವವರೆಗೂ ನಮ್ಮ ಸಹಾಯವೇ ಕೇಳಲಿಲ್ಲ, ಅದರೆ ವರ್ತೂರು ಪ್ರಕಾಶ್ ಸಹಾಯ ಮಾಡಲಿಲ್ಲ ಹಾಗಾಗಿ ನಾಮಪತ್ರ ವಾಪಸ್ಸ್ ಪಡೆದು ಕೊಂಡೇ ಎಂದು ಆರೋಪಿಸಿದ್ದಾರೆ ಎಂದರು.
ಇದಕ್ಕೂ ಮುನ್ನ ನಾವೆಲ್ಲಾ ಮುಖಂಡರು ಸೇರಿ ಕೊಂಡು ಸಂಪಂಗಿ ಮಗನಿಗೆ ಬೆಂಬಲಿಸಲು ನಿರ್ದರಿಸದ್ದೇವು ಅದರೂ ಅವರು ನಮ್ಮಗಳ ಸಹಾಯವೇ ಕೇಳದೆ ಇರುವುದು ನಮಗೂ ಅಚ್ಚರಿಯ ಸಂಗತಿಯಾಗಿತ್ತು. ಅದರೆ ಅದು ಈ ರೀತಿ ಡಿಲ್ ಅಗಿದೆ ಎಂದು ನಮಗೆ ಅರಿವು ಆಗಲಿಲ್ಲ ಎಂದರು,
ಮುಖಂಡ ಬೆಗ್ಲಿ ಪ್ರಕಾಶ್ ಮಾತನಾಡಿ ತಂಬಳ್ಳಿ ಮುನಿಯಪ್ಪ ಅವರಿಗೆ ಸೂಚಕರು ಸಿಗದ ಕಾರಣ ನಾಮಪತ್ರ ಯಾವಾಗ ಹಾಕಲು ಸಾಧ್ಯವಾಗಲಿಲ್ಲವೂ ಆಗಾ ನಾವುಗಳು ಪ್ರವೀನ್ ಹಾಗೂ ಶಾಸಕ ಕೊತ್ತೂರು ಮಂಜುನಾಥ್ ನಡುವೇ ನೇರ ಸ್ವರ್ಧೆ ಎಂದು ಭಾವಿಸಿದ್ದೇವು ಈ ಸಂದರ್ಭದಲ್ಲಿ ನಾವುಗಳು ವೈ.ಸಂಪಂಗಿ ಅವರನ್ನು ಸಂರ್ಪಕಿಸಲು ಪ್ರಯತ್ನಿಸಿ ವಿಫಲರಾದೇವು, ನಂತರ ಮಾಜಿ ಸಂಸದ ಮುನಿಸ್ವಾಮಿ ಅವರಿಗೆ ಕರೆ ಮಾಡಿದರೆ ಸಂಜೆ ಮಾತನಾಡೋಣಾ ಎಂದರು, ಸಂಜೆ ಕರೆ ಮಾಡಿದರೆ ಬೆಳಿಗ್ಗೆ ಮಾತನಾಡೋಣಾ ಎಂದರು. ಬ್ಯಾಲಹಳ್ಳಿ ಗೋವಿಂದಗೌಡೆರನ್ನು ಬೇಟಿ ಮಾಡಿದಾಗ ಅವರು ಸಂಪಂಗಿ ಮಗನಿಗೆ ಬೆಂಬಲಿಸೋಣಾ ಎಂದಿದ್ದರು.
