
ಸೈದಾಪುರ:ಜ.೪:ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕರು, ಪೋಷಕರು ಸೇರಿದಂತೆ ಎಲ್ಲರ ಸಹಕಾರ ಅತಿ ಮುಖ್ಯವಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಅಲ್ಲಾಭಾಷಾ ಹಿಚ್ಗೇರಿ ಅಭಿಪ್ರಾಯಪಟ್ಟರು.
ಪಟ್ಟಣದ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸಾವಿತ್ರಿ ಬಾಯಿ ಫುಲೆ ಜಯಂತಿ ಆಚರಣೆ ಹಾಗೂ ಶಿಕ್ಷಕರ ಪೋಷಕರ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಮೊಟ್ಟ ಮೊದಲ ಶಿಕ್ಷಕಿಯಾಗಿ, ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿ ಸಾವಿತ್ರಿ ಬಾಯಿ ಫುಲೆಯವರ ಸಾಧನೆ ಮಾದರಿಯಾಗಿದೆ. ನಾವು ಈ ದಿಸೆಯಲ್ಲಿ ಶಿಕ್ಷಣಕ್ಕ ಹೆಚ್ಚಿನ ಮಹತ್ವ ನೀಡುವ ಮೂಲಕ ಉತ್ತಮ ಸಮಾಜವನ್ನು ಕಂಡುಕೊಳ್ಳುವಲ್ಲಿ ಪ್ರಯತ್ನ ಮಾಡಬೇಕಾಗಿದೆ. ಇದಕ್ಕಾಗಿ ದಾಖಲಾತಿಯಂತೆ ಹಾಜರಾತಿ ಮುಖ್ಯವಾಗಿದ್ದೂ ಪೋಷಕರು ಮಕ್ಕಳ ಶಿಕ್ಷಣದ ಬಗಗೆ ಹೆಚ್ಚಿನ ಕಾಳಜಿ ವಹಿಸಬೇಕು. ಶಿಕ್ಷಕರು ನವೀನ ಬೋದನಾ ವಿಧಾನಗಳ ಮೂಲಕ ಕಲಿಕೆಯಲ್ಲಿ ಆಸ್ತಿಯನ್ನುಂಟು ಮಾಡಿದಾಗ ಮಾತ್ರ ಶಿಕ್ಷಣದ ಮಹತ್ವ ಹೆಚ್ಚಾಗುತ್ತದೆ ಎಂದು ಕಿವಿ ಮಾತುಗಳನ್ನು ಹೇಳಿದರು.
ಇದಕ್ಕೂ ಮುಂಚೆ ಯಾದಗಿರಿ ಉರ್ದು ಕ್ಲಸ್ಟರ ಮಟ್ಟದ ಕಲಿಕಾ ಹಬ್ಬದಲ್ಲಿ ಭಾಗವಹಿಸಿ ಗಣಿತ ಹಾಗೂ ಛದ್ಮಾ ವೇಷದಲ್ಲಿ ಪ್ರಥಮ ಸ್ಥಾನ ಪಡೆದ ನೂರಜಾನ, ಆಸೀಫಾ ಇವರುಗಳಿಗೆ ಅಭಿನಂದಿಸಿ ಇನ್ನೂ ಹೆಚ್ಚಿನ ಸಾಧನೆ ಇವರದಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷ ಗಪುರ ಖುರೇಶಿ, ಮುಖ್ಯಗುರುಗಳಾದ ಪರಕುಂದ ಬೇಗಂ, ಶಿಕ್ಷಕರಾದ ಖಾಜಾ ಬೇಗಮ, ಹಸೀನಾ ಬಾನು, ಪಾಲಕರಾದ ಹುಸೇನ್ ಪಟೇಲ, ಚಾಂದ ಪಾಷ, ಅಬ್ದುಲ್ ಹಫೀಸ್ ಸೇರಿದಂತೆ ಇತರರಿದ್ದರು.
























