ಪರಿಸರ ಬಗ್ಗೆ ಎಲ್ಲರೂ ಕಾಳಜಿ ವಹಿಸಿ: ಶಿವಕುಮಾರ್ ಘಾಟೆ

ಬೀದರ್: ಜೂ.6:ಗುಡಪಳ್ಳಿ ಗ್ರಾಮ ಪಂಚಾಯತಿಯಲ್ಲಿ ಗುರುವಾರ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭೆ ಹಾಗೂ ಪರಿಸರ ದಿನಾಚರಣೆಯ ಅಂಗವಾಗಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಿರೀಶ್ ಬದೋಳೆ ಮತ್ತು ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್ ಹೆಸರಿನಲ್ಲಿ ಸಸಿ ನಡಿಸುವ ಮೂಲಕ ಸಾಮಾಜಿಕ ಪರಿಶೋಧನೆಗೆ ಮಾನ್ಯ ಶಿವಕುಮಾರ್ ಘಾಟೆ ಸರ್ ಚಾಲನೆ ನೀಡಿದರು
ಸಭೆಯಲ್ಲಿ ಭಾಗವಹಿಸಿ ಕಡತಗಳನ್ನು ಪರಿಶೀಲಿಸಿ ನರೇಗಾ ಅಡಿ ಕೈಗೊಂಡ ಕಾಮಗಾರಿ ವೀಕ್ಷಿಸಿ, ಸಸಿ ನೆಟ್ಟು ಮಾತನಾಡಿದ ಅವರು ನರೇಗಾ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ ಎಲ್ಲರೂ ಪರಿಸರ ಬಗ್ಗೆ ಕಾಳಜಿ ವಹಿಸಬೇಕು. ಸಸಿ ನೆಟ್ಟು ಅದನ್ನು ಪೆÇೀಷಿಸಬೇಕು. ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗದೆ ತಮ್ಮ ಸ್ವಂತ್ ಗ್ರಾಮದಲ್ಲಿ ನರೇಗಾ ಉದ್ಯೋಗ ಪಡೆದು ಕೆಲಸ ಮಾಡಬೇಕು ಎಂದು ತಿಳಿಸಿದರು.

ಗುಡಪಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ್ ಮಾತನಾಡಿ, ಇತ್ತೀಚಿಗೆ ನಾಗರೀಕರಣದಿಂದ ಪರಿಸರ ಸಾಕಷ್ಟು ನಾಶವಾಗುತ್ತಿದೆ ಇದನ್ನು ರಕ್ಷಣೆ ಮಾಡಲು ಮುಂದಾಗಬೇಕು. ಎಲ್ಲರೂ ನರೇಗಾ ಯೋಜನೆ ಲಾಭ ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿಗಳು ಸೇರಿದಂತೆ ಇನ್ನಿತರ ಗ್ರಾಮಸ್ಥರು ಹಾಜರಿದ್ದರು.