ನಾಡಿನ ಹಿರಿಮೆ ಎಲ್ಲರೂ ಎತ್ತಿ ಹಿಡಿಯಬೇಕು: ಲಿಂಬಾವಳಿ

ಕೆ.ಆರ್.ಪುರ, ನ.೨೪-ಕನ್ನಡ ನಾಡು ನುಡಿಯ ರಾಜ್ಯೋತ್ಸವ ಹಬ್ಬವನ್ನು ಅಭಿಮಾನದೊಂದಿಗೆ ಬಹಳ ಅದ್ದೂರಿಯಾಗಿ ಆಚರಿಸುವ ಮೂಲಕ ನವೆಂಬರ್ ತಿಂಗಳು ಪೂರ್ತಿ ರಾಜ್ಯ ಕನ್ನಡಮಯ ಆಗಿರುವುದು ಬಹಳ ಸಂತೋಷದ ಸಂಗತಿ, ನಮ್ಮ ನಾಡಿನ ಹಿರಿಮೆಯನ್ನು ನಾವೆಲ್ಲರೂ ಎತ್ತಿ ಹಿಡಿಯುವ ಕೆಲಸ ಯುವಕರು ಮಾಡಬೇಕು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ತಿಳಿಸಿದರು.


ಮಹದೇವಪುರ ಕ್ಷೇತ್ರದ ವರ್ತೂರು ಮುಖ್ಯ ರಸ್ತೆ ಬಳಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಸಂಸ್ಕೃತಿಯ ಉಳಿವಿಗೆ ನಾವೆಲ್ಲರೂ ಬದ್ಧರಾಗಿರಬೇಕು, ಆ ಮೂಲಕ ಶ್ರೀಮಂತ ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ಮಾಡುವಂತೆ ಮನವಿ ಮಾಡಿದರು.


ರಾಜ್ಯೋತ್ಸವ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಿ ಅರ್ಥಪೂರ್ಣವಾಗಿ ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಆಯೋಜಕ ಹಾಗೂ ವರ್ತೂರು ವಾರ್ಡನ ಕಾಮಗಾರಿ ಉಸ್ತುವಾರಿ ವಿ.ಪಿ.ರಕ್ಷೀತ್, ಮಂಡಲ ಅಧ್ಯಕ್ಷರಾದ ಶ್ರೀಧರ ರೆಡ್ಡಿ, ಅಧ್ಯಕ್ಷರಾದ ಶ್ರೀ ಹೆಚ್ ಎಸ್ ಪಿಳ್ಳಪ್ಪ, ರಾಜ್ಯ ಪರಿಷತ್ ಸದಸ್ಯ ಎಲ್.ರಾಜೇಶ್, ಮುಖಂಡರಾದ ಮಹೇಂದ್ರ ಮೋದಿ, ವರ್ತೂರು ಶ್ರೀಧರ್,ಚಿಕ್ಕಣ್ಣ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.