
ಕಲಬುರಗಿ:ಜ.25: ಸಹಾಯ ಹಸ್ತ (ಹೆಲ್ಪಿಂಗ್ ಹ್ಯಾಂಡ್ಸ್) ಸಾಮಾಜಿಕ ಮತ್ತು ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ಐನೊಳ್ಳಿ ಹಾಗೂ ವಿದ್ಯಾರ್ಥಿಗಳ ಒಕ್ಕೂಟ ತಾಲೂಕು ಸಮಿತಿ ಚಿಂಚೋಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಚಿಂಚೋಳಿ ತಾಲೂಕಿನ ಚಿಮ್ಮುನಚೋಡ್ ಪಟ್ಟಣದಲ್ಲಿ ನಿರ್ಗತಿಕರಿಗೆ ಬ್ಲಾಂಕೆಟ್‍ಗಳನ್ನು ನಾಸಿರ್ ಅನ್ಸಾರಿ ಅವರು ವಿತರಿಸಿ ಮಾತನಾಡುತ್ತಾ ಬ್ಲಾಂಕೆಟ್‍ಗಳನ್ನು ವಿತರಿಸುವುದು ಹಾಗೂ ಇತರೆ ಸಾಮಾಜಿಕ ಮಾದರಿ ಕೆಲಸಗಳಿಗೆ ಎಲ್ಲರ ಸಹಕಾರ ಬೆಂಬಲ ಅವು ಇದ್ದರೆ ಸಂಘ ಸಂಸ್ಥೆಗಳ ಸಂಘಟನೆಗಳ ಸಹಕಾರವು ಇದ್ದಾಗ ಇಂತಹ ನೂರಾರು ಸಾಮಾಜಿಕ ಕೆಲಸಗಳನ್ನು ಮಾಡಬಹುದಾಗಿದೆ ಎಂದು ಸಹಾಯ ಹಸ್ತ ಸಾಮಾಜಿಕ ಮತ್ತು ಶೈಕ್ಷಣಿಕ ಚಾರಿಟಬಲ್ ಟ್ರಸ್ಟ್ ಐನೊಳ್ಳಿ ಅಧ್ಯಕ್ಷ ನಾಸಿರ್ ಅನ್ಸಾರಿ ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾದ ಶರಣು ತೇಗಲತಿಪ್ಪಿ ಮಾತನಾಡಿ ಎಲ್ಲಾ ಸಂಘಟನೆಗಳ ಸಹಕಾರ ಬೆಂಬಲ ವಿದ್ದಾಗ ಸಾಮಾಜಿಕ ಮಾದರಿ ಕೆಲಸಗಳಲ್ಲದೆ ಇತರೆ ಗುರಿ ಸಾಧನೆಗಳುನ್ನು ಸರಳವಾಗಿ ಸಾಧಿಸಿ ಸದೃಢ ಸಮಾಜವನ್ನು ನಿರ್ಮಾಣ ಮಾಡಬಹುದಾಗಿದೆ ಎಂದರು.
ಅದೇ ರೀತಿಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಯಲ್ಲಾಲಿಂಗ ದಂಡಿನ ಮಾತನಾಡಿ ಒಗ್ಗಟ್ಟಿನಲ್ಲಿ ಬಲವಿದೆ ಇದರಿಂದ ಮಹತ್ತರ ಕಾರ್ಯ ಸಾಧಿಸಬಹುದಾಗಿದೆ ಎಂದರು.
ನವ ಕರ್ನಾಟಕ ಜನಪರ ಸಮಿತಿ ಅಧ್ಯಕ್ಷ ಶಿವಪ್ರಕಾಶ್ ಕಟ್ಟಿಮನಿ ಅವರು ಮಾತನಾಡಿ ಇಂತಹ ಜನಪರವಾದ ಕಾರ್ಯಗಳಿಗೆ ಯಾವಾಗಲೂ ನವ ಕರ್ನಾಟಕ ಜನಪರ ಸಮಿತಿಯ ಬೆಂಬಲ ಸಹಕಾರ ಯಾವಾಗಲೂ ಇರುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಒಕ್ಕೂಟ ಉಪಾಧ್ಯಕ್ಷರಾದ ವಾಸಿ ಅಕ್ರಂ ಅವರು ಮಾತನಾಡಿ ಇಂದಿನ ಈ ಕಾರ್ಯಕ್ರಮಗಳು ಅಲ್ಲದೆ ಈ ಟ್ರಸ್ಟಿ ನಿಂದ ಚಿಂಚೋಳಿ ನಗರದಲ್ಲಿ ಬ್ಲಾಂಕೆಟ್ ವಿತ್ತರಿಸುವ ಕಾರ್ಯ ಮಾಡಲಾಗಿದೆ ಹಾಗೂ ಇತರೆ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಅಶೋಕ್ ಬಾಬು ಕಲ್ಲುರೋಡ್, ಗೌರವ ಅಧ್ಯಕ್ಷರಾದ ಪ್ರವೀಣ್ ಕನಕಪುರ, ಟ್ರಸ್ಟಿನ ಉಪಾಧ್ಯಕ್ಷರಾದ ಮುಜಮಿಲ್, ಕಾರ್ಯದರ್ಶಿಗಳಾದ ಅಯಾಜ್,
ಡಿ.ಎಸ್.ಎಸ್ ಮುಖಂಡರಾದ ಮಾರುತಿ ತೇಗಲತಿಪ್ಪಿ, ಪುಟ್ಟು ಬೀರನಹಳ್ಳಿ, ನಾಗೇಶ್ ಪಿತ್ತಲ್, ನಾಗೇಶ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಸಚಿನ ಹಾಗೂ ಕಾರ್ತಿಕ್ ಕಲ್ಲೂರ್‍ರೋಡ್, ಆನಂದ್, ಸ್ಥಳೀಯ ಮುಖಂಡರಾದ ಪ್ರಶಾಂತ್ ಖಾನಾಪುರ್, ದಲಿತ ಸೇನೆ ಮುಖಂಡರಾದ ರಘು ಚಿಮ್ಮನಚೋಡ್, ಮುಖಂಡರಾದ ರಾಹುಲ್ ನೂಲ್ಕರ್, ಮೋಹನ್ ಸೇರಿದಂತೆ ಇತರರಿದ್ದರು.