ಅದರೆ ಮುನಿಸ್ವಾಮಿಗೆ ಸಂಜೆ ಕರೆ ಮಾಡಿದರೆ ಬೆಳಿಗ್ಗೆ ಮಾತನಾಡೋಣಾ ಎಂದಿದ್ದರು ಅದರೆ ಬೆಳಿಗ್ಗೆ ೧೦ ಗಂಟೆಗೆಲ್ಲಾ ಸಂಪಂಗಿ ಮಗ ಪ್ರವೀಣ್ ತಮ್ಮ ನಾಮಪತ್ರ ವಾಪಸ್ ಪಡೆದು ನಮಗೆ ದಿಗ್ಬ್ರಮೆ ಉಂಟು ಮಾಡಿದರು, ನಂತರ ನಮಗೆ ಗೊತ್ತಾಗಿದ್ದು ಬೆಳಿಗ್ಗೆ ೬ ಗಂಟೆಗೆ ಎಂ.ಎಲ್.ಸಿ. ಅನಿಲ್ ಕುಮಾರ್ ಶಿಷ್ಯ ಮೈಲಂಡಹಳ್ಳಿ ಮುರಳಿ ಬೆಂಗಳೂರಿನ ಪ್ರವೀಣ್ ಅವರ ಮನೆಗೆ ತೆರಳಿ ಜೂತೆಯಲ್ಲಿ ಕರೆದು ಕೊಂಡು ಬಂದು ನಾಮಪತ್ರ ವಾಪಸ್ ಪಡೆದರು. ಅವರೂ ಪ್ರವೀಣ್ ಮನೆಗೆ ಏಕೆ ಹೋಗಿದ್ದರು, ನಾಮಪತ್ರ ವಾಪಸ್ ಪಡೆದಿದ್ದು ಏಕೆಂದು ನಾವು ಬಾಯಿ ಬಿಟ್ಟು ಹೇಳಲ್ಲ ಅದನ್ನು ನೀವೇ ಉಹಿಸಿ ಕೊಳ್ಳಿ ಎಂದು ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿ ನುಣಿಚಿಕೊಂಡರು.
ಪಕ್ಷಕ್ಕೆ ಮೋಸ ಮಾಡುವುದು ತಾಯಿಗೂ ಮೋಸ ಮಾಡುವುದು ಎರಡು ಒಂದೇ, ಬಿಜೆಪಿ ಪಕ್ಷವೂ ಸಂಪಂಗಿಗೆ ಟಿಕೆಟ್ ನೀಡಿತು, ಅವರ ತಾಯಿ ರಾಮಕ್ಕ ಅವರಿಗೊ ಟಿಕೆಟ್ ನೀಡಿತು, ಮಗ ಪ್ರವೀಣ ಅವರಿಗೂ ತಾಲ್ಲೂಕು ಪಂಚಾಯಿತಿ ಸದಸ್ಯರನ್ನಾಗಿ ಮಾಡಿ ಪ್ರಸ್ತುತ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಅವಕಾಶ ಮಾಡಿ ಕೊಟ್ಟಿದ್ದರು ಅವರ ಗೆಲುವಿಗೆ ಜೆ.ಡಿ.ಎಸ್ ಹಾಗೂ ಕಾಂಗ್ರೇಸ್ ಸದಸ್ಯರೊಂದಿಗೆ ಲಾಭಿ ಮಾಡಿದ್ದು ಅವರ ಗೆಲವು ಶೇ ೧೦೦ರಷ್ಟು ಖಚಿತ ಇತ್ತು , ಪಕ್ಷದಲ್ಲಿ ಅವರು ಪಕ್ಷದಲ್ಲಿ ಬೆಳೆಯುವಂತ ವಿಪುಲವಾದ ಅವಕಾಶಗಳಿದ್ದವು ಅದರೆ ಪ್ರವೀಣ್ ನಾಮಪತ್ರವನ್ನು ಯಾರಿಗೋ ತಿಳಿಸದೆ ವಾಪಸ್ ಪಡೆಯುವ ಮೂಲಕ ಮರ್ಮಘಾತ ಉಂಟು ಮಾಡಿದರು ಇದನ್ನು ನಾವ್ಯಾರೂ ನಿರೀಕ್ಷಿಸರಿಲಿಲ್ಲ ಎಂದು ವಿಷಾದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದರಖಾಸ್ತು ಸಮಿತಿ ಮಾಜಿ ಅಧ್ಯಕ್ಷ ಬೆಗ್ಲಿ ಪ್ರಕಾಶ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಂಜನಪ್ಪ. ಜಿ.ಪಂ.ಮಾಜಿ ಸದಸ್ಯ ಅರುಣ್ ಪ್ರಸಾದ್, ಮುಖಂಡರಾದ ಪೆಟ್ರೋಲ್ ಬಂಕ್ ಮಂಜುನಾಥ್, ಸಿ.ಡಿ.ರಾಮಚಂದ್ರ, ತಂಬಳ್ಳಿ ಮುನಿಯಪ್ಪ, ನಗರಸಭೆ ಮಾಜಿ ಸದಸ್ಯ ಕಾಶಿ, ಮುಂತಾದವರು ಇದ್ದರು.