
ಚನ್ನಮ್ಮನ ಕಿತ್ತುರು,ಡಿ.28: ಈ ಶತಮಾನೋತ್ಸವ ಆಚರಿಸುತ್ತಿರುವ ಈ ಶಾಲೆಯಲ್ಲಿ ಅನೇಕ ವಿದ್ಯಾರ್ಥಿಗಳು ಕಲಿತು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದು ಸಂತಸ ಆದರೆ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಸದ್ಯದಲ್ಲಿಯೇ ಸರ್ಕಾರ ಕೃಷಿ ಶಾಲೆ ಪ್ರಾರಂಭಿಸಲಿದೆ. ಎಂದು ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಕಲಂಭಾವಿ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ ಅಂಗಳದಲ್ಲಿ ಆಯೋಜಿಸಿದ್ದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಿತ್ತೂರು ಕ್ಷೇತ್ರಕ್ಕೆ ನಮ್ಮ ಇಲಾಖೆಯಿಂದ ಪ್ರತಿ ಸರ್ಕಾರಿ ಶಾಲೆಗಳಿಗೆ ಐದು ಕೊಠಡಿಗಳನ್ನು ಮಂಜೂರು ಮಾಡಲಾಗಿದ್ದು ಪ್ರಸ್ತುತ ಶತಮಾನೋತ್ಸವ ಆಚರಿಸುತ್ತಿರುವ ಕಲಂಭಾವಿ ಸರ್ಕಾರಿ ಶಾಲೆಗೆ ಎರಡು ಕೊಠಡಿಗಳನ್ನು ಕೊಡಲಾಗಿದೆ.
ಗ್ರಾಮೀಣ ಭಾಗದ ಶಾಲೆಗಳಿಗೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದ್ದು ಅವುಗಳನ್ನು ಉಳಿಸಿ-ಬೆಳೆಸುವ ಕೆಲಸ ಮಾಡುತ್ತಿದೆ. ಇನ್ನೂ ಹೆಚ್ಚಿನ ಅನುದಾನ ನೀಡಿ ಸರ್ಕಾರಿ ಶಾಲೆಗಳಿಗೆ ಉತ್ತನ್ನತಿಕರಣಗೊಳಿಸುತ್ತೇವೆ. ಹಳ್ಳಿಯ ಮಕ್ಕಳು ನಗರಕ್ಕೆ ಹೋಗಿ ಶಿಕ್ಷಣ ಪಡೆಯುವುದು ದುಬಾರಿ ಮತ್ತು ಕಷ್ಟಕರವಾಗುತ್ತಿದೆ. ಆದ್ದರಿಂದ ಹಳ್ಳಿಯ ಶಾಲೆಗಳು ಮುಚ್ಚದಂತೆ ಸರ್ಕಾರದ ಜೊತೆಗೆ ಗ್ರಾಮಸ್ಥರ, ಜನಪ್ರತಿನಿಧಿಗಳ. ಶಿಕ್ಷಕರ ಸಹಕಾರ ಮುಖ್ಯ. ಎಷ್ಟೇ ಶಾಲೆ ಕಲಿತರು ಸರ್ಕಾರಿ ಅಥವಾ ಖಾಸಗಿ ಕೆಲಸಗಳನ್ನು ನಂಬಿ ಕುಳಿತುಕೊಳ್ಳಬಾರದು. ಸದ್ಯದಲ್ಲಿ ಕೃಷಿಗೆ ಹೆಚ್ಚಿನ ಒತ್ತು ನೀಡಿ ರಸಾಯನಿಕ ಕಡಿಮೆ ಮಾಡಿ ಇದ್ದ ಜಮೀನಿನಲ್ಲಿಯೇ ಹೆಚ್ಚು ಆದಾಯ ಬರುವಂತೆ ನೋಡಿಕೊಳ್ಳಬೇಕು. ಇದನ್ನು ನಾವು ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಪಾಠ ಕಲಿಯಬೇಕು. ಅಂದಾಗ ಮಾತ್ರ ಕೃಷಿ ಉಳಿಯಲು ಸಾಧ್ಯವಾಗುತ್ತದೆ. ನಮ್ಮ ಆಶೆ ಸರ್ಕಾರಿ ಶಾಳೆಗಳಿಗೆ ಯಾವುದೇ ಕೊರತೆಯಾಗಬಾರದು ಸ್ಥಳೀಯ ಶಾಸಕರನ್ನೊಳಗೊಂಡು ಶಾಲೆಗಳಿಗೆ ಬೇಕಾದ ಸಹಾಯ ಸಹಕಾರ ನೀಡಲಾಗುವುದೆಂದರು.
ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ನಾನು ಶಿಕ್ಷಣ ಸಚಿವನಿದ್ದ ವೇಳೆ ಕಿತ್ತೂರು ಬಿಇಓ ಕಛೇರಿ ಪ್ರಾರಂಭಿಸಿದ್ದೆ. ಶಿಕ್ಷಣ ಕ್ಷೇತ್ರದಲ್ಲಿ ಈ ತಾಲೂಕು ರಾಜ್ಯದಲ್ಲಿಯೇ ಹೆಚ್ಚಿನ ಫಲಿತಾಂಶ ಸಂತಸ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಟ್ಟರೆ ಮುಂದೊಂದು ದಿನ ದೇಶದ ದೊಡ್ಡ ಶಕ್ತಿಯಾಗುತ್ತಾರೆ. ಶಿಕ್ಷಣದಿಂದ ದೇಶ ಆಳಬಲ್ಲ ವ್ಯಕ್ತಿಯಾಗುತ್ತಾನೆಂದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ನನ್ನ ಮೊದಲ ಆದ್ಯತೆ ಶಿಕ್ಷಣಕ್ಕೆ. ಶಿಕ್ಷಣದ ಜೊತೆಗೆ ಕೃಷಿಗೆ ಒತ್ತು ನೀಡಿ. ಶಿಕ್ಷಣವಿದ್ದರೆ ಕೃಷಿ ಮಾಡಲು ಸಹಾಯವಾಗುತ್ತದೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಹಿಂದೆ ಬೀಳಬಾರದು. ಸರ್ಕಾರಿ ಶಾಲೆಗಳಿಗೆ ಬೇಕಾದ ಎಲ್ಲ ಸಹಾಯ ಸರ್ಕಾರ ನೀಡುತ್ತಿದೆ. ಕಾಲ-ಕಾಲಕ್ಕೆ ತಕ್ಕಂತೆ ಶಿಕ್ಷಣದ ವ್ಯವಸ್ಥೆಯು ಬದಲಾಗುತ್ತಿದೆ. ಆದ್ದರಿಂದ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ ಉತ್ತಮ ಲಾಭಪಡೆದುಕೊಂಡು ಮುಂದೆ ಬನ್ನಿ ಎಂದು ತಿಳಿಸಿದರು.
ನಯಾನಗರದ ಸುಖದೇವಾನಂದ ಆಶ್ರಮದ ಸಿದ್ದಲಿಂಗ ಸ್ವಾಮಿಜೀ ಆರ್ಶೀವಚನದ ಜೊತೆಗೆ ಮಾತನಾಡಿ ಈ ಊರಿನಲ್ಲಿ ಶಾಲಾ ಶತಮಾನೋತ್ಸವದಲ್ಲಿ ಶಾಲಾ ಜಾತ್ರೆ ಮಾಡುತ್ತಿದ್ದೀರಿ. ಊರಿನಲ್ಲಿ ಶಾಲಾ ಒಳ್ಳೆಯದಾಗಬೇಕಾದರೆ ಇಲ್ಲಿ ಶಿಕ್ಷಕರು ಒಳ್ಳೆಯವರಿದ್ದಾರೆ ಎಂದರ್ಥ. ಸರ್ಕಾರಿ ಶಾಲೆಗಳು ಬೆಳೆಯಲಿ ಮಕ್ಕಳು ಬೆಳೆಯಲೆಂದರು. ವಿದ್ಯಾರ್ಥಿ ಮತ್ತು ಅತಿಥಿಗಳನ್ನು ಸತ್ಕರಿಸಲಾಯಿತು.
ವಿಪ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಭೂ-ದಾನಿ ಶಿವಪ್ಪ ನಂದೆನ್ನವರ, ಹೈಕೋರ್ಟ ನ್ಯಾಯವಾದಿ ಅನುಪ ದೇಶಪಾಂಡೆ ಮಾತನಾಡಿದರು. ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಸೋ.ಸ.ಸ.ಕಾರ್ಖಾನೆ ಅಧ್ಯಕ್ಷ ಬಸವರಾಜ ಬಾಳೇಕುಂದರಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ. ತುಬಾಕದ, ಗ್ರಾಪಂ ಅಧ್ಯಕ್ಷೆ ಶಿವನವ್ವ ಕರಡಿ, ಎಸ್‍ಡಿಎಂಸಿ ಅಧ್ಯಕ್ಷ ಶಂಕರ ಪೂಜೇರ, ಊಟದ ವ್ಯವಸ್ಥೆ ರಾಜೇಂದ್ರ ಇನಾಮದಾರ, ಗಾಯತ್ರಿ ಅಜ್ಜನ್ನವರ, ಚನ್ನಬಸಪ್ಪ ಮೊಕಾಶಿ, ಹಬೀಬ ಶಿಲ್ಲೇದಾರ, ಜ್ಯೋತ್ಯೇಪ್ಪ ಜೀವೋಜಿ, ಬಾಬಾಜಾನ ಬೆಳವಡಿ, ಬಸಪ್ಪ ಹುಣಸ್ಯಾಳ, ಈರಣ್ಣಾ ಕರಡಿ, ಹೂವಪ್ಪ ಬೋಗೂರ, ಪಿಡಿಓ ಜಯರಾಮ ಕಾದ್ರೋಳ್ಳಿ, ಎಸ್‍ಡಿಎಂಸಿ, ಗ್ರಾಪಂ ಸರ್ವ ಸದಸ್ಯರು, ಶಿಕ್ಷಕರು, ಮಕ್ಕಳು, ಗ್ರಾಮಸ್ಥರು, ಇನ್ನಿತರರಿದ್ದರು.






















